ರಾಜಕೀಯ

ಬಳ್ಳಾರಿ ಅಭ್ಯರ್ಥಿಗಾಗಿ ಮೂಡದ ಒಮ್ಮತ: ಶ್ರೀರಾಮುಲು ಸಹೋದರಿ ಶಾಂತ ವಿರುದ್ಧ ಉಗ್ರಪ್ಪ ಫೈಟ್!

Shilpa D
ಬೆಂಗಳೂರು: ಲೋಕಸಭೆ ಉಪ ಚುನಾವಣೆ ಟಿಕೆಟ್ ಹಂಚಿಕೆ ವಿಚಾರಕ್ಕೆ ಬಳ್ಳಾರಿ ಜಿಲ್ಲೆಯ ನಾಯಕರ ಮಧ್ಯೆ ಉಂಟಾಗಿರುವ ಭಿನ್ನಮತ, ಗೊಂದಲಗಳು ಇನ್ನು ಮುಂದುವರಿದಿವೆ, ಹೀಗಾಗಿ ಇನ್ನೂ ಅಭ್ಯರ್ಥಿ ಫೈನಲ್ ಆಗಿಲ್ಲ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವುದು ಕಷ್ಟ ಎಂದು ಅರಿತಿರುವ ಕಾಂಗ್ರೆಸ್ ನಾಯಕರು ವಿಎಸ್ ಉಗ್ರಪ್ಪ ಹೆಸರನ್ನು ತೇಲಿ ಬಿಟ್ಟಿದ್ದಾರೆ.
ವಕೀಲ ವೃತ್ತಿಯಿಂದ ರಾಜಕಾರಣಿಯಾಗಿರುವ ಉಗ್ರಪ್ಪ  ನಾಯಕ ಸಮುದಾಯದ ಪ್ರಭಾವಶಾಲಿ ಮುಖಂಡ,  ಹೀಗಾಗಿ ಶ್ರೀರಾಮುಲು ಸಹೋದರಿ ಶಾಂತ ವಿರುದ್ಧ ಉಗ್ರಪ್ಪ ಪರ್ಫೆಕ್ಟ್ ಅಭ್ಯರ್ಥಿ ಎಂದು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.ಬಳ್ಳಾರಿಯ ಆರು ಶಾಸಕರು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಒಮ್ಮತ ತೋರುತ್ತಿಲ್ಲ,  ಹೀಗಾಗಿ ಪವಾಗಡ ಎಸ್ ಟಿ ನಾಯಕ ಉಗ್ರಪ್ಪ ಅವರೇ ಸಮರ್ಥರು ಎಂದು ಕಾಂಗ್ರೆಸ್ ನಂಬಿದೆ.
ಎರಡು ಸಂಸತ್ ಹಾಗೂ ಎರಡು ವಿಧಾನ ಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿ ಆಯ್ಕೆ ಮಾಡುವಲ್ಲಿ ವಿಫಲವಾಗಿದೆ, ಬಳ್ಳಾರಿಯ ಆರು ಕಾಂಗ್ರೆಸ್ ಶಾಸಕರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್  ಹಾಗೂ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಮಾಜಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ,ಕೆ ಶಿವಕುಮಾರ್ ಸಭೆ ನಡೆಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಬಳ್ಳಾರಿಯ ಪ್ರಮುಖ ನಾಯಕರುಗಳಾದ ಲಾಡ್ ಸಹೋದರರು ಶುಕ್ರವಾರ ನಡೆದ ಸಭೆಗೆ ಗೈರಾಗಿದ್ದರು ಪರಮೇಶ್ವರ್ ನಾಯಕ್, ಇ. ತುಕರಾಂ ಮತ್ತು ಬಿ, ನಾಗೇಂದ್ರದ್ದು ಒಂದು ಬಣವಾದರೇ ಭೀಮಾ ನಾಯಕ್ ಮತ್ತು ಜೆ.ಎನ್ ಗಣೇಶ್, ಆನಂದ್ ಸಿಂಗ್ ಅವರದ್ದು ಮತ್ತೊಂದು ಬಣವಾಗಿದ್ದು ತಮ್ಮ ನಿಷ್ಠರಿಗೆ ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ. ಯಾವುದೇ ಅಭ್ಯರ್ಥಿ ಫೈನಲ್ ಆಗದ ಕಾರಣ, ಡಿ.ಕೆ ಶಿವಕುಮಾರ್ ಎಲ್ಲರೂ ಒಪ್ಪುವಂತ ಸಹಮತದ ಅಭ್ಯರ್ಥಿಯಾದ ಉಗ್ರಪ್ಪ ಅವರ ಹೆಸರನ್ನು ಹೇಳಿದ್ದಾರೆ,
ಉಗ್ರಪ್ಪ ಪಕ್ಷದ ನಿಷ್ಠಾವಂತ ಕಾರ್ಯಕರ್ತ,, ಉಗ್ರಪ್ಪ ಅವರನ್ನು ಬಳ್ಳಾರಿಯಿಂದ ಕಣಕ್ಕಿಳಿಸುವ ಮೂಲಕ ಸ್ಥಳೀಯ ಶಾಸಕರ ಎಲ್ಲಾ ರೀತಿಯ ಭಿನ್ನಮತ ಹತ್ತಿಕ್ಕಬಹುದು ಹಾಗೂ ಉಗ್ರಪ್ಪ ಹಣಕಾಸಿನಲ್ಲಿ ಅಷ್ಟೊಂದು ಸಮರ್ಥರಾಗಿರದ ಕಾರಣ ಸ್ಥಳೀಯ ಶಾಸಕರು ಅವರಿಗೆ ಸಂಪನ್ಮೂಲ ಸಂಗ್ರಹಿಸಿ ನೀಡಬೇಕೆಂದು ನಿರ್ಧರಿಸಲಾಗಿದೆ ಎಂದು ಹೆಸರು ಹೇಳಲು ಬಯಸದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಬಳ್ಳಾರಿ ರೆಡ್ಡಿ ಸಹೋದರರ ವಿರುದ್ಧ ಅಕ್ರಮ ಗಣಿಗಾರಿಕೆ ಹಗರಣ ಬಯಲಿಗೆಳೆದದ್ದು,  ಉಗ್ರಪ್ಪ ಅವರಿಗೆ ಸಹಾಯವಾಗಲಿದೆ ಎಂದು ಹೇಳಲಾಗಿದೆ, 
ಪ್ರಸಿದ್ದ ಎಸ್ ಟಿ ನಾಯಕ, ಕ್ಲೀನ್ ಇಮೇಜ್, ಹಾಗೂ ಪಕ್ಷದ ನಿಷ್ಠಾವಂತ ಶಾಸಕ ಹಾಗೂ ಸಿದ್ದರಾಮಯ್ಯ ಆಪ್ತ ಆಗಿರುವ ಉಗ್ರಪ್ಪ ಬಳ್ಳಾರಿಗೆ ಹೇಳಿ ಮಾಡಿಸಿದ ಅಭ್ಯರ್ಥಿ, ಅವರನ್ನು ಎಲ್ಲರು ಒಪ್ಪುತ್ತಾರೆ ಎಂದು ಮತ್ತೊಬ್ಬ ಕಾಂಗ್ರೆಸ್ ಮುಖಂಡ ತಿಳಿಸಿದ್ದಾರೆ.
SCROLL FOR NEXT