ರಾಜಕೀಯ

ಕರ್ನಾಟಕದಲ್ಲಿ ಗೂಂಡಾ ಸರ್ಕಾರ ಅಧಿಕಾರದಲ್ಲಿದೆ: ಪ್ರಕಾಶ್ ಜಾವಡೆಕರ್

Lingaraj Badiger
ಕಾರವಾರ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಪಕ್ಷಗಳ ನಡುವಿನ ಸ್ಪರ್ಧೆಯಲ್ಲ. ಇದು ಗೂಂಡಾ ಸಂಸ್ಕೃತಿ ಮತ್ತು ಉತ್ತಮ ಆಡಳಿತಗಳ ನಡುವಿನ ಸ್ಪರ್ಧೆಯಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ಕೇಂದ್ರರ ಸಚಿವ ಪ್ರಕಾಶ್ ಜಾವಡೆಕರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಕಾರವಾರದಲ್ಲಿ ಬಿಜೆಪಿಯ ‘ಮಂಗಳೂರು ಚಲೋ’ಜನ ಸುರಕ್ಷಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಪ್ರಕಾಶ್ ಜಾವಡೆಕರ್ ಅವರು, ಕರ್ನಾಟಕದಲ್ಲಿ ಗೂಂಡಾ ಸರ್ಕಾರ ಅಧಿಕಾರದಲ್ಲಿ. ಎಲ್ಲೆಡೆ ಸಜ್ಜನರ ರಕ್ಷಣೆಗೆ, ದುರ್ಜನರ ಶಿಕ್ಷೆಗೆ ಪೊಲೀಸರಿದ್ದಾರೆ. ಆದರೆ, ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆಯಿಲ್ಲ ಎಂದು ಆರೋಪಿಸಿದರು.
ಈ ಬಾರಿಯ ವಿಧಾನಸಭಾ ಚುನಾವಣೆ ಪಕ್ಷಗಳ ನಡುವಿನ ಪೈಪೋಟಿಯಲ್ಲ. ಇದು ಗೂಂಡಾ ಸಂಸ್ಕೃತಿ ಮತ್ತು ಉತ್ತಮ ಆಡಳಿತಗಳ ನಡುವಿನ ಸ್ಪರ್ಧೆಯಾಗಿದೆ. ಎಲ್ಲರನ್ನು ಒಳಗೊಂಡು ಮುಂದುವರಿಯುವುದು ಬಿಜೆಪಿಯ ಸಂಸ್ಕೃತಿ. ಕಾಂಗ್ರೆಸ್‌ನದ್ದು ಒಡೆದು ಆಳುವ ನೀತಿ ಎಂದು ಟೀಕಿಸಿದರು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿ, 'ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ ಹಿಂದೆಂದೂ ಆಗದಷ್ಟು ಕೊಲೆ, ಅತ್ಯಾಚಾರಗಳು, ಹಲ್ಲೆ ಪ್ರಕರಣಗಳಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು. 
SCROLL FOR NEXT