ಮೈಸೂರು: ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಿಎಂ ಸಿದ್ದರಾಮಯ್ಯ ಬೇರೆ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ, ಇದೇ ವೇಳೇ ಅವರ ಪುತ್ರ ಡಾ.ಯತೀಂದ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಂದೆ ಸಿದ್ದರಾಮಯ್ಯ ಅವರ ಪರ ಮತ ಯಾಚನೆ ಮಾಡಿದ್ದಾರೆ.
ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಿಂದಿ ಸಿದ್ದರಾಮಯ್ಯ ಸ್ಪರ್ಧಿಸಿದ್ದು, ಹಾಲಿ ಶಾಸಕ ಜಿ,ಟಿ ದೇವೇಗೌಡ ಸಿಎಂ ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ,
ವರುಣಾ ಕ್ಷೇತ್ರದಿಂದ ಡಾ. ಯತೀಂದ್ರ ಕಣಕ್ಕಿಳಿದಿದ್ದು, ತಮ್ಮ ಕ್ಷೇತ್ರದ ಪ್ರಚಾರ ಕಾರ್ಯ ಕೈಬಿಟ್ಟು ತಂದೆಗೆ ಸಹಾಯ ಮಾಡಲು ಪ್ರಚಾರ ನಡೆಸುತ್ತಿದ್ದಾರೆ. ಇದೇವೇಳೆ ಸಿಎಂ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ದಿವಂಗತ ರಾಕೇಶ್ ಪತ್ನಿ ಸ್ಮಿತಾ ಕೂಡ ತಮ್ಮ ಮಾವನ ಪರವಾಗಿ ಚಾಮುಂಡೇಶ್ವರಿಯಲ್ಲಿ ಮತಯಾಚನೆ ಮಾಡಿದ್ದರು.
ಕಾಂಗ್ರೆಸ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟುಕೊಂಡು ಯತೀಂದ್ರ ಪ್ರಚಾರ ನಡೆಸುತ್ತಿದ್ದಾರೆ.
ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಂದ ಜನರ ಗಮನ ಸೆಳೆಯಲು ಜೆಡಿಎಸ್ ಮತ್ತು ಬಿಜೆಪಿಗಳು ಸುಳ್ಳು ಆರೋಪ ಮಾಡುತ್ತಿವೆ ಎಂದು ದೂರಿದ್ದಾರೆ, ನನ್ನ ತಂದೆ ಸಿಎಂ ಆದ ನಂತರ, ಮೈಸೂರಿನಲ್ಲಿ ಮೈಮುಲ್ ಸ್ಥಾಪಿಸಿದ್ದಾರೆ, ಶ್ರೀ ರಾಮಕೃಷ್ಣ ಪರಮಹಂಸ, ಮತ್ತು ಮೈಸೂರು ಜಯಚಾಮರಾಜೇಂದ್ರ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics