ಸಾಂದರ್ಭಿಕ ಚಿತ್ರ 
ರಾಜಕೀಯ

ಕರ್ನಾಟಕ ವಿಧಾನ ಸಭೆ ಚುನಾವಣೆ: ಅಭ್ಯರ್ಥಿಗಳಿಗೆ ಸ್ಲಮ್ ಗಳೇ ಆದ್ಯತೆ!

ರಾಜ್ಯ ವಿಧಾನ ಸಭೆ ಚುನಾವಣೆ ಮತದಾನಕ್ಕೆ ಕೇವಲ ಇನ್ನೊಂದು ವಾರವಷ್ಟೇ ಬಾಕಿಯಿದೆ, ನಗರ ಪ್ರದೇಶದ ಪ್ರಚಾರದಲ್ಲಿ ಅಭ್ಯರ್ಥಿಗಳು ಇನ್ನು ಕಾಣಿಸಿಕೊಳ್ಳುತ್ತಿಲ್ಲ, ...

ಬೆಂಗಳೂರು: ರಾಜ್ಯ ವಿಧಾನ ಸಭೆ ಚುನಾವಣೆ ಮತದಾನಕ್ಕೆ ಕೇವಲ ಇನ್ನೊಂದು ವಾರವಷ್ಟೇ ಬಾಕಿಯಿದೆ, ನಗರ ಪ್ರದೇಶದ ಪ್ರಚಾರದಲ್ಲಿ ಅಭ್ಯರ್ಥಿಗಳು ಇನ್ನು ಕಾಣಿಸಿಕೊಳ್ಳುತ್ತಿಲ್ಲ, 
ಹಲವಾರು ಕ್ಷೇತ್ರಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮೈಕ್ ಹಿಡಿದು ಆಟೋದಲ್ಲಿ ಸುತ್ತಾಡಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಾಗುತ್ತಿದೆ. ವೃತ್ತ ಪತ್ರಿಕೆ ಜೊತೆ ಕರಪತ್ರ ಹಂಚುವುದು ಕಡಿಮೆಯಾಗಿದೆ. ಜೊತೆಗೆ ಮನೆ ಮನೆಗೆ ತೆರಳಿ ಕದ ತಟ್ಟಿ ಮತ ಕೇಳುವ ಪ್ರವೃತ್ತಿಯೂ ಇಲ್ಲದಾಗಿದೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪ್ರಚಾರದ ಮೊದಲ ಆದ್ಯತೆ ಕೊಳಚೆ ಪ್ರದೇಶಗಳು ಹಾಗೂ ಲೋ ಫ್ರೊಫೈಲ್ ಪ್ರದೇಶಗಳಾಗಿವೆ. ಏಕೆಂದರೇ ಈ ಪ್ರದೇಶಗಳಲ್ಲಿಯೇ ಹೆಚ್ಚಿನ ಸಂಖ್ಯೆಯ ಮತದಾರರಿರುತ್ತಾರೆ, ಐಷಾರಾಮಿ  ಪ್ರದೇಶಗಲ್ಲಿ ಪ್ರಚಾರ ನಡೆಸುವ ಬದಲು ಇಂಥ ಕೊಳಚೆ ಪ್ರದೇಶಗಳಲ್ಲಿ ಪ್ರಚಾರ ಮಾಡುವುದೇ ಉತ್ತಮ ಎಂದು ಅಭ್ಯರ್ಥಿಗಳು ಬಯಸಿದ್ದಾರೆ. ಅಪಾರ್ಟ್ ಮೆಂಟ್  ಗಳಿಗೆ ತೆರಳಿ ಪ್ರಚಾರ ಮಾಡುವುದು ವ್ಯರ್ಥ ಎಂದು ತಿಳಿದಿರುವ ಅಭ್ಯರ್ಥಿಗಳು ಸ್ಲಂ ಜನರ ಮನವೊಲಿಸಲು ಸಮಯ ವ್ಯಯಿಸುತ್ತಿದ್ದಾರೆ.
ಉತ್ತಮ ಪ್ರದೇಶಗಳಲ್ಲಿ ವಾಸಿಸುವ ಅಂದರೇ ಅಪಾರ್ಟ್ ಮೆಂಟ್ ಗಳಲ್ಲಿ ರುವ ಮತದಾರರ ಬಗ್ಗೆ ಅಭ್ಯರ್ಥಿಗಳ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ,ಇದುವರೆಗೂ ಒಬ್ಬ ನಾಯಕರು ನಮ್ಮ ಮನೆ ಬಳಿ ಮತ ಕೇಳಲು ಬಂದಿಲ್ಲ, ನೀನು