ರಾಜಕೀಯ

ಪ್ರಾದೇಶಿಕ ಪಕ್ಷಗಳ ಒಗ್ಗಟ್ಟು ಪ್ರದರ್ಶಿಸಲು ಜನವರಿಯಲ್ಲಿ ರೈತರ ಬೃಹತ್ ರ್ಯಾಲಿ: ಕುಮಾರಸ್ವಾಮಿ

Shilpa D
ಬೆಂಗಳೂರು:  ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ರೈತರ ಬೃಹತ್ ರ್ಯಾಲಿ ಆಯೋಜಸಲಿದ್ದು, ಇದಕ್ಕಾಗಿ ಬಿಜೆಪಿಯೇತರ ಸರ್ಕಾರದ ಎಲ್ಲಾ ಮುಖ್ಯಮಂತ್ರಿಗಳು ಹಾಗೂ ಎಲ್ಲಾ ಪ್ರಾದೇಶಿಕ ಪಕ್ಷಗಳ ಮುಖಂಡರಿಗೂ ಆಹ್ವಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ.
ಈ  ಹಿಂದೆ  ತಾವು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಒಂದುಗೂಡಿದ್ದ ಎಲ್ಲಾ ವಿರೋಧ ಪಕ್ಷಗಳು ಮತ್ತೆ ರ್ಯಾಲಿಯಲ್ಲಿ ಒಗ್ಗೂಡಲಿವೆ ಎಂದು ತಿಳಿಸಿದ್ದಾರೆ.
ಪದ್ಮನಾಭನಗರದ ಎಚ್.ಡಿ ದೇವೇಗೌಡ ಅವರ ನಿವಾಸದಲ್ಲಿ  ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಭೇಟಿಯ ನಂತರ ಮಾತನಾಡಿದ ಕುಮಾರ ಸ್ವಾಮಿ,  ಡಿಸೆಂಬರ್ ಅಥವಾ ಜನವರಿ ತಿಂಗಳ ಆರಂಭದಲ್ಲಿ ಬೃಹತ್ ರ್ಯಾಲಿ ಆಯೋಜಿಸುವುದಾಗಿ ತಿಳಿಸಿದರು. 
ರೈತರ ಬೆಳೆ ಸಾಲ ಮನ್ನಾ ಯೋಜನೆ ಅನುಷ್ಠಾನಗೊಳಿಸುವ ಸಲುವಾಗಿ ಈ ರ್ಯಾಲಿ ಆಯೋಜಿಸಲಿದ್ದು, ಬಿಜೆಪಿಯೇತರ ಎಲ್ಲಾ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡುತ್ತೇನೆ, ಈ ರ್ಯಾಲಿಯಲ್ಲಿ ಎಲ್ಲಾ ಜಾತ್ಯಾತೀತ ಶಕ್ತಿಗಳು ಒಂದೇ ವೇದಿಕೆ ಮೇಲೆ ಬರಲಿವೆ ಎಂದು ಹೇಳಿದ್ದಾರೆ,
ಕುಮಾರ ಸ್ವಾಮಿ ಆಹ್ವಾನ ಮನ್ನಿಸಿ ಎಲ್ಲಾ ಮುಖ್ಯಮಂತ್ರಿಗಳು ಬಂದರೇ ಮತ್ತೊಮ್ಮೆ ಜಾತ್ಯಾತೀತ ಶಕ್ತಿ ಒಗ್ಗೂಡಿದಂತಾಗುತ್ತದೆ. ತಮ್ಮ ಸರ್ಕಾರದ ಸಾಲಮನ್ನಾ ಯೋಜನೆಗೆ ಕೇಂದ್ರ ಸರ್ಕಾರ ನೆರವು ನೀಡದ್ದಕ್ಕೆ ಸಿಎಂ ಕೋಪಗೊಂಡಿದ್ಜಾರೆ. ಜೊತೆಗೆ ರೈತರು ಕೂಡ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ, ಹೀಗಾಗಿ ಇದನ್ನೆ ಬಂಡವಾಳವಾಗಿಸಿಕೊಳ್ಳಲು ಸಿಎಂ ಕುಮಾರ ಸ್ವಾಮಿ ನಿರ್ಧರಿಸಿದ್ದಾರೆ. 
SCROLL FOR NEXT