50,000 ರೂಪಾಯಿ ಖರ್ಚು ಮಾಡಿ ಶೌಚಾಲಯವನ್ನು ಬಳಸುವ ರೀತಿ ಮಾಡಿದ ಗಂಗಪ್ಪ ತಲ್ವರೆ 
ರಾಜಕೀಯ

ಶೌಚಾಲಯವಿದ್ದರೂ ಬಳಸಲಾಗದ ಪರಿಸ್ಥಿತಿ: ಇದು ಅಫ್ಜಲ್ ಪುರದ ಕಥೆ

ರಾಜ್ಯ ಹೆದ್ದಾರಿಯಲ್ಲಿ ರಾಜು ಪಾಟೀಲ್ ಅವರ ಟೀ ಅಂಗಡಿಯಿದೆ. ಅಫ್ಜಲ್ ಪುರದ ...

ಕಲಬುರಗಿ: ರಾಜ್ಯ ಹೆದ್ದಾರಿಯಲ್ಲಿ ರಾಜು ಪಾಟೀಲ್ ಅವರ ಟೀ ಅಂಗಡಿಯಿದೆ. ಅಫ್ಜಲ್ ಪುರದ ಡಿಕ್ ಸಂಘ ಬಿ ಗ್ರಾಮದ ಪ್ರವೇಶದಲ್ಲಿರುವ ಈ ಟೀ ಅಂಗಡಿಯಲ್ಲಿ ಸಾಯಂಕಾಲದ ಹೊತ್ತು ಸುತ್ತಮುತ್ತಲಿನ ಗ್ರಾಮಸ್ಥರು ಒಟ್ಟುಸೇರಿ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡುತ್ತಾರೆ.

ಇಲ್ಲೊಂದು ಶಾಲೆಯಿದೆ, ಆಸ್ಪತ್ರೆಯಿದೆ, ನೀರಿನ ಸೌಕರ್ಯವೂ ಇದೆ. ಆದರೆ ಶೌಚಾಲಯದ ಸೌಲಭ್ಯದ ಅಗತ್ಯವಿದೆ ಎನ್ನುತ್ತಾರೆ ನಿವಾಸಿಗಳು. ಗ್ರಾಮ ಪಂಚಾಯತ್ ವತಿಯಿಂದ ಇರುವ ಶೌಚಾಲಯಗಳ ತೊಟ್ಟಿ ತುಂಬಾ ಚಿಕ್ಕದಾಗಿದೆ. ಹೀಗಾಗಿ ಶೌಚಾಲಯಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿ ರಾಜು. ಗ್ರಾಮದಲ್ಲಿ ಕಸಕಡ್ಡಿಗಳನ್ನು ಹೋಗಲಾಡಿಸಲು ಒಳಚರಂಡಿ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ಮಹಿಳೆಯರು ಬಹಿರ್ದೆಸೆಗೆ ಬಯಲಿಗೆ ಹೋಗಬೇಕಾಗುತ್ತದೆ ಎನ್ನುತ್ತಾರೆ ಅವರು.

1985ರಿಂದ ಇಲ್ಲಿಯವರೆಗೆ ಏಳು ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಮಲ್ಲಿಕಯ್ಯ ವೆಂಕಯ್ಯ ಗುತ್ತೇದಾರ್ ಆರು ಬಾರಿ ಗೆದ್ದಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದರಿಂದ ಪಕ್ಷ ತ್ಯಜಿಸಿದ್ದರು. ನಂತರ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಪ್ರಿಯಾಂಕ್ ಖರ್ಗೆಯವರಿಗೆ ಐಟಿ/ಬಿಟಿ ಖಾತೆ ನೀಡಲಾಯಿತು. ಮೇ 12ರ ಚುನಾವಣೆಗೆ ಮಲ್ಲಿಕಯ್ಯ ಗುತ್ತೇದಾರ್ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಸಿಕ್ಕಿದ್ದು ಬಿಜೆಪಿ ನಾಯಕ ಎಂ.ವೈ.ಪಾಟೀಲ್ ಕಾಂಗ್ರೆಸ್ ಗೆ ವಲಸೆ ಹೋಗಿದ್ದಾರೆ.

ಇಲ್ಲಿನ ಶೌಚಾಲಯಗಳನ್ನು ಬಳಕೆ ಮಾಡಲಾಗಿರುವುದು ಗ್ರಾಮಸ್ಥರ ಅತಿದೊಡ್ಡ ಸಮಸ್ಯೆಯಾಗಿದೆ. ಸೊಚರ ಸಮುದಾಯ ಆರೋಗ್ಯ ಅಭಿಯಾನದಲ್ಲಿದಲ್ಲಿ ಕೆಲಸ ಮಾಡುತ್ತಿರುವ ಪ್ರಹ್ಲಾದ್ ಹೇಳುವ ಪ್ರಕಾರ, ಜೇನಿನ ಗೂಡಿನಂತೆ ಶೌಚಾಲಯಗಳನ್ನು ವಿನ್ಯಾಸಗೊಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT