ರಮ್ಯಾ, ಅರವಿಂದ್ ಕೇಜ್ರಿವಾಲ್ ಮತ್ತು ಸುಷ್ಮಾ ಸ್ವರಾಜ್
ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನ ಪ್ರಮುಖ ನಾಯಕರು ಭಾಗವಹಿಸಿದ್ದರು, ಆದರೆ ಕೆಲವು ಪ್ರಸಿದ್ದ ಮುಖಗಳು ಹೈ ವೋಲ್ಟೇಜ್ ಕದನ ಕಣದಿಂದ ದೂರವೇ ಉಳಿದಿದ್ದವು.
ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅನಾರೋಗ್ಯದ ಕಾರಣದಿಂದಾಗಿ ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ,
ಮತ್ತೊಂದೆಡೆ ಸಂಸದೆ ಹೇಮಾ ಮಾಲಿನಿ ಹಾಗೂ ಕೇಂದ್ರ ಸಚಿವ ಮನೋಜ್ ಸಿಹ್ನಾ ಕೂಡ ಭಾಗವಹಿಸಲಿಲ್ಲ, ಹೇಮಾ ಮಾಲಿನಿ ಮತ್ತು ಮನೋಜ್ ಸಿನ್ಹಾ ಅವರನ್ನು ಮಾತ್ರ ನಾವು ಆಹ್ವಾನಿಸಿರಲಿಲ್ಲ, ಅವರ ಹಾಜರಾತಿ ಇಲ್ಲಿ ಅಷ್ಟಂದು ಮುಖ್ಯವಲ್ಲ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿಲ್ಲ, ನಾವು ರಮ್ಯಾ ಅವರನ್ನು ಹಲವು ಬಾರಿ ಆಹ್ವಾನಿಸಿದ್ದೆವು, ಆದರೆ ಅವರು ಬರಲಿಲ್ಲ, ಅವರು ಪ್ರಚಾರ ಕಾರ್ಯದಿಂದ ದೂರ ಉಳಿಯಲು ಏನು ಕಾರಣ ಎಂಬುದು ನಮಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಕಾರ್.ಕರ್ತರೊಬ್ಬರು ತಿಳಿಸಿದ್ದಾರೆ.
ಇನ್ನೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಕೂಡ ಪಕ್ಷದ ಸ್ಟಾರ್ ಕ್ಯಾಂಪೈನರ್ ಆಗಿದ್ದರೂ ಪ್ರಚಾರದಲ್ಲಿ ಭಾಗವಹಿಸಲಿಲ್ಲ, ಗುಲ್ ಪನಾಗ್ ಏಕೆ ಪ್ರಚಾರಕ್ಕೆ ಬರಲಿಲ್ಲ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಎಎಪಿ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics