ರಾಜಕೀಯ

ಚಂದಾ ಎತ್ತಿ ಜೆಡಿಎಸ್ ಅಭ್ಯರ್ಥಿಗೆ ದೇಣಿಗೆ ನೀಡಿದ ಮತದಾರರು!

Shilpa D
ಗೋಕಾಕ್: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತಕ್ಕಾಗಿ ನಾಗರಿಕರಿಗೆ ಹಣ ನೀಡುವುದು ಕಾಮನ್, ಆದರೆ ಬೆಳಗಾವಿ ಜಿಲ್ಲೆಯ ಅರಬಾವಿ ಕ್ಷೇತ್ರದ ಅಭ್ಯರ್ಥಿಗಾಗಿ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಹಾಗೂ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಅವರಿಗೆ ಸ್ಥಳೀಯ ನಿವಾಸಿಗಳು ಸುಮಾರು 20 ಲಕ್ಷ ರು ಹಣ ಸಂಗ್ರಹಿಸಿ ನೀಡಿದ್ದಾರೆ, ಕರ್ನಾಟಕ ವಿಧಾನಸಭೆಗೆ ಭೀಮಪ್ಪ ಗಡಾದ್ ಅವರನ್ನು ಆರಿಸಿಕಳುಹಿಸಲು ನಿರ್ಧರಿಸಿದ್ದಾರೆ, ಬಸು ತೇರದಾಳ್ ಎಂಬ ಯುವಕ ಇತ್ತೀಚೆಗೆ ಲಾಟರಿ ಮೂಲಕ ಬಂದ 40 ಸಾವಿರ ರು ಹಣವನ್ನು ಗಡಾದ್ ಅವರಿಗೆ ನೀಡಿದ್ದಾರೆ, 
ಗಡಾದ್ ಅವರು ಗೆಲ್ಲಬೇಕೆಂಬುದು ನನ್ನ ಹಾಗೂ ನನ್ನ ಸ್ನೇಹಿತರ ಆಶಯವಾಗಿದೆ, ಹಣ ಮತ್ತು ಮತ ಎರಡನ್ನು ಅವರಿಗೆ ನೀಡುತ್ತೇವೆ, ಗಡಾದ್ ಜನಪ್ರಿಯ ವ್ಯಕ್ತಿ, ಅವರು ನಿಜವಾದ ಸಾಮಾಜಿಕ ಕಾರ್ಯಕರ್ತ ಹೀಗಾಗಿ ಅವರು ಗೆಲುವು ಸಾಧಿಸಬೇಕು ಎಂಬುದು ನಮ್ಮ ಆಸೆಯಾಗಿದೆ ಎಂದು ಮೊದಲ ಬಾರಿ  ಮತದಾನ ಮಾಡುತ್ತಿರುವ 18 ವರ್ಷದ ಮೇಘಾ ಗಾಣಿಗೇರ್ ಹೇಳಿದ್ದಾರೆ, ಜೊತೆಗೆ 25 ಸಾವಿರ ಹಣ ನೀಡಿದ್ದಾರೆ.
ಗಡಾದ್ ಅವರಿಗೆ ಸಿಕ್ಕುತ್ತಿರುವ ಜನಪ್ರಿಯತೆ ಕಂಡು ಮೂರು ಬಾರಿ ಶಾಸಕರಾಗಿರುವ ಬಾಲಂಚಂದ್ರ ಜಾರಕಿಹೊಳಿ ಅವರನ್ನು ಚಿಂತೆಗೀಡಾಗಿದೆ, ನಾಮಪತ್ರ ಸಲ್ಲಿಸಲು 5 ಸಾವಿರ ರು, ಹಣ ಡೆಪಾಸಿಟ್ ಮಾಡಬೇಕಿತ್ತು, ಅದನ್ನು ಕೂಡ ಸಾರ್ವಜನಿಕರೇ ನೀಡಿದ್ದಾರೆ, ಈ ಎಲ್ಲಾ ಜನರೆ ನನ್ನ ಬಂಡವಾಳ ಹೂಡಿಕೆದಾರರಾಗಿದ್ದಾರೆ, ಜನರೆಲ್ಲಾ ಬದಲಾವಣೆ ಬಯಸಿದ್ದಾರೆ, ಅವರು ಬಯಸಿದ್ದನ್ನು ನೀಡುವುದು ನನ್ನ ಪ್ರಥಮ ಆದ್ಯತೆಯಾಗಿದೆ.
ಜಾರಕಿಹೊಳಿ ಅರಬಾವಿ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಲ್ಲ, ಜೊತೆಗೆ ನಮ್ಮ ಪ್ರಚಾರಕ್ಕಾಗಿ ಇಲ್ಲಿನ ಜನ ಆಹಾರ ಧಾನ್ಯ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. 
SCROLL FOR NEXT