ಬಳ್ಳಾರಿ: ಬಳ್ಳಾರಿ ಲೋಕಸಭೆ ಉಪ ಚುನಾವಣೆಗೆ ಸಮ್ಮಿಶ್ರ ಸರ್ಕಾರದ ಪಾಲಪದಾರ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿರುವ ವಿ,ಎಸ್ ಉಗ್ರಪ್ಪ ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಎಲ್ಲಾ ಸಾಮರ್ಥ್ಯವನ್ನು ಬಳಸುತ್ತಿದೆ. ಬಿಜೆಪಿಗೆ ನೆಕ್ ಟು ನೆಕ್ ಫೈಟ್ ಕೊಡಲು ಸಿದ್ಥತೆ ನಡೆಸಿದೆ.
ಉಗ್ರಪ್ಪ ಅವರು ಬಳ್ಳಾರಿಗೆ ಹೊರಗಿನವರು ಎಂಬ ಟ್ಯಾಗ್ ನೀಡಲಾಗಿದೆ, ಬಳ್ಳಾರಿ ಮೇಲೆ ರೆಡ್ಡಿ ಬ್ರದರ್ಸ್ ಮತ್ತು ಶ್ರೀರಾಮುಲು ಅವರಿಗಿರುವ ಹಿಡಿತವನ್ನು ಹೇಗೆ ಸಡಿಲಗೊಳಿಸುವ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ವಿ,ಎಸ್ ಉಗ್ರಪ್ಪ ದಿ .ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರ:ಬಳ್ಳಾರಿಯಲ್ಲಿ ನಿಮ್ಮ ಪರವಾಗಿ ಕೆಲಸ ಮಾಡುವ ಅಂಶಗಳು ಯಾವುವು?
ಶ್ರೀರಾಮುಲು ಮೂರು ಬಾರಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ತಾವು ಜನರ ಪರವಾಗಿ ಐದು ವರ್ಷ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು. ತಾವು ರಾಜೀನಾಮೆ ನೀಡುವಾಗ ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ಜನರಿಗೆ ವಂಚನೆ ಮಾಡಿದ್ದಾರೆ, ಬಳ್ಳಾರಿ ಮತದಾರರ ವಿಶ್ವಾಸವನ್ನು ಅವರು ಕಳೆದುಕೊಂಡಿದ್ದಾರೆ, ಬಳ್ಳಾರಿಯಲ್ಲಿ ಅವರ ಜನಾಂಗದ ಅರ್ಹ ನಾಯಕರಿದ್ದರು, ಅವರೆಲ್ಲರನ್ನು ಬಿಟ್ಟು ತಮ್ಮ ಕುಟುಂಬದ ಸದಸ್ಯರನ್ನೆ ಅಭ್ಯರ್ಥಿಯಾಗಿಸಿದ್ದಾರೆ, ಶಾಂತಾ ಅವರು ಕಳೆದ ಬಾರಿ ಸಂಸದೆಯಾಗಿದ್ದಾಗ ಯಾವುದೇ ಅಭಿವೃದ್ದಿ ಕೆಲಸ ಮಾಡಲಿಲ್ಲ.
ಇಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ, ಇಲ್ಲ ಮೋದಿ ವಿರೋದಿ ಅಲೆ ಇದೆ, ಬಿಜೆಪಿ ನಾಯಕರು ಮೋದಿ ಹೆಸರನ್ನು ಹೇಳುವುದಕ್ಕೆ ಭಯ ಬೀಳುತ್ತಾರೆ, ತೈಲಬೆಲೆ ಏರಿಕೆ, ಹಣದುಬ್ಬರ, ಸಮ್ಮಿಶ್ರ ಸರ್ಕಾರ ರೈತರ ಕಲ್ಯಾಣಕ್ಕೆ ಇದೆ ಎಂಬ ಸತ್ಯ ವಿಶೇಷವಾಗಿ ರೈತರಿಗೆ ಅರಿವಾಗಿದೆ.
ಬಳ್ಳಾರಿ ಜನತೆಗೆ ನಿಮ್ಮ ಭರವಸೆ ಏನು?
ತಾವು ಆಯ್ಕೆ ಮಾಡಿದ ಸಂಸದ ತಮ್ಮ ಸಮಸ್ಯೆಗಳನ್ನು ಪ್ರತಿನಿಧಿಸಬೇಕು ಎಂಬ ಆಸೆಯಿರುತ್ತದೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣ ಯೋಜನೆ, ಕುಡಿತಿನಿ ವಿದ್ಯುತ್ ಯೋಜನೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೂ ಜಿಂದಾಲ್ ಪ್ಲಾಂಟ್ ಫೌಂಡೇಶನ್ ಗೆ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಶಂಕು ಸ್ಥಾಪನೆ ನೆರವೇರಿಸಿದ್ದರು. ಆದರೆ ಈ ಸಂಸದರು ಯಾವುದೇ ಕೆಲಸ ಮಾಡಿಲ್ಲ, ಕೈಗಾರಿಕೆಗಳ ಮೂಲಕ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತೇನೆ,
ಪ್ರ:ನಿಮ್ಮನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ನಿಮಗೆ ಆಶ್ಚರ್ಯವಾಯಿತೇ?
ಹಲವು ಪಕ್ಷಗಳು ನಾಮಪತ್ರ ಸಲ್ಲಿಕೆಗೆ ಅಂತಿಮ ಕ್ಷಣ ಇರುವಾಗ ಅಭ್ಯರ್ಥಿ ಹೆಸರು ಘೋಷಿಸುತ್ತವೆ, ಬಳ್ಳಾರಿ ಗಣಿಗಾರಿಕೆ ಬಗ್ಗೆ ನಾನು ನೀಡಿದ ವರದಿಯಿಂದಾಗಿ ನನ್ನ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನನ್ನ ಹೆಸರನ್ನು ಹೈಕಮಾಂಡ್ ಬಳಿ ಪ್ರಸ್ತಾಪಿಸಿದರು, ನಾನು ಪಕ್ಷದ ನಿಷ್ಠಾವಂತ ವ್ಯಕ್ತಿ, ಪ್ರತಿಯೊಬ್ಬರು ನನ್ನ ನಾಯಕರು ಹಾಗೂ ಹಿತೈಷಿಗಳು. ಕಾಂಗ್ರೆಸ್ ನ ತತ್ವಗಳಿಗೆ ನಾನು ಬದ್ಧನಾಗಿದ್ದೇನೆ.
ಪ್ರ: ಜೆಡಿಎಸ್ ಜೊತೆಗಿನ ಮೈತ್ರಿ ನಿಮಗೆ ಸಹಾಯ ಮಾಡುತ್ತದೆಯೆ?
ಕೇವಲ ಜೆಡಿಎಸ್ ಮಾತ್ರವಲ್ಲ, ಕಮ್ಯುನಿಷ್ಠ್ ಪಕ್ಷ, ಪ್ರಗತಿಪರ ಚಿಂತಕರು ಹಾಗೂ ವಿದ್ಯಾವಂತರು ಮತ್ತು ಸ್ತ್ರೀ ಶಕ್ತಿ ಗುಂಪುಗಳು ಬಳ್ಳಾರಿಯಲ್ಲಿ ನನಗೆ ಬೆಂಬಲ ನೀಡಿದ್ದಾರೆ.
ಗಣಿಗಾರಿಕೆ ಮುಚ್ಚಿದ್ದರಿಂದ ನಿರುದ್ಯೋಗ ಸಮಸ್ಯೆದೆ ಕಾರಣವಾಯಿತೆ?
ನಾವು ಅಕ್ರಮ ಗಣಿಗಾರಿಕೆ ಮಾತ್ರ ನಿಲ್ಲಿಸಿದ್ದೇವೆ, ಕಾನೂನು ಪ್ರಕಾರ ಮಾಡುವ ಗಣಿಗಾರಿಕೆಗೆ ಅವಕಾಶವಿದೆ, ರಾಜ್ಯವನ್ನು ಲೂಟಿ ಮಾಡುವುದರ ವಿರುದ್ಧ ನಮ್ಮ ಹೋರಾಟ, ರಾಜ್ಯದ ಹಿತಾಸಕ್ತಿ ಕಾಪಾಡುವುದು ನಮ್ಮ ಆದ್ಯತೆ. ಹೌದು ನಿರುದ್ಯೋಗ ಸಮಸ್ಯೆ ಹೆಚ್ಚಿದೆ, ಹೆಚ್ಚಿನ ಕೈಗಾರಿಕೆಗಳನ್ನು ತರುವ ಮೂಲಕ ನಿರುದ್ಯೋಗ ಸಮಸ್ಯೆ ಬಗೆಹರಿಸಲಾಗುತ್ತದೆ, ಅದಕ್ಕೆ ನಾನು ಬದ್ದನಾಗಿದ್ದೇನೆ.