ಹ್ಯಾರಿಸ್ ಮತ್ತು ವಸುದೇವ ಮೂರ್ತಿ
ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ವಿಧಾನ ಸಭೆ ಕ್ಷೇತ್ರಗಳಲ್ಲಿ ಹೈಟೆಕ್ ಪ್ರದೇಶಗಳ ಆಗರ ಎಂದೇ ಶಾಂತಿನಗರ ಪ್ರಸಿದ್ದವಾಗಿದೆ.
ಮಗ ಮಾಡಿದ ತಪ್ಪಿಗೆ ತಂದೆ ಹ್ಯಾರಿಸ್ ಸೇರಿ ಕಾಂಗ್ರೆಸ್ ಪಕ್ಷವೇ ಮುಜುಗರ ಅನುಭವಿಸಬೇಕಾಯಿತು. ಈ ಘಟನೆಯಿಂದ ಟಿಕೆಟ್ ತಪ್ಪುವ ಭೀತಿಯಲ್ಲಿದ್ದ ಹ್ಯಾರಿಸ್ ಗೆ ಹಲವು ಡ್ರಾಮಾಗಳ ನಡುವೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎರಡು ಅವಧಿ ಗೆದ್ದಿರುವ ಅವರು ಹ್ಯಾಟ್ರಿಕ್‌ಗಾಗಿ ಬೆವರು ಸುರಿಸತೊಡಗಿದ್ದಾರೆ. ಆದರೆ ಹ್ಯಾರಿಸ್ ಪುತ್ರನ ಪ್ರಕರಣ ವಿರೋಧ ಪಕ್ಷಗಳಿಗೆ ಆಹಾರವಾಗಿ ಮಾರ್ಪಟ್ಟಿದೆ.
ಹ್ಯಾರಿಸ್ ವಿರುದ್ಧ ಆಡಳಿತ ವಿರೋಧಿ ಅಲೆಯಿದೆ, ಹ್ಯಾರಿಸ್ ಕೇವಲ ಶ್ರೀಮಂತರು ವಾಸಿಸುವ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಗಮನ ನೀಡಿದ್ದಾರೆ ಎಂದು ಆರೋಪಿಸಲಾಗಿದೆ,. ಇದರ ಜೊತೆಗೆ ಕಸ ಮತ್ತು ಚರಂಡಿ ಸಮಸ್ಯೆಗೆ ಅಂತ್ಯ ದೊರೆತಿಲ್ಲ.
2013 ರಲ್ಲಿ ಜೆಡಿಎಸ್ ನಿಂದ ಸ್ಪರ್ದಿಸಿದ್ದ ಕೆ, ವಾಸುದೇವ ಮೂರ್ತಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ, 2013 ರಲ್ಲಿ ಕಣಕ್ಕಿಳಿದಿದ್ದ ವಾಸುದೇವ ಮೂರ್ತಿ 20 ಸಾವಿರ ಮತಗಳಿಂದ ಸೋತಿದ್ದರು. ಈ ಬಾರಿ ಹ್ಯಾರಿಸ್ ಮತ್ತು ವಾಸುದೇವ ಮೂರ್ತಿ ನಡುವೆ ನೇರ ಫೈಟ್ ನಡೆಯಲಿದೆ. ಜೆಡಿಎಸ್ ಎನ್.ಆರ್ ಶ್ರೀಧರ್ ರೆಡ್ಡಿ ಅವರನ್ನು ಸ್ಪರ್ಧೆ ಗಿಳಿಸಿದೆ.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಯುಬಿ ಸಿಟಿ ಹಾಗೂ ಚರ್ಚ್‌ಸ್ಟ್ರೀಟ್. ಇಂತಹ ಹೈಟೆಕ್ ಪ್ರದೇಶಗಳ ಆಗರ ‘ಶಾಂತಿನಗರ. 200 ಕ್ಕೂ ಹೆಚ್ಚು ಪಬ್, ದೇಶ-ವಿದೇಶಿ ಶೈಲಿಯ ಜೀವನಶೈಲಿ ಹೊಂದಿರುವ ಇಲ್ಲಿ ನಡೆಯುವ ಹೊಸ ವರ್ಷಾಚರಣೆ ರಾಜ್ಯದಲ್ಲೇ ಖ್ಯಾತಿ. ಈ ಪ್ರದೇಶ ಪಾಲಿಕೆಯ ಪ್ರಮುಖ ಆದಾಯದ ಮೂಲವೂ ಹೌದು. 175 ವರ್ಷ ಇತಿಹಾಸವುಳ್ಳ ಸೇಂಟ್ ಪ್ಯಾಟ್ರಿಕ್ ಚರ್ಚ್ ಸೇರಿ ಹತ್ತಾರು ಪ್ರಮುಖ ಚರ್ಚ್‌ಗಳು ಇಲ್ಲಿವೆ.
ದೀಪದ ಬುಡ ಕತ್ತಲು ಎಂಬಂತೆ ಹೈಟೆಕ್ ಪ್ರದೇಶಗಳಿರುವ ಈ ಕ್ಷೇತ್ರದಲ್ಲಿ ಕಪ್ಪು ಚುಕ್ಕೆಗಳಿಗೆ ಬರವಿಲ್ಲ. ನೀಲಸಂದ್ರ, ಆಸ್ಟಿನ್‌ಟೌನ್, ಈಜಿಪುರ ಸುತ್ತಮುತ್ತಲಿನ ಕೊಳಗೇರಿ ಗಳಸಮಸ್ಯೆಗಳು ಪರಿಹಾರ ಕಂಡಿಲ್ಲ. ಇಂತಹ ಕ್ಷೇತ್ರ ಇದೀಗ ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos