ಸಿದ್ದರಾಮಯ್ಯ ಮತ್ತು ಕುಮಾರ ಸ್ವಾಮಿ
ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕಾಗಿ ಮೈಸೂರು ಭಾಗದ ಮತದಾರರು ಕುತೂಹಲದಿಂದ ಕಾಯುತ್ತಿದ್ದಾರೆ, ಮೈಸೂರಿನ ಹಲವು ಪ್ರದೇಶಗಳಲ್ಲಿ ಎರಡು ಪಕ್ಷಗಳ ಪ್ರಮುಖ ನಾಯಕರುಗಳಾದ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನ ಎಚ್.ಡಿ ಕುಮಾರ ಸ್ವಾಮಿ ಪ್ರಚಾರ ನಡೆಸಿ ತಾನು ಸಿಎಂ ಆಗುವ ಭರವಸೆಯಲ್ಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಎ.ಎಚ್ ವಿಶ್ವನಾಥ್, ಎಚ್.ಡಿ ರೇವಣ್. ಎಸ್ ರಮೇಶ್ ಕುಮಾರ್, ಎಚ್ ಸಿ ಮಹಾದೇವಪ್ಪ, ಮತ್ತು ಕೆ ವೆಂಕಟೇಶ್ ಹಾಗೂ ಹೊಸ ಮುಖ ಪ್ರೀತಮ್ ನಾಗಪ್ಪ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು
ಎಲ್ಲಾ ಪಕ್ಷದ ನಾಯಕರು ಪ್ರತಿಯೊಬ್ಬ ಮತದಾರನನ್ನು ತಲುಪಲು ಪ್ರಯತ್ನಿಸಿದ್ದಾರೆ, ಏಕೆಂದರೆ ಇದೇ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿದೆ,ಮತಗಳ ಧ್ರವೀಕರಣ ಸಾಧ್ಯತೆಯಾಗುವುದನ್ನು ಚೆನ್ನಾಗಿ ಅರಿತಿರುವ ನಾಯಕರುಗಳು ರಾಜಕೀಯ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ, ಏಕೆಂದರೇ ಕರ್ನಾಟಕ ವಿಧಾನ ಸಭೆ ಚುನಾವಣ್ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗಿದೆ.
ಮೈಸೂರಿನ ಈ ಭಾಗದ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳಿಗೂ ಮಹತ್ವದ್ದಾಗಿದೆ. ಈ ಭಾಗದಲ್ಲಿ ಒಕ್ಕಲಿಗ ಮತ್ತು ಅಹಿಂದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಈ ಹಿಂದೆ ಬಿಜೆಪಿ ಇಲ್ಲಿ ಹೇಳಿಕೊಳ್ಳುವಂತ ಕೆಲಸ ಮಾಡಿರಲಿಲ್ಲ, ಆದರೆ ಈ ಬಾರಿ ಉಳಿದ ಎರಡು ಪಕ್ಷಗಳಿಗೆ ಮಣ್ಣು ಮುಕ್ಕಿಸುವ ಪ್ರಯತ್ನದಲ್ಲಿದೆ.