ಯೋಗಿ ಆದಿತ್ಯನಾಥ್ ಮತ್ತು ಸೋನಿಯಾ ಗಾಂಧಿ
ನವದೆಹಲಿ: ರಾಜ್ಯ ವಿಧಾನಸಭೆಗೆ ಮತದಾನಕ್ಕೆ ಇನ್ನೂ ಕೇವಲ ಕೆಲವು ದಿನಗಳು ಮಾತ್ರಬಾಕಿಯಿವೆ, ಹೀಗಿರುವಾಗ ಕಾಂಗ್ರೆಸ್ ಮತ್ತು ಬಿಜೆಪಿಗಳು ಪ್ರಚಾರದ ಭರದಲ್ಲಿ ಪರಸ್ಪರ ವಯಕ್ತಿಕ ನಿಂದನೆಗಿಳಿದಿವೆ. ಈ ಸಂಬಂಧ ಎರಡು ಪಕ್ಷಗಳ ನಡುವೆ ಟ್ವೀಟ್ ವಾರ್ ನಡೆದಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಪೋಸ್ಟ್ ಹಾಕಿದೆ, ಸೋನಿಯಾ ಅವರ ಹುಟ್ಟಿದ ಹೆಸರಾದ ಅಂಟೋನಿಯೋ ಮೈನೋ ರಾಜೀವ್ ಗಾಂಧಿ ಅವರನ್ನು ವಿವಾಹವಾದ ನಂತರ ಸೋನಿಯಾ ಗಾಂಧಿ ಎಂದು ಬದಲಾಯಿಸಿಕೊಂಡಿದ್ದಾರೆ.
ಇವತ್ತು ಮಿಸ್ ಅಂಟಾನಿಯೋ ಮೈನೋ ಕರ್ನಾಟಕಕ್ಕೆ ಬರುತ್ತಿದ್ದಾರೆ, ಕರ್ನಾಟಕದ ಕೋಟೆಯನ್ನು ಬೀಳದಂತೆ ತಡೆಯಲು ಬರುತ್ತಿದ್ದಾರೆ, ಮೇಡಂ ಮೈನೋ, ಭಾರತದ ಅಮೂಲ್ಯ 10 ವರ್ಷಗಳ ಸಮಯವನ್ನು ಹಾಳು ಮಾಡಿದವರಿಂದ ಕರ್ನಾಟಕ ಯಾವುದೇ ಪಾಠ ಕಲಿಯುವ ಅವಶ್ಯಕತೆಯಿಲ್ಲ, ನೀವು ಆಮದಾಗಿರುವವರು ಎಂಬುದನ್ನು ಕಾಂಗ್ರೆಸ್ ನಿಮಗೆ ನೆನಪಿಸಬೇಕು ಎಂದು ಟ್ವಿಟ್ಟರ್ ಪೋಸ್ಟ್ ನಲ್ಲಿ ಹಾಕಲಾಗಿದೆ.
ಇದಕ್ಕೆ ತಕ್ಕ ಉತ್ತರ ನೀಡಿರುವ ಕಾಂಗ್ರೆಸ್ ಟ್ವಿಟ್ಟರ್ ನಲ್ಲೇ ಬಿಜೆಪಿಗೆ ತಿರುಗೇಟು ನೀಡಿದೆ.ಸಂನ್ಯಾಸಿಯಾಗದುವ ಮುನ್ನ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಅವರ ಹೆಸರು ಅಜಯ್ ಬಿಶ್ತ್ ಎಂಬುದಾಗಿತ್ತು. ಮೇ 4 ರಂದು ಯೋಗಿ ಆದಿತ್ಯನಾಥ್ ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದರು, ಆದರೆ ಉತ್ತರ ಪ್ರದೇಶದಲ್ಲಿ ಉಂಟಾದ ಬಿರುಗಾಳಿ ಸಹಿತ ಮಳೆಗೆ ಹಲವು ಮಂದಿ ಪ್ರಾಣ ಕಳೆದು ಕೊಂಡ ಹಿನ್ನೆಲೆಯಲ್ಲಿ ಯೋಗಿ ಚುನಾವಣಾ ಪ್ರಚಾರವನ್ನು ಅರ್ಥಕ್ಕೆ ನಿಲ್ಲಿಸಿ ವಾಪಾಸಾಗಿದ್ದರು.
ಸಿದ್ದರಾಮಯ್ಯ ಅವರ ಕರ್ನಾಟಕ ಸರ್ಕಾರದಿಂದ ಮಿ, ಅಜಯ್ ಬಿಸ್ತ್ ಕೆಲ ಒಳ್ಳೆಯ ಪಾಠಗಳನ್ನು ಕಲಿತು ಉತ್ತರ ಪ್ರದೇಶಕ್ಕೆ ವಾಪಾಸಾಗಿದ್ದಾರೆ, ಇದು ಸಂತಸದ ವಿಷಯ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕರ್ನಾಟಕ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ರಾಜ್ಯದ ಹಲವು ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.