ರಾಜಕೀಯ

200 ಕೋಟಿ ನೀಡಿದ್ದರೂ ಜೆಡಿಎಸ್ ನ ಯೊವೊಬ್ಬ ಶಾಸಕರು ಬಿಜೆಪಿಗೆ ಹೋಗಲ್ಲ- ಜಿ.ಟಿ. ದೇವೇಗೌಡ

Nagaraja AB

ಹೈದ್ರಾಬಾದ್ : ನಾಳೆ ವಿಶ್ವಾಸಮತ ಯಾಚನೆಗೆ ಸುಪ್ರೀಂಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ  ಕುದುರೆ ವ್ಯಾಪಾರದ ಆರೋಪ ಕೇಳಿ ಬರುತ್ತಿದೆ. ಈ ಮಧ್ಯೆ, ಬಿಜೆಪಿ ಎಷ್ಟೇ  ದೊಡ್ಡ ಮೊತ್ತದ ಹಣ ನೀಡಿದ್ದರೂ ಯಾವೊಬ್ಬ ಜೆಡಿಎಸ್ ಶಾಸಕರು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಪಪಡಿಸಿದ್ದಾರೆ.

 ಜೆಡಿಎಸ್ ನ ಎಲ್ಲಾ ಶಾಸಕರು ಸಂಪರ್ಕದಲ್ಲಿದ್ದಾರೆ. 100 ಅಲ್ಲ , 200 ಕೋಟಿ ಕೊಟ್ಟರೂ ಯಾವೊಬ್ಬ ಜೆಡಿಎಸ್ ಶಾಸಕರು ಬಿಜೆಪಿ ಹೋಗುವುದಿಲ್ಲ ಎಂದು ಜಿ. ಟಿ. ದೇವೇಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಇಂದು ಬೆಳಿಗ್ಗೆ ಹೈದ್ರಾಬಾದ್ ಗೆ ಬಂದಿದ್ದು, ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸುವುದಾಗಿ ಅವರು ಹೇಳಿದ್ದಾರೆ.

ಸರ್ಕಾರ ರಚನೆ  ಹಿನ್ನೆಲೆಯಲ್ಲಿ ಬಿಜೆಪಿಯ ಕುದುರೆ ವ್ಯಾಪಾರದ ಭೀತಿಯಿಂದಾಗಿ  ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಹೈದ್ರಾಬಾದಿನ  ಪಾರ್ಕ್ ಹೈಟ್ ಹೊಟೇಲ್ ಗೆ  ಸ್ಥಳಾಂತರಿಸಲಾಗಿತ್ತು.

ಬಿಜೆಪಿಯಿಂದ ಶಾಸಕರ ಖರೀದಿ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕದ ಶಾಸಕರನ್ನು ಬಿಜೆಪಿಯ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಕೂಡಾ ಆಹ್ವಾನಿಸಿದ್ದರು.

SCROLL FOR NEXT