ರಾಜಕೀಯ

ನಾನು ಯಾವ ಹಣವನ್ನೂ ಹಂಚಿಲ್ಲ:ಮಗಳ ಬಂಧನವೂ ಸುಳ್ಳು: ಸುರೇಶ್ ಕುಮಾರ್ ಸ್ಪಷ್ಟನೆ

Raghavendra Adiga
ಬೆಂಗಳೂರು: ಬೆಂಗಳೂರು ರಾಜಾಜಿನಗರದಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ನನ್ನ ಮಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವುದು ಶುದ್ದ ಸುಳ್ಳು. ನಾನು ಯಾರಿಗೂ ಹಣ ಹಂಚಿಲ್ಲ, ನನ್ನ ಮಗಳನ್ನು ಪೋಲೀಸರು ಬಂಧಿಸಿಲ್ಲ ಎಂದು ರಾಜಾಜಿನಗರ ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುರೇಶ್‌ ಕುಮಾರ್ ಅವರ ಮಗಳು ದಿಶಾ ಎಸ್. ಕುಮಾರ್ ಮತದಾರರಿಗೆ ಆಕ್ರಮವಾಗಿ ಹಣ ಹಂಚುತ್ತಿದ್ದರು ಎಂದು ಕೆಲವರು ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಸಂದೇಶ ರವಾನಿಸಿದ್ದಾರೆ.ಅಲ್ಲದೆ ಈ ವೇಳೆ ದಾಳಿ ನಡೆಸಿರುವ ಪೋಲೀಸರು ಆಕೆಯನ್ನ್ಯು ಬಂಧಿಸಿದ್ದಾರೆ  ಎಂದು  ಸುದ್ದಿ ಹರಿದಾಡುತ್ತಿದ್ದು ಇದು ಸುಳ್ಳು ಸುದ್ದಿ ಎನ್ನುವುದಾಗಿ ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನಿಡಿದ್ದಾರೆ.
ನನ್ನ ಮಗಳು ಸೋಷಿಯಲ್ ಮೀಡಿಯಾ ತಂಡದೊಡನೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾಳೆ. ಆಕೆ ಪಕ್ಷದ ಯುವ ಮೋರ್ಛಾ ಪದಾಧಿಕಾರಿ ಯಶಸ್ ಜತೆ ಚರ್ಚೆ ನಡೆಸುತ್ತಿದ್ದಳು. ನಾವು ಯಾವ ರೀತಿಯಲ್ಲಿಯೂ ಹಣ ಹಂಚುವ ಕೆಲಸದಲ್ಲಿ ಭಾಗಿಗಳಾಗಿಲ್ಲ. ನನ್ನ ಮಗಳು ಅಥವಾ ನನ್ನ ಪಕ್ಷ ಈ ಕೆಲಸ ಮಾಡಿಲ್ಲ ಎಂದು ಸ್ಪಷ್ಟಗೊಳಿಸುತ್ತಿದ್ದೇನೆ. ಚುನಾವಣೆ ಹತ್ತಿರವಾದಂತೆ ಇಂತಹಾ ಸುಳ್ಳು ಸುದ್ದಿಗಳು ಹರಿದಾಡುವುದು ಸಾಮಾನ್ಯ ಎಂದು ಅವರು ಹೇಳಿದ್ದಾರೆ.
ಸುರೇಶ್ ಕುಮಾರ್ ಅವರ ನುಡಿಗಳು ಹೀಗಿದೆ-
SCROLL FOR NEXT