ಪುತ್ತೂರು: ಅಯ್ಯಪ್ಪ ಸ್ವಾಮಿ ಭಕ್ತಿಗೀತೆಯನ್ನೇ ಅನುಸರಿಸಿ ಚುನಾವಣಾ ಪ್ರಚಾರಕ್ಕಾಗಿ ಹಾಡೊಂದನ್ನು ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಶಾಸಕ ಮೊಯಿದ್ದೀನ್ ಬಾವಾ ವಿರುದ್ಧ ಪೋಲೀಸ್ ದೂರು ದಾಖಲಾಗಿದೆ.
ಅಯ್ಯಪ್ಪ ಸ್ವಾಮಿ ಭಕ್ತಿಗೀತೆಗೆ ಅವಮಾನವೆಸಗಿ ಹಿಂದೂಗಳ ಬಾವನೆಗಳಿಗೆ ಘಾಸಿ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಪುತ್ತೂರು ನಗರ ಠಾಣೆಯಲ್ಲಿ ಶಾಸಕರ ವಿರುದ್ಧ ದೂರು ದಾಖಲಿಸಿದ್ದಾರೆ.
ಅಯ್ಯಪ್ಪ ಸ್ವಾಮಿಯ ಕುರಿತ ಕಲ್ಲು ಮುಳ್ಳು ಶಬರಿಮಲೆಕ್ಕ್ ಎನ್ನುವ ಪ್ರಸಿದ್ಧ ಗೀತೆಯನ್ನು ಅನುಸರಿಸಿ ಮೊಯ್ದೀನ್ ಬಾವಾ ಹೆಸರಿನಲ್ಲಿ ಹಾಡೊಂದನ್ನು ರಚಿಸಲಾಗಿದೆ. ಈ ಹಾಡು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಇದರಲ್ಲಿ ಶಾಸಕರನ್ನು ಹೊಗಳಲಾಗಿದೆ. ಬಹು ಬೇಗ ಪ್ರಚಾರವಾಗಲಿ ಎನ್ನುವ ಉದ್ದೇಶದೊಡನೆ ಅಯ್ಯಪ್ಪ ಸ್ವಾಮಿ ಭಕ್ತಿಗೀತೆ ಶೈಲಿಯಲ್ಲಿ ಇದನ್ನು ಹಾಡಲಾಗಿದೆ. ಶಾಸಕರ ಕುರಿತ ಈ ಗೀತೆಗೆ ಹಿಂದೂಪರ ಸಂಘಟನೆಗಳಿಂದ ಬಾರೀ ಆಕ್ರೋಶ ವ್ಯಕ್ತವಾಗಿತ್ತು.
ಶಾಸಕರು ತಮ್ಮ ಪ್ರಚಾರಕ್ಕಾಗಿ ಬಳಸಿರುವ ಗೀತೆ ಹಿಂದೂಗಳ ಭಾವನೆಯನ್ನು ಘಾಸಿ ಮಾಡುತ್ತದೆ. ಹಿಂದೂ ದೇವರಿಗೆ ಶಾಸಕರು ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿತ್ತು.
ಶಾಸಕ ಬಾವಾ, ಕ್ಷೇತ್ರದಲ್ಲಿ ನಡೆಸಿದ್ದ ಅಭಿವೃದ್ಧಿ ಕಾರ್ಯಕ್ರಮಗಳ ವಿವರವನ್ನು ತುಳುವಿನಲ್ಲಿ ತಿಳಿಸುವ ಈ ಹಾಡು ಅಯ್ಯಪ್ಪ ಸ್ವಾಮಿಯ ಭಕ್ತರ ಕೋಪಕ್ಕೆ ಕಾರಣವಾಗಿತ್ತು.