ರಾಜಕೀಯ

ರಾಜ್ಯಕ್ಕೆ ಆಗಮಿಸುವ ಕರ್ನಾಟಕ ಶಾಸಕರ ಸ್ವಾಗತಕ್ಕೆ ಕೇರಳ ಪ್ರವಾಸೋದ್ಯಮ ಸಿದ್ಧ

Raghavendra Adiga
ಕೊಚ್ಚಿ(ಕೇರಳ): ಕರ್ನಾಟಕ ರಾಜಕೀಯ ಬೆಳವಣಿಗೆಗಳು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಸಧ್ಯ ಬಿಜೆಪಿಯವರಿಂದ ತಮ್ಮ ಶಾಸಕರನ್ನು ದೂರವಿಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಅವರನ್ನು ಕೇರಳದ ಕೊಚ್ಚಿನ್ ಹಾಗೂ ಪಾಂಡಿಚೇರಿಗೆ ಕಳುಹಿಸಲು ತೀರ್ಮಾನಿಸಿದೆ.
ಕೊಚ್ಚಿನ್ ನಲ್ಲಿ ಕರ್ನಾಟಕ ಶಾಸಕರಿಗಾಗಿ ತಾರಾ ಹೋಟೆಲ್ ನಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊಚ್ಚಿನ್ ನ ಕ್ರೌನ್ ಪ್ಲಾಜಾ ಹೋಟೆಲ್ ನಲ್ಲಿ ಕೆಲ ಕೊಠಡಿಗಳನ್ನು ಕಾಯ್ದಿರಲಾಗಿದೆಯಲ್ಲದೆ ಕೊಚ್ಚಿನ್ ಗೆ ಕರ್ನಾಟಕ ಶಾಸಕರು ಆಗಮಿಸುವ ಕಾರಣ ಸುರಕ್ಷತೆಯನ್ನು ಬಲಪಡಿಸುವ ಸಂಬಂಧ ಹೋಟೆಲ್ ನ ಸುತ್ತ ಪೋಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಕೇರಳ ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಏತನ್ಮಧ್ಯೆ ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಶಾಸಕರು ಕೇರಳದಲ್ಲಿ ಆತಿಥ್ಯ ವಹಿಸಲು ಸರ್ಕಾರದ ಸಮ್ಮತಿ ಇದೆ ಎಂದು ತಿಳಿಸಿದ್ದಾರೆ.
"ಕರ್ನಾಟಕದ ಚುನಾಯಿತ ಶಾಸಕರು ಕೇರಳಕ್ಕೆ ಆಗಮಿಸುತ್ತಿರುವ ವಿಚಾರ ನನಗೆ ಬಲ್ಲ ಮೂಲಗಳಿಂದ ತಿಳಿಯಿತು. ರಾಜ್ಯದ ಪ್ರವಾಸೋದ್ಯಮ ಸಚಿವರಾಗಿ ನಾನು ವರನ್ನು ಸ್ವಾಗತಿಸಲು ಮತ್ತು ಅವರಿಗೆ ನೆರವಾಗಲು ಸಂತೋಷಿಸುತ್ತೇವೆ. ಇಲ್ಲಿ ಯಾವ ಬಗೆಯ ಕುದುರೆ ವ್ಯಾಪಾರದ ಭಯವಿಲ್ಲ" ಟ್ವಿಟ್ಟರ್ ನಲ್ಲಿ ಸಚಿವರು ಬರೆದುಕೊಂಡಿದ್ದಾರೆ.
SCROLL FOR NEXT