ಗೃಹಿಣಿ ಬಹುತೇಕ ಸಮಯ ಮನೆಯಲ್ಲಿ ಕಳೆಯುತ್ತೇನೆ, ಆದರೆ ಇದುವರೆಗೂ ಯಾವುದೇ ಒಬ್ಬ ನಾಯಕರು ನಮ್ಮ ಮನೆಗೆ ಬಂದಿಲ್ಲ ಎಂದು ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ ಟೌನ್ ಶಿಪ್ ಅಪಾರ್ಟ್ ಮೆಂಟ್ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಅಭ್ಯರ್ಥಿಗಳು ನಮ್ಮ ಮತವನ್ನು ಅವಲಂಬಿಸಿಲ್ಲ, ಇಲ್ಲದಿದ್ದರೇ ಅವರು ನಮನ್ನು ಸಂಪರ್ಕಸಿ ಮತಯಾಚಿಸುತ್ತಿದ್ದರು ಎಂದು ಯಶವಂತಪುರ ಕ್ಷೇತ್ರದ ಗೌತಮಿ ಬೋಗ್ ಹೇಳಿದ್ದಾರೆ.
ಉತ್ತಮ ಪ್ರದೇಶಗಳಲ್ಲಿ ನೆಲೆಸಿರುವ ನಿವಾಸಿಗಳನ್ನು ನಾವು ಯಾವುದೇ ರೀತಿಯಲ್ಲಿ ಮನವೊಲಿಸಲು ಸಾಧ್ಯವಿಲ್ಲ,, ನಮ್ಮ ಕೆಲಸಗಳ ಬಗ್ಗೆ ಅವರಿಗೆ ಎಷ್ಟು ಹೇಳಿದರು ನಂಬುದಿಲ್ಲ, ಅವರು ಈ ಮೊದಲೇ ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿರುತ್ತಾರೆ ಎಂದು ದಕ್ಷಿಣ ಬೆಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರ ಆಪ್ತರೊಬ್ಬರು ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಹುತೇಕ ಅಭ್ಯರ್ಥಿಗಳು ಡಿಜಿಟಲ್ ಪ್ರಚಾರದ ಮೊರೆ ಹೋಗಿದ್ದಾರೆ. ಶಬ್ದ ಮಾಲಿನ್ಯ ಮಾಡುವುದಕ್ಕಿಂತ ಸಾಮಾಜಿಕ ಮಾಧ್ಯಮಗಳ ಪ್ರಚಾರವೇ ಉತ್ತಮ ಎಂದು ನಂಬಿದ್ದಾರೆ, ಹೀಗಾಗಿ ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ತಮ್ಮದೇ ಆದ ಪೇಜ್ ಮತ್ತು ವೈಬ್ ಸೈಟ್ ಖಾತೆ ತೆರೆದು ಪ್ರಚಾರ ಮಾಡುತ್ತಾರೆ, ಅಬ್ಯರ್ಥಿಗಳ ಪರ ತಂಡವೊಂದು ಪೇಜ್ ನಿರ್ವಹಣೆ ಮಾಡುತ್ತಿದೆ.
ಕೆಲವೊಬ್ಬರು ವಾಟ್ಸ್ ಅಪ್ ನಲ್ಲಿ ಬಲ್ಕ್ ಆಗಿ ಮೆಸೇಜ್ ಮಾಡಿ ಎಲ್ಲರಿಗೂ ತಲುಪುವಂತೆ ಮಾಡುತ್ತಾರೆ, ಇದು ಮತದಾರರನ್ನು ತಲುಪುವ ಮತ್ತೊಂದು ಸುಲಭ ಮಾರ್ಗನವಾಗಿದೆ ಎಂದು ಅಭ್ಯರ್ಥಿಯೊಬ್ಬರು ಅಭಿಪ್ರಾಯ ಪಡುತ್ತಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT