ಬೆಂಗಳೂರು: ರಾಜ್ಯ ವಿಧಾನ ಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾರರ ಮನವೊಲಿಸಲು ಎಲ್ಲಾ ಪಕ್ಷದ ನಾಯಕರುಗಳು ಹರ ಸಾಹಸ ಪಡುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಪ್ರಚಾರ ನಡೆಸಿದ್ದಾರೆ. ಮುಂದಿನ ದಿನಗಳಲ್ಲೂ ಮೋದಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ, ರಾಜ್ಯವನ್ನು ಕಾಂಗ್ರೆಸ್ ಹಿಡಿತದಿಂದ ತಪ್ಪಿಸಿ ಬಿಜೆಪಿ ಅಧಿಕಾರಕ್ಕೆ ಬರಲು ಮೋದಿ ವರ್ಚಸ್ಸು ಸಹಾಯ ಮಾಡುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂದರ್ಶನದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡುವ ಅಂಶಗಳು ಯಾವುವು?
2004 ರಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು, 2006 ರಲ್ಲಿ ನಾವು ಸಮ್ಮಿಶ್ರ ಸರ್ಕಾರ ರಚಿಸಿದ್ದೆವು, ಅದಾದ ಎರಡು ವರ್ಷಗಳ ನಂತರ 110 ಸೀಟುಗಳನ್ನು ಪಡೆಯುವ ಮೂಲಕ ನಾವು ನಮ್ಮದೇ ಪಕ್ಷದ ಸರ್ಕಾರ ರಚಿಸಿದೆವು, ಈಗ ನಾವು 150 ಸೀಟು ಗೆಲ್ಲುವ ಟಾರ್ಗೆಟ್ ಇಟ್ಟು ಕೊಂಡಿದ್ದೇವೆ, ಕೆಲವರಿಗೆ ಇದು ಬಹಳ ದೊಡ್ಡದು ಎನಿಸಬಹುದು. ಆದರೆ ಉದೇಶದಲ್ಲಿ 325 ಸೀಟು ಗೆಲ್ಲಬಹುದು ಎಂದು ಯಾರು ಎಣಿಸಿರಲಿಲ್ಲ, ಹರ್ಯಾಣ ಮತ್ತು ಅಸ್ಸಾಂ ಫಲಿತಾಂಶ ಬಿಜೆಪಿ ಪರವಾಗಿರುತ್ತದೆ ಎಂದು ಯಾರೂ ಊಹಿಸಿರಲಿಲ್ಲ, ಮೂರು ಅಂಶಗಳಿಂದಾಗಿ ಎಲ್ಲವೂ ಸಾಧ್ಯವಾಗುತ್ತದೆ. ಜನ ಆಸೆ ಆಕಾಂಕ್ಷೆ, ಮೋದಿ ನಾಯಕತ್ವದಲ್ಲಿ ನಂಬಿಕೆ ಮತ್ತು ಅಮಿತ್ ಶಾ ಅವರಿಂದ ಇದು ಸಾಧ್ಯವಾಗುತ್ತದೆ ಎರಡು ವರ್ಷಗಳ ಮೊದಲಿನಿಂದಲೇ ಅಮಿತ್ ಶಾ ಚುನಾವಣಾ ತಯಾರಿ ನಡೆಸಿದ್ದರು., ಯಾವ್ಯಾವ ಲೋಕಸಭೆ ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸಿದ್ದವು ಮತ್ತು ಎಲ್ಲೆಲ್ಲಿ ಸೋತಿದ್ದೆವು ಎಂಬುದನ್ನು ಗುರುತಿಸಿದ್ದರು, ಒಂದು ವೇಳೆ ಶೇ.3-5 ರಷ್ಟು ಹೆಚ್ಚು ಮತ ಬಂದರೆ ನಾವು ಚುನಾವಣೆಯಲ್ಲಿ ಸ್ವೀಪ್ ಮಾಡುತ್ತೇವೆ,ಅದು ಅವರ ರಣತಂತ್ರವಾಗಿದೆ, ಕುಟುಂಬ ರಾಜಕಾರಣದಿಂದ ಜನರು ಬೇಸತ್ತು ಹೋಗಿದ್ದಾರೆ.
ಜನರ ಆದ್ಯತೆಗಳು ಬದಲಾಗಿವೆ, 24 ಗಂಟೆ ನೀರು, ಮೆಟ್ರೋ ರೈಲು, ಉಪನಗರ ರೈಲು ವ್ಯವಸ್ಥೆ, ಸ್ಮಾರ್ಟ್ ಸಿಟಿ ಸೇರಿದಂತೆ ಹಲವು ಅಗತ್ಯತೆಗಳನ್ನು ಬಯಸುತ್ತಾರೆ. ಈ ಮೊದಲಾದರೇ ಕೇವಲ ರೋಟಿ-ಕಪಡಾ-ಮಕನ್ ಗೆ ಜನರ ಆಸೆ ಸೀಮಿತವಾಗಿತ್ತು. ಆದರೆ ಈಗ ಸ್ಲಮ್ ನಲ್ಲಿ ವಾಸಿಸುವ ಜನರರೂ ಆ ರೀತಿಯ ರಾಜಕಾರಣವನ್ನು ಬಯಸುವುದಿಲ್ಲ, ಅವರೂ ಕೂಡ ಸ್ಮಾರ್ಟ್ ಫೊನ್ ಹೊಂದಿದ್ದಾರೆ, ಹಾಗೂ ಮತ್ತಷ್ಟು ಆಕಾಂಕ್ಷಿಗಳಾಗಿದ್ದಾರೆ.
ಮೊದಿ ರ್ಯಾಲಿಗಳ ಸಂಖ್ಯೆ ಹೆಚ್ಚಿದ, ಈ ಚುನಾವಣೆಯಲ್ಲಿ ಮೋದಿ ಬಿಗ್ ಫ್ಯಾಕ್ಟರ್ ಆಗುತ್ತಾರಾ?
ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆಯಲಿ ಮೋದಿ ಯಾವಾಗಲೂ ಬಿಗ್ ಫ್ಯಾಕ್ಟರ್ ಆಗುತ್ತಾರೆ, ಮೋದಿ ಮತ್ತು ಯಡಿಯೂರಪ್ಪ ನಾಯಕತ್ವ ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಾರೆ,ಇದು ಡಬಲ್ ಎಂಜಿನ್ ಎಪೆಕ್ಟ್,
ಯಾವ ಭಾಗದಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ಸಿಗುತ್ತದೆ ಎಂದು ನಂಬಿದ್ದೀರಿ?
ಇಡೀ ಕರ್ನಾಟಕವೇ ಬಿಜೆಪಿಯನ್ನು ಬೆಂಬಲಿಸುತ್ತದೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ, ಸರ್ಕಾರದ ವಿರುದ್ಧ ಜನ ಕೋಪಗೊಂಡಿರುವುದು ನನ್ನ ಗಮನಕ್ಕೆ ಬಂದಿದೆ, ಅತಿ ಕೆಟ್ಟದಾಗಿ ಕಾಂಗ್ರೆಸ್ ಸೋಲುತ್ತದೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 48 ಸೀಟುಗಳನ್ನು ಗೆಲ್ಲಲು ಸಾಧ್ಯವಿಲ್ಲ, ಬೆಂಗಳೂರು ನಗರದಲ್ಲಿ ನಾವು 22 ಸೀಟುಗಳನ್ನು ಗೆಲ್ಲುತ್ತೇವೆ, ರೋಷನ್ ಬೇಗ್, ಜಾರ್ಜ್, ಹ್ಯಾರಿಸ್, ಭೈರತಿ ಬಸವರಾಜ್ ಅವರಂತ ನಾಯಕರ ಹಿಡಿತದಲ್ಲಿರುವ ಬೆಂಗಳೂರು ಕ್ರೈಂ ಸಿಟಿಯಾಗುತ್ತಿದೆ.
ಕಳಂಕಿತರಿಗೆ ಟಿಕೆಟ್ ನೀಡಿದ್ದು ಏಕೆ?
ಕಳಂಕಿತರ ವಿಷಯದಲ್ಲಿ ಯಾವುದೇ ರಾಜಿ ಇಲ್ಲ,ಉತ್ತಮ ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇವೆ,
ನಮ್ಮ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು, ಇದರ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಇದು ರಾಜ್ಯಾಧ್ಯಕ್ಷರ ಸ್ವಂತ ನಿರ್ಧಾರವಾಗಿದೆ,
ಕೃಷಿ ಬಿಕ್ಕಟ್ಟಿನ ಬಗ್ಗೆ ನೀವು ಮಾತನಾಡುತ್ತಿರಿ, ರಾಜ್ಯ ಸರ್ಕಾರ ಮನವಿ ಮಾಡಿದರೂ ಸಾಲ ಮನ್ನಾ ಮಾಲು ಸಹಾಯ ಕೋರಿದ ರಾಜ್ಯ ಸರ್ಕಾರಕ್ಕೆ ಕೇಂದ್ರ ನೆರವು ನೀಡಲಿಲ್ಲಏಕೆ?
ನಮ್ಮ ಸರ್ಕಾರ ಹಲವು ರೈತ ಪರ ಯೋಜನೆಗಳನ್ನು ನೀಡಿದೆ. ಉತ್ತರ ಪ್ರದೇಶ ಸರ್ಕಾರ ಸಾಲಮನ್ನಾ ಮಾಡಿದೆ, ಅವರು ಹೇಗೆ ಮಾಡಿದರು? ಕರ್ನಾಟಕದಲ್ಲಿ ಏಕೆ ಸಾದ್ಯವಾಗಲಿಲ್ಲ,ಇದೆಲ್ಲಾ ಕಾಂಗ್ರೆಸ್ ರಾಜಕೀಯ ಗಿಮಿಕ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics