ಸಂಪುಟ ವಿಸ್ತರಣೆ ಜೊತೆಗೆ ಖಾತೆ ಬದಲಾವಣೆ ಕಸರತ್ತು 
ರಾಜಕೀಯ

ಸಂಪುಟ ವಿಸ್ತರಣೆ ಜೊತೆಗೆ ಖಾತೆ ಬದಲಾವಣೆ ಕಸರತ್ತು: ಯಾರ್ಯಾರ ಸ್ಥಾನಕ್ಕೆ ಕುತ್ತು?

ಕಾಂಗ್ರೆಸ್ ನಲ್ಲಿ ಉಳಿದರಿರುವ ಆರು ಸಚಿವ ಸ್ಥಾನ ಭರ್ತಿಗೆ ಕಸರತ್ತು ಆರಂಭವಾಗಿದೆ. ಇರುವುದು ಕೇವಲ ಆರು ಸ್ಥಾನಗಳು, ಆದರೇ ಆಕಾಂಕ್ಷಿಗಳು ಮಾತ್ರ ...

ಬೆಂಗಳೂರು: ಕಾಂಗ್ರೆಸ್ ನಲ್ಲಿ ಉಳಿದರಿರುವ ಆರು ಸಚಿವ ಸ್ಥಾನ ಭರ್ತಿಗೆ ಕಸರತ್ತು ಆರಂಭವಾಗಿದೆ. ಇರುವುದು ಕೇವಲ ಆರು ಸ್ಥಾನಗಳು, ಆದರೇ ಆಕಾಂಕ್ಷಿಗಳು ಮಾತ್ರ ಡಬಲ್ ಇದ್ದಾರೆ, ಹೀಗಾಗಿ  ಕೆಲವು ಸಚಿವರುಗಳನ್ನು ಬದಲಾಯಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ತನ್ನ ಆರು ಸ್ಥಾನಗಳಲ್ಲಿ ಐದನ್ನು ಭರ್ತಿ ಮಾಡಿ ಒಂದನ್ನು ಖಾಲಿ ಉಳಿಸಿಕೊಳ್ಳಲು ತೀರ್ಮಾನಿಸಿದೆ, ಒಂದು ವೇಳೆ ಸಂಪುಟ ವಿಸ್ತರಣೆ ನಂತರ ಭಿನ್ನಮತ ಮತ್ತಷ್ಟು ಉಲ್ಬಣವಾದರೇ ಸಮಾಧಾನ ಪಡಿಸಲುಈ ಒಂದು ತಂತ್ರ ಅನುಸರಿಸಿದೆ ಎಂದು ಕೇಳಿ ಬಂದಿದೆ, 
ಪಕ್ಷಕ್ಕೆ ಒಳಿತಾಗಲು ಹಾಗೂ ಆಕಾಂಕ್ಷಿಗಳಿಗೆ ಅವಕಾಶ ಮಾಡಿಕೊಡಲು ಯ,ಟಿ ಖಾದರ್, ಕೃಷ್ಣ ಬೈರೇಗೌಡ ತಮ್ಮ ಖಾತೆಗಳನ್ನು ಬಿಟ್ಟುಕೊಡಲು ಸಿದ್ದರಿದ್ದಾರೆ. ಆಪರೇಷನ್ ಕಮಲ ಮಾಡಲು ಸಿದ್ದವಿರುವ ಬಿಜೆಪಿಗೆ ತಿರುಗೇಟು ಕೊಡಲು ಕೆಲ ಸಚಿವರು ತಮ್ಮ ಸ್ಥಾನ ಬಿಟ್ಟು ಕೊಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. 
ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಈಗಾಗಲೇ ತಯಾರಿ ನಡೆಸಿ ಪಟ್ಟಿ ಸಿದ್ದ ಮಾಡಿದೆ. ಕಾಂಗ್ರೆಸ್ ಮುಖಂಡರಾದ ಕೆ.ಸಿ ವೇಣುಗೋಪಾಲ್  ಮತ್ತು ರಾಹುಲ್ ಗಾಂಧಿ ಅವರನ್ನು  ಮುಂದಿನ ವಾರ ಭೇಟಿ ಮಾಡಲಿದ್ದು, ಅವರೇ ಪಟ್ಟಿಯನ್ನು ಫೈನಲ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ಘರ್ಷಣೆ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವನಾಂದ ಪಾಟೀಲ್ ರಾಜಿನಾಮೆ ನೀಡುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು. ಪಕ್ಷಕ್ಕೆ ಒಳಿತಾಗಬೇಕೆಂಬ ಹಿನ್ನೆಲೆಯಲ್ಲಿ ಹಲವು ಸಚಿವರು ತಮ್ಮ ಸ್ಥಾನ ತ್ಯಾಗ ಮಾಡಲು ನಿರ್ಧರಿಸಿದ್ದಾರೆ.
ಇನ್ನೂ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಮತ್ತು ರೋಷನ್ ಬೇಗ್  ಕೂಡ ಸಚಿವಗಿರಿಗೆ ಲಾಬಿ ನಡೆಸುತ್ತಿದ್ದಾರೆ, ಬಿಬಿಎಂಪಿಗೆ ಮೇಯರ್ ಸ್ಥಾನ ಗೆಲುವಿನಲ್ಲಿ ರೆಡ್ಡಿ  ಅರು ಪ್ರಮುಖ ಪಾತ್ರ ವಹಿಸಿದ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

ವೃತ್ತಿ ಜೀವನದ ಬಹು ದೊಡ್ಡ ಕನಸನ್ನು ರಿವೀಲ್ ಮಾಡಿದ ವೈಭವ್ ಸೂರ್ಯವಂಶಿ! Video

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!