ಬೆಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ಚುನಾಣೆಯಲ್ಲಿ ಕೆಲವೆಡೆ ದೋಷಯುಕ್ತ ಇವಿಎಂಗಳಲ್ಲಿ ತಾಂತ್ರಿಕ ತೊಂದರೆಗಳು ಕಂಡುಬಂದಿದ್ದು, ಮತದಾರರ ಉತ್ಸಾಹವನ್ನು ಕುಂದಿಸಿದೆ.
ಹಲವು ಸ್ಥಳಗಳಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿದ್ದು, ಹಲವು ರಾಜಕೀಯ ನಾಯಕರು, ಅಭ್ಯರ್ಥಿಗಳು ಇವುಗಳಿಂದ ತಪ್ಪಿಸಿಕೊಂಡಿಲ್ಲ. ನಾಗರಿಕರು ತಮ್ಮ ಮತಗಳನ್ನು ದೋಷಪೂರಿತ ಯಂತ್ರಗಳಿಗೆ ಹಾಕಲು ಗಂಟೆಗಳ ಕಾಲ ಕಾಯಬೇಕಾಯಿತು.
ಇವಿಎಂನಲ್ಲಿ ತಾಂತ್ರಿಕ ದೋಷಯಾದ ಹಿನ್ನೆಲೆಯಲ್ಲಿ ಬಿಜೆಪಿನ ವಿರಾಜಪೇಟೆ ಅಭ್ಯರ್ಥಿ ಅಪ್ಪಚು ರಂಜನ್ ಸೋಮವಾರಪೇಟೆ ಮತಗಟ್ಟೆಯಲ್ಲಿ ಅರ್ಧ ಘಂಟೆಯ ಕಾಲ ಕಾಯುವಂತಾಯಿತು. ಗೋಕಾಕ್ ತಾಲೂಕಿನಲ್ಲಿರುವ ಕೊನ್ನೂರ್ ಹಳ್ಳಿಯಲ್ಲಿ ಮತ್ತು ಖಾನ್ಪುರ್ ತಾಲೂಕಿನಲ್ಲಿನ ಹಂದೂರು ಗ್ರಾಮದಲ್ಲಿ 5 ನಿಮಿಷಗಳ ಕಾಲ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು.
ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಶಿರಿವಾರ ಮತಗಟ್ಟೆ ಸಂಖ್ಯೆ 216ರಲ್ಲಿ ಮತದಾರರು ಕಾಯುತ್ತಿದ್ದ ದೃಶ್ಯ ಕಂಡುಬಂದಿತ್ತು. ಈ ಮಧ್ಯೆ ಬಂಗಾರಪೇಟೆ ವಿಧಾನಸಭೆಯ ಉತ್ತುಕುಲಾ ಗ್ರಾಮದ ಮತಗಟ್ಟೆ ಸಂಖ್ಯೆ 40ರಲ್ಲಿ ಮತದಾನವನ್ನು ಸ್ವಲ್ಪಕಾಲ ಸ್ಥಗಿತಗೊಳಿಸಲಾಯಿತು.
ಹೊಳೆ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಮತ ಚಲಾಯಿಸಿದ ನಂತರ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ತಕ್ಷಣವೇ ಚುನಾವಣಾಧಿಕಾರಿಗಳು ಬೇರೊಂದು ಇವಿಎಂ ತಂದು ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.
ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರದ ನುಂಪೆರುಮಾಳ್ ಮತಗಟ್ಟೆ ಸಂಖ್ಯೆ 180ರಲ್ಲಿ ಕೆಲಕಾಲ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು. ಚುನಾವಣಾಧಿಕಾರಿಗಳು ಇವಿಎಂ ಬದಲಾಯಿಸುವವರೆಗೂ ಮತದಾರರು ಕಾಯುತ್ತಿದ್ದ ದೃಶ್ಯ ಕಂಡುಬಂದಿತ್ತು.
ಬಾಗಲಕೋಟೆಯ ಜಮಖಂಡಿ ತಾಲೂಕಿನ ಬುದ್ದಾನಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಇವಿಎಂಗಳು ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಗಂಟೆಗಟ್ಟಲೇ ಜನರು ಕಾಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಇವಿಎಂಗಳಲ್ಲಿನ ತಾಂತ್ರಿಕ ತೊಂದರೆಗಳನ್ನು ಅಭಿವೃದ್ದಿಪಡಿಸಲಾಯಿತು.
ಇವಿಎಂ ದೋಷದಿಂದಾಗಿ ಉಡುಪಿ ಜಿಲ್ಲೆಯ ಕುಕ್ಕಿಕಟ್ಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನವನ್ನು ನಿಲ್ಲಿಸಲಾಗಿತ್ತು. ಮತದಾನದ ಅವಧಿಯನ್ನು ವಿಸ್ತರಿಸಬೇಕೆಂದು 200ಕ್ಕೂ ಅಧಿಕ ಜನರು ಒತ್ತಾಯಿಸಿದರು.
ಇವಿಎಂ ದೋಷದಿಂದಾಗಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೇಕರ್ ನಗರ್ ಮತಗಟ್ಟೆ ಸಂಖ್ಯೆ 205 ರಲ್ಲಿ ಮತದಾನ ವಿಳಂಬವಾಗಿ ಆರಂಭವಾಯಿತು. ಚಿತ್ತಾಪೂರ ಕ್ಷೇತ್ರದ ಇಂಗನ್ ಕಲ್ ಗ್ರಾಮದಲ್ಲಿ ಸುಮಾರು ಒಂದೂವರೆ ಗಂಟೆಯ ವಿಳಂಬದ ನಂತರ ಮತದಾನ ಆರಂಭವಾಯಿತು.