ಶಿವಮೊಗ್ಗ(ಶಿಕಾರಿಪುರ): ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದಿಂದ ಸತತ ಏಳನೇ ಬಾರಿಗೆ ಶಾಸಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಈ ಬಾರಿಯೂ 30 ಸಾವಿರದಿಂದ 40 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಮಲೆನಾಡು ಪ್ರದೇಶವಾಗಿರುವ ಶಿವಮೊಗ್ಗದ ಶಿಕಾರಿಪುರ ಕ್ಷೇತ್ರದ ಜನರು ಈ ಬಾರಿ ಕೂಡ ಯಡಿಯೂರಪ್ಪನವರಿಗೆ ಗೆಲುವು ಸುಲಭವಾಗಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅವರು ಇಷ್ಟು ವರ್ಷಗಳ ಕಾಲ ಬೇರೆ ರಾಜಕೀಯ ನಾಯಕರಂತೆ ಕ್ಷೇತ್ರ ಬದಲಿಸದೆ ಒಂದೇ ಕ್ಷೇತ್ರಕ್ಕೆ ಬದ್ಧರಾಗಿರುವುದು.
ಈ ಬಾರಿ ಕಾಂಗ್ರೆಸ್ ಇಲ್ಲಿ ದುರ್ಬಲ ಅಭ್ಯರ್ಥಿ ಗೋಣಿ ಮಾಲತೇಶ್ ಅವರನ್ನು ಕಣಕ್ಕಿಳಿಸಿದ್ದು ಜೆಡಿಎಸ್ ಹೆಚ್ ಟಿ ಬಳಿಗಾರ್ ಅವರನ್ನು ಸ್ಪರ್ಧಾ ಕಣಕ್ಕಿಳಿಸಿದೆ. ಇವರು ಸ್ವಲ್ಪ ಪ್ರಬಲ ಸ್ಪರ್ಧಿ ಎನ್ನಲಾಗುತ್ತಿದೆ.
ಕಳೆದ ಐದು ವರ್ಷಗಳಿಂದ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ನೀರಿನ ಸೌಕರ್ಯ, ಹೊಸ ಮೈದಾನಗಳ ನಿರ್ಮಾಣ, ಬಸ್ ನಿಲ್ದಾಣ ಮತ್ತು ವಸತಿ , ಪ್ರತಿ ವಾರ್ಡುಗೆ ಎರಡರಿಂದ ಮೂರು ಪಾರ್ಕ್ ಗಳು, ಹೊಸ ಕಲಾಮಂದಿರ, ಪುಷ್ಕರಿಣಿ ದೇವಸ್ಥಾನದ ಅಭಿವೃದ್ಧಿ ಇತ್ಯಾದಿಗಳನ್ನು ಕೈಗೊಂಡಿದ್ದಾರೆ.
ಆದರೆ ಶಿಕಾರಿಪುರ ಮತ್ತು ಸಾಗರ ತಾಲ್ಲೂಕುಗಳಿಗೆ ಎರಡು ಏತ ನೀರಾವರಿ ಯೋಜನೆಗಳನ್ನು ಮಾಡಿ ಅಲ್ಲಿನ ಬರ ಪ್ರದೇಶಗಳಿಗೆ ನೀರುಣಿಸಬೇಕಾಗಿತ್ತು. ಅದಕ್ಕೆ ಸುಮಾರು 1000 ಕೋಟಿ ರೂಪಾಯಿ ನಿಗದಿಪಡಿಸಬೇಕಾಗಿತ್ತು ಅದು ಅನೇಕ ಕಾರಣಗಳಿಂದ ಕಾರ್ಯಗತವಾಗಿಲ್ಲ. ಶಿಕಾರಿಪುರ ಪಟ್ಟಣದ ಹೊರಗೆ ಶಿಕಾರಿಪುರ ಪಟ್ಟಣದ ಹೊರಗೆ ಅಭಿವೃದ್ಧಿ ಹೊಂದಿದ ರಸ್ತೆಯಲ್ಲಿ ಟ್ರಾಕ್ಟರ್ ನಲ್ಲಿ ಮದುವೆಗೆ ಬರುತ್ತಿದ್ದವರನ್ನು ತಡೆದು ನಿಲ್ಲಿಸಿ ನಮ್ಮ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಮುಂಬರುವ ಚುನಾವಣೆ ಬಗ್ಗೆ ಕೇಳಿದಾಗ, ಮದುವೆಗೆ ಹೋಗಲು ತಡವಾಗುತ್ತಿದೆ ಎಂದರು.
ಲಿಂಗಾಯತರು ಹೆಚ್ಚಾಗಿರುವ ಇಲ್ಲಿ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸುತ್ತದೆ ಎಂದು ಒಕ್ಕೊರಲಿನಿಂದ ನುಡಿದರು. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಖ್ಯಾತ ಹುಚ್ಚರಾಯ ಸ್ವಾಮಿ ದೇವಸ್ಥಾನದಲ್ಲಿ ಯುವ ಕಾರ್ಯಕರ್ತರು ಪ್ರಸಾದ ಹಂಚುತ್ತಿದ್ದರು. ಅವರನ್ನು ಪ್ರತಿನಿಧಿ ಮಾತನಾಡಿಸಿದರು. ಬಯಲುಸೀಮೆ ಮತ್ತು ಮಲೆನಾಡಿನ ಕೃಷಿ ಭೂಮಿಯನ್ನು ಹೊಂದಿರುವ ಶಿಕಾರಿಪುರ 12ನೇ ಶತಮಾನದಲ್ಲಿ ಬನವಾಸಿ ನಾಡು ಆಗಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳಿಂದ ಶಾಸಕರಾಗಿದ್ದಾರೆ.