ರಾಜಕೀಯ

ಸರ್ಕಾರ ರಚನೆ ಬಿಕ್ಕಟ್ಟು : ರಾಜ್ಯಪಾಲ ವಜೂಬಾಯಿ ವಾಲಾ ಅಂಗಳದಲ್ಲಿ ಚೆಂಡು

Nagaraja AB

ನವದೆಹಲಿ : ಬಿಜೆಪಿ ಹಾಗೂ ಕಾಂಗ್ರೆಸ್ - ಜೆಡಿಎಸ್ ಸರ್ಕಾರ  ರಚನೆಯ ಹಕ್ಕು ಮಂಡಿಸಿರುವ ಹಿನ್ನೆಲೆಯಲ್ಲಿ  ಸರ್ಕಾರ ಯಾರು ರಚಿಸಬೇಕೆಂಬುದು ತಲೆನೋವಾಗಿ ಪರಿಣಮಿಸಿದ್ದು, ಇದೀಗ  ಚೆಂಡು ರಾಜ್ಯಪಾಲ ವಜೂಬಾಯಿ ವಾಲಾ ಅಂಗಳದಲ್ಲಿ ಬಿದ್ದಿದೆ.

ಕಳೆದ ವರ್ಷ ನಡೆದ ಗೋವಾ ಮತ್ತು ಮಣಿಪುರ ಚುನಾವಣೆಯ ಪರಿಸ್ಥಿತಿಯನ್ನು ಕರ್ನಾಟಕದ ಪರಿಸ್ಥಿತಿಗೆ ಹೊಂದಾಣಿಕೆ ಮಾಡಲಾಗುತ್ತಿದೆ. ಈ ರಾಜ್ಯಗಳಲ್ಲಿಯೂ ಸರ್ಕಾರ ರಚಿಸಲು ಅತಿದೊಡ್ಡ ಪಕ್ಷವನ್ನು ರಾಜ್ಯಪಾಲರು ಆಹ್ವಾನಿಸಬೇಕಾ ಅಥವಾ ಮೈತ್ರಿ ಪಕ್ಷವನ್ನು ಆಹ್ವಾನಿಸಬೇಕೆಂಬ ಬಗ್ಗೆ ಪ್ರಶ್ನೆ ಎದುರಾಗಿತ್ತು.

 ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರ ಮುಂದೆ ಐದು ಮಾರ್ಗಗಳಿವೆ

* ಯಾರನ್ನಾದರೂ ಸರ್ಕಾರ ರಚನೆಗೆ ಆಹ್ವಾನಿಸುವ ವಿವೇಚನಾಧಿಕಾರವನ್ನು ರಾಜ್ಯಪಾಲರು ಹೊಂದಿದ್ದಾರೆ. ಅದರಲ್ಲೂ  ವಿಶೇಷವಾಗಿ ಪೂರ್ವ-ಸಮೀಕ್ಷೆಯ ಒಕ್ಕೂಟವು ಹಕ್ಕು ಪಡೆಯುವ ಅಧಿಕಾರ ಹೊಂದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾರನ್ನು ಮೊದಲು ಆಹ್ವಾನಿಸಬೇಕೆಂಬ ಬಗ್ಗೆ ಕಾನೂನು ಏನು ಹೇಳುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

* ಮಣಿಪುರ ಮತ್ತು ಗೋವಾ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ  ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಚುನಾವಣೆ ನಂತರ ಮೈತ್ರಿ ಮಾಡಿಕೊಂಡದ್ದೇ ಇದಕ್ಕೆ ಕಾರಣ.  ಇಂತಹ ಸಂದರ್ಭಗಳಲ್ಲಿ ಯಾರನ್ನೂ ಮೊದಲು ಸರ್ಕಾರ ರಚನೆಗೆ ಆಹ್ವಾನಿಸಲಾಗುತ್ತದೆಯೋ ಅಂಥವರು ಬಹುಮತ ಸಾಬೀತು ಪಡಿಸಬೇಕಾಗುತ್ತದೆ. ರಾಜ್ಯಪಾಲರು ಅತಿದೊಡ್ಡ ಪಕ್ಷವನ್ನು  ಅಥವಾ ಮೈತ್ರಿ  ಪಕ್ಷಗಳ ನಾಯಕರನ್ನು ಆಹ್ವಾನಿಸಬಹುದು. ಇದರ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿಯೂ ಪ್ರಶ್ನಿಸುವಂತಿಲ್ಲ ಎಂದು ರಾಜಕೀಯ ತಜ್ಞ ಕಶ್ಯಪ್ ಹೇಳುತ್ತಾರೆ.

* ಸುಪ್ರೀಂಕೋರ್ಟ್  1994ರಲ್ಲಿ ನೀಡಿದ್ದ ಬೊಮ್ಮಾಯಿ ಪ್ರಕರಣದಲ್ಲಿ ಬಹುಮತವನ್ನು  ಆಸೆಂಬ್ಲಿಯಲ್ಲಿಯೇ ಸಾಬೀತುಪಡಿಸಬೇಕಾಗುತ್ತದೆ ಎಂದು ಕಶ್ಯಪ್ ಹೇಳುತ್ತಾರೆ. ರಾಜ್ಯಪಾಲ ವಜೂಬಾಯಿ ವಾಲಾ ಮೊದಲು ಅತಿದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು ಆದರೆ, ಸ್ಥಿರ ಸರ್ಕಾರ ರಚನೆ ನಿಟ್ಟಿನಲ್ಲಿಯೂ ಅಂತಿಮ ಕರೆಯನ್ನು ನೀಡಬೇಕಾಗುತ್ತದೆ ಎಂದು  ಚುನಾವಣಾ ಆಯೋಗದ ಮಾಜಿ ಆಯುಕ್ತ ಟಿ. ಎಸ್, ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

* ಸಂವಿಧಾನದ ನಿಯಮದಂತೆ ಅತಿದೊಡ್ಡ ಪಕ್ಷವನ್ನು ಮೊದಲು ಸರ್ಕಾರ ರಚನೆಗೆ ಆಹ್ವಾನಿಸಬೇಕು. ಆದರೆ, ಗೋವಾ ಮತ್ತು ಮಣಿಪುರದಲ್ಲಿ ರಾಜ್ಯಪಾಲರು ಈ ನಿಯಮವನ್ನು ಉಲ್ಲಂಘಿಸಿದ್ದಾರೆ.  ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅದಕ್ಕೆ ಅವಕಾಶ ನೀಡಲಿಲ್ಲ , ಚುನಾವಣೆ ನಂತರ ಬಿಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು.  ಆದರೆ, ಕರ್ನಾಟಕದಲ್ಲಿ ಮೈತ್ರಿ ಸರ್ಕಾರದ ನಾಯಕರನ್ನು ಮೊದಲು ಸರ್ಕಾರ ರಚನೆಗೆ ಆಹ್ವಾನಿಸಬೇಕೆಂದು ಹಿರಿಯ ವಕೀಲ ದುಷ್ಯಂತ್ ದೇವ್ ಹೇಳುತ್ತಾರೆ.


SCROLL FOR NEXT