ರಾಜಕೀಯ

ಪ್ರತ್ಯೇಕ ಲಿಂಗಾಯತ ಧರ್ಮ ಚುನಾವಣಾ ವಿಷಯ ಅಲ್ಲ: ಸಿಎಂ ಸಿದ್ದರಾಮಯ್ಯ

Lingaraj Badiger
ಕಲಬುರ್ಗಿ: ಪ್ರತ್ಯೇಕ ವೀರಶೈವ-ಲಿಂಗಾಯಿತ ಸ್ವತಂತ್ರ ಧರ್ಮದ ಮಾನ್ಯತೆಗೆ ಶಿಫಾರಸು ಮಾಡಿರುವುದು ಚುನಾವಣೆ ವಿಷಯವೇ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಲಿಂಗಾಯತ ವಿಷಯದಲ್ಲಿ ನಾನು ಹೀರೋನೂ ಅಲ್ಲ, ಜೀರೋನೂ ಅಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆ ಇತ್ತು. ಆ ಶಿಫಾರಸನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ ಅಷ್ಟೇ ಎಂದರು.
ಇದೇ ವೇಳೆ ಬಿಜೆಪಿ ಜತೆ ಕೈಜೋಡಿಸಿದರೆ ಮಗನನ್ನು ಹೊರ ಹಾಕುತ್ತೇನೆ ಎಂದಿದ್ದ ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಹೇಳಿಕೆ ಪ್ರತಿಕ್ರಿಯಿಸಿದ ಸಿಎಂ, 2006ರಲ್ಲಿ ಕೂಡ ದೇವೇಗೌಡರು ಹೀಗೆಯೇ ಹೇಳಿದ್ದರು. ಬಿಜೆಪಿ ಜತೆ ಸರ್ಕಾರ ರಚಿಸುವುದಾದರೆ ನನ್ನ ಹೆಣದ ಮೇಲೆ ರಚಿಸು ಎಂದಿದ್ದರು. ಈ ಬಗ್ಗೆ ನಾನು ಮಾತನಾಡಲ್ಲ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಅವರು ಇಂತಹ ಹೇಳಿಕೆ, ಸಂದೇಶಗಳನ್ನು ರವಾನಿಸುತ್ತಾರೆ ಎಂದರು.
ಇನ್ನು ಮಾಧ್ಯಮಗಳ ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಸಿಫೋರ್ ಚುನಾವಣಾ ಪೂರ್ವ ಸಮೀಕ್ಷೆ ನಮ್ಮ ಪರವಾಗಿದೆ ಬಂದಿದೆ. ಆದರೆ ಅದು ಅಂತಿಮ ಅಲ್ಲ. ಸಮೀಕ್ಷೆಗಳು ಒಮ್ಮೆ ಪರ, ಮತ್ತೊಮ್ಮೆ ವಿರುದ್ಧ ಬರುತ್ತವೆ. ಹೀಗಾಗಿ ನಾವು ಸಮೀಕ್ಷೆಗಳನ್ನು ನಂಬುವುದಿಲ್ಲ. ವಾಸ್ತವ ಅಂಶವನ್ನು ನಂಬುತ್ತೇವೆ ಎಂದರು.
SCROLL FOR NEXT