ಅನಿತಾ ಕುಮಾರಸ್ವಾಮಿ ಮತ್ತು ಎಲ್,.ಆರ್ ಶಿವರಾಮೇಗೌಡ
ರಾಮನಗರ: ನವೆಂಬರ್ 3 ರಂದು ನಡೆಯು ಉಪ ಚುನಾವಣೆಗೆ ರಾಮನಗರದಿಂದ ಸಿಎಂ ಕುಮಾರ ಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ರಾಮನಗರ ಚುನವಣಾಧಿಕಾರಿ ಕೃಷ್ಣ ಮೂರ್ತಿ ಅವರಿಗೆ ಎಸ್ ಕಚೇರಿಯಲ್ಲಿ ನಾಮ ಪತ್ರ ಸಲ್ಲಿಸಿದರು, ಈ ವೇಳೆ ಪತಿ ಕುಮಾರ ಸ್ವಾಮಿ ಕೂಡ ಹಾಜರಿದ್ದರು.
ಇದಕ್ಕೂ ಮುನ್ನ ಬೆಂಗಳೂರಿನ ಬನಶಂಕರಿಯಲ್ಲಿರುವ ಬನಶಂಕರಿ ದೇವಾಸ್ಥಾನಕ್ಕೆ ತೆರಳಿದ್ದ ಅನಿತಾ ಕುಮಾರಸ್ವಾಮಿ 'ಭಿ'ಫಾರಂ ಗೆ ಪೂಜೆ ಸಲ್ಲಿಸಿದರು.
ಇನ್ನೂ ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ಎಲ್.ಆರ್ ಶಿವರಾಮೇಗೌಡ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು,ಸಚಿವ ಸಾ.ರಾ ಮಹೇಶ್, ಜಾರ್ಜ್,ಡಿ.ಸಿ ತಮ್ಮಣ್ಣ ಹಾಗೂ ಮಂಡ್ಯ ಶಾಸಕರು ಹಾಜರಿದ್ದರು.