ರಾಜಕೀಯ

ಕರ್ನಾಟಕ ಜನತೆಯನ್ನು ಕಾಂಗ್ರೆಸ್ ಧ್ರುವೀಕರಿಸುತ್ತದೆ: ಬಿಜೆಪಿ ವಕ್ತಾರ

Sumana Upadhyaya

ಬೆಂಗಳೂರು: ಕರ್ನಾಟಕದ ಅಭಿವೃದ್ಧಿ ಬಿಜೆಪಿ ಅಜೆಂಡವಾ ಸ್ಥಿರವಾಗಿದ್ದರೆ, ಕಾಂಗ್ರೆಸ್ ನ ಅಜೆಂಡಾ ರಾಜ್ಯದ ಜನರನ್ನು ಧ್ರುವೀಕರಿಸುತ್ತದೆ ಎಂದು ಭಾರತೀಯ ಜನತಾ ಪಾರ್ಟಿ ಆರೋಪಿಸಿದೆ.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಕೆಲ ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಹೆಚ್ಚು ಅಭಿವೃದ್ಧಿ, ವೇಗದ ಅಭಿವೃದ್ಧಿ ಮತ್ತು ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಪಕ್ಷದ ಅಜೆಂಡಾವಾಗಿದೆ ಎಂದು ಹೇಳಿದ್ದರು. ಆದರೆ ದುರಂತವೆಂದರೆ ಕಾಂಗ್ರೆಸ್ ನ ತತ್ವ, ನಂಬಿಕೆಗಳು ಸಮಾಜವನ್ನು ಧ್ರುವೀಕರಿಸುವುದಾಗಿದೆ. ಧರ್ಮಗಳನ್ನು ಒಡೆಯುವುದು ಮತ್ತು ಒಡೆದು ಆಳುವ ನೀತಿ ಕಾಂಗ್ರೆಸ್ ನದ್ದಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಗುಲಾಮ್ ನಬಿ ಆಜಾದ್ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಬಹಿರಂಗವಾಗಿ ಕರ್ನಾಟಕದ ಮುಸಲ್ಮಾನರು ಕಾಂಗ್ರೆಸ್ ಗೆ ಮತ ಹಾಕುವಂತೆ ಕೋರಿಕೊಂಡಿದ್ದರು ಎಂದು ಆರೋಪಿಸಿದರು.

ಇದು ಅಭಿವೃದ್ಧಿಪರ ಅಜೆಂಡಾವಾಗಿದೆಯೇ? ಅಥವಾ ಇದು ಕೋಮುವಾದಿ ಅಜೆಂಡಾವೇ? ಇದು ಕೋಮುವಾದಿ ಅಜೆಂಡಾ ಎಂಬುದು ಸ್ಪಷ್ಟವಾಗುತ್ತದೆ. ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಕಾನೂನು ಅದರ ಕ್ರಮ ಕೈಗೊಳ್ಳುತ್ತದೆ. ಆದರೆ ಕರ್ನಾಟಕ ಮತ್ತು ಈ ದೇಶದ ಜನರು ಬುದ್ಧಿವಂತರಾಗಿದ್ದಾರೆ, ಯೋಚಿಸಿ ಮತ ಹಾಕುತ್ತಾರೆ ಎಂದು ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಫ್ರಾನ್ಸಿಸ್ ಕಳೆದ ನಾಲ್ಕು ವರ್ಷಗಳಿಂದ ಕಾಂಗ್ರೆಸ್ ನ ಉನ್ನತ ನಾಯಕರ ಕಪಿಮುಷ್ಠಿಯಲ್ಲಿದ್ದು ಜಿಲ್ಲೆಯ ದೇವಾಲಯಗಳಿಂದ ಕೇಸರಿ ಧ್ವಜಗಳನ್ನು ತೆಗೆಯಲು ಆದೇಶ ನೀಡಿದ್ದಾರೆ. ಧಾರ್ಮಿಕ ಚಟುವಟಿಕೆಗಳಿಗೆ, ಸಂಸ್ಕೃತಿಗೆ ಹೆಸರುವಾಸಿಯಾದ ಜಿಲ್ಲೆ ಉಡುಪಿ. ಜಿಲ್ಲಾಧಿಕಾರಿಯಾಗಿ ಅವರು ಇಂತಹ ಕ್ರಮಗಳನ್ನು ಜಾರಿಗೆ ತರಲು ಹೇಗೆ ಸಾಧ್ಯ ಎಂದು ಕೇಳಿದರು.

SCROLL FOR NEXT