ನಿನ್ನೆ ನಗರದ ಹೊಟೇಲೊಂದರಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯ ಮುನ್ನ ಭದ್ರತಾ ಸಿಬ್ಬಂದಿಯಿಂದ ಪರಿಶೀಲನೆ 
ರಾಜಕೀಯ

ಸರ್ಕಾರ ರಚನೆ: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಅರ್ಧ ಯುದ್ಧ ಗೆದ್ದ ಸಂತೋಷ; ಇನ್ನರ್ಧದ್ದೇ ಚಿಂತೆ

ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದು ಕಾಂಗ್ರೆಸ್ -ಜೆಡಿಎಸ್ ...

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದು ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟಕ್ಕೆ ಗೆಲುವು ಆಗಿರಬಹುದು, ಆದರೆ ರಾಜಕೀಯ ಹೋರಾಟ ಅರ್ಧದಷ್ಟು ಮಾತ್ರ ಮುಗಿದಿದ್ದು ಇನ್ನೂ ಅರ್ಧ ಹೋರಾಟ ಬಾಕಿ ಉಳಿದಿದೆ.

ಹೆಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಸದನದಲ್ಲಿ ಬಹುಮತ ಸಾಬೀತುಪಡಿಸುವ ದಿನ ಕಾಂಗ್ರೆಸ್-ಜೆಡಿಎಸ್ ನ ನಿಜವಾದ ಮೈತ್ರಿ ಗೊತ್ತಾಗಲಿದೆ. ಸರ್ಕಾರ ರಚನೆಗೆ ಕೊನೆಯ ವೇಳೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ನ ನಾಯಕರು ತಮ್ಮ ಶಾಸಕರು ಹದ್ದುಬಸ್ತಿನಲ್ಲಿಡಲು ಹೆಣಗುತ್ತಿದ್ದಾರೆ.

ಈಗಾಗಲೇ ಯುದ್ಧದಲ್ಲಿ ಅರ್ಧದಷ್ಟು ವಿಜಯ ಕಂಡಿದ್ದೇವೆ. ಇನ್ನು ಮುಂದೆ ಕುಮಾರಸ್ವಾಮಿಯವರು ಬಹುಮತ ಸಾಬೀತುಪಡಿಸಬೇಕಿದೆ. ನಮ್ಮ ಶಾಸಕರ ಮೇಲೆ ನಂಬಿಕೆಯಿದೆ. ಆದರೆ ಜನರು ಮತದಾನದಿಂದ ದೂರವುಳಿದರೆ ಅನು ಮಾಡುವುದು, ನಾವೇ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುವುದು ಎನ್ನುತ್ತಾರೆ ಕಾಂಗ್ರೆಸ್ ನ ಹಿರಿಯ ಮುಖಂಡರೊಬ್ಬರು.
 
ವಿಶ್ವಾಸಮತ ಸಾಬೀತುಪಡಿಸುವ ವಿಶ್ವಾಸದಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರಿದ್ದರೂ ಕೂಡ ಬಿಜೆಪಿಯ ಮೇಲೆ ಕಣ್ಣಿಡಲಾಗಿದೆ. ಆದರೆ ಇನ್ನು ಶಾಸಕರನ್ನು ಬಿಜೆಪಿ ಸೆಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಕೆಲವು ಮುಖಂಡರು. ಮೈತ್ರಿಸರ್ಕಾರ ರಚನೆ ಸಂದರ್ಭದಲ್ಲಿ ಶಾಸಕರ ಮಧ್ಯೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ ಅವುಗಳೆಲ್ಲವನ್ನೂ ಮೀರಿ 2020ರವರೆಗೆಯಾದರೂ ನಾವು ಸುಗಮವಾಗಿ ಸರ್ಕಾರ ನಡೆಸಿಕೊಂಡು ಹೋಗುತ್ತೇವೆ ಎನ್ನುವ ವಿಶ್ವಾಸವಿದೆ ಎನ್ನುತ್ತಾರೆ ಇನ್ನೊಬ್ಬ ಕಾಂಗ್ರೆಸ್ ಮುಖಂಡರು.

ಸುಪ್ರೀಂ ಕೋರ್ಟ್ ನಮ್ಮ ಪರವಾಗಿ ತೀರ್ಪು ಕೊಟ್ಟಿದೆ. ಬಿಜೆಪಿ ಇನ್ನು ಏನೂ ಮಾಡಲು ಸಾಧ್ಯವಿಲ್ಲ. ಆದರೂ ಕೂಡ ನಾವು ಜಾಗೃತರಾಗಿರಬೇಕು. ಈಗಲೂ ಕೂಡ ನಾವು ಜಾಗರೂಕರಾಗಿದ್ದೇವೆ ಎನ್ನುತ್ತಾರೆ ಕಾಂಗ್ರೆಸ್ ನ ಮುಖಂಡರೊಬ್ಬರು.

ಕುಮಾರಸ್ವಾಮಿಯವರು ಪ್ರಮಾಣವಚನ ಸ್ವೀಕರಿಸುವ ದಿನ ಶಾಸಕರನ್ನೆಲ್ಲಾ ಹೊಟೇಲ್ ಗೆ ಬರಲು ಹೇಳಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೇಳಲಾಗುವುದು. ಕುಮಾರಸ್ವಾಮಿಯವರು ವಿಶ್ವಾಸಮತ ತೆಗೆದುಕೊಳ್ಳುವವರೆಗೆ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಮನೆಗೆ ಕಳುಹಿಸುವುದಿಲ್ಲ ಎಂದರು.

ಬಿ ಎಸ್ ಯಡಿಯೂರಪ್ಪನವರು ಮೊನ್ನೆ ಶನಿವಾರ ಸದನದಲ್ಲಿ ವಿಶ್ವಾಸಮತ ಕೋರುತ್ತಿದ್ದರೆ ಅಲ್ಲಿ ಕ್ರಾಸ್ ವೋಟಿಂಗ್ ಮಾಡುವ ಸಂದೇಹದಲ್ಲಿದ್ದ ಕಾಂಗ್ರೆಸ್ ಶಾಸಕರ ಮೇಲೆ ಈಗಲೂ ನಾಯಕರು ಹದ್ದಿನ ಕಣ್ಣಿರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!