ಸಾಂದರ್ಭಿಕ ಚಿತ್ರ 
ರಾಜಕೀಯ

ಅವರು ಮಡಿದು ಏಳು ವರ್ಷವಾಯಿತು, ಇನ್ನೂ ಶಿವಮೊಗ್ಗ ಜಿಲ್ಲಾ ರಾಜಕೀಯದಲ್ಲಿ ಎಸ್ ಬಂಗಾರಪ್ಪ ಹೆಸರು ಜೀವಂತ!

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದ್ದು ಮೂರು ಪ್ರಮುಖ ರಾಜಕೀಯ ...

ಶಿವಮೊಗ್ಗ: ನವೆಂಬರ್ 3ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರುತ್ತಿದೆ. ರಾಜ್ಯದ ಪ್ರಮುಖ ಮೂರು ರಾಜಕೀಯ ಪಕ್ಷಗಳು ತೀವ್ರ ಹಣಾಹಣಿಗಿಳಿದಿವೆ. ಈ ಮಧ್ಯೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಒಂದು ಮಾತು ಕೇಳಿಬರುತ್ತಿದೆ. ಅದು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ.

ಎಸ್ ಬಂಗಾರಪ್ಪನವರು ತೀರಿಕೊಂಡು 7 ವರ್ಷ ಕಳೆದಿವೆ. ಆದರೂ ಕೂಡ ಈ ವರ್ಣರಂಜಿತ ರಾಜಕಾರಣಿ, ಮಾಸ್ ಲೀಡರ್ ನ ಹೆಸರು ಮೂರೂ ಪಕ್ಷಗಳ ರಾಜಕೀಯ ನಾಯಕರ ನಾಲಿಗೆಯಲ್ಲಿ ಹರಿದಾಡುತ್ತಿದೆ. ಅಂದರೆ ಬಂಗಾರಪ್ಪನವರು ತಮ್ಮ ಜೀವಿತಾವಧಿಯ ರಾಜಕೀಯ ಜೀವನದಲ್ಲಿ ಮೂರೂ ಪಕ್ಷಗಳೊಂದಿಗೆ ಮತ್ತು ಅದರ ನಾಯಕರೊಂದಿಗೆ ಗುರುತಿಸಿಕೊಂಡಿದ್ದರು.

ಕಾಂಗ್ರೆಸ್ ಗೆ ಆಗಾಗ ಹೋಗಿ ಬರುತ್ತಿದ್ದ ಬಂಗಾರಪ್ಪನವರು ಸಣ್ಣ ಅವಧಿಗೆ ಬಿಜೆಪಿಯಲ್ಲಿ ಕೂಡ ಇದ್ದರು. ನಂತರ ಸಮಾಜವಾದಿ ಪಕ್ಷ ಸೇರಿಕೊಂಡರು. ತಮ್ಮ ರಾಜಕೀಯದ ಕೊನೆಯ ಹಂತದಲ್ಲಿ ಅವರು ಇದ್ದದ್ದು ಜೆಡಿಎಸ್ ನಲ್ಲಿ. ಇದೀಗ ನವೆಂಬರ್ 3ರ ಉಪ ಚುನಾವಣೆಯಲ್ಲಿ ಮೂರೂ ಪಕ್ಷಗಳು ತಮ್ಮ ಪಕ್ಷದ ಜೊತೆ ಬಂಗಾರಪ್ಪನವರ ಹೆಸರನ್ನು ಗುರುತಿಸಿಕೊಂಡು ಮತದಾರರನ್ನು ಸೆಳೆಯಲು ಮುಂದಾಗಿವೆ.

ನಿನ್ನೆ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಚುನಾವಣಾ ಪ್ರಚಾರದ ವೇಳೆ ಮಾತನಾಡಿ, ಎಸ್ ಬಂಗಾರಪ್ಪನವರು ನನ್ನ ರಾಜಕೀಯ ಗುರುಗಳು. ಜೆಡಿಎಸ್ ವರಿಷ್ಠ ದೇವೇಗೌಡರು 1996ರಲ್ಲಿ ಪ್ರಧಾನ ಮಂತ್ರಿಯಾದಾಗ ಬಂಗಾರಪ್ಪನವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಎಲ್ಲಾ ಅವಕಾಶಗಳು ಅವರ ಮುಂದಿದ್ದವು. ಆದರೆ ದೇವೇಗೌಡರು ಆಗ ಬಂಗಾರಪ್ಪನವರನ್ನು ಪರಿಗಣಿಸಲಿಲ್ಲ. ಆ ನೋವನ್ನು ಬಂಗಾರಪ್ಪನವರೇ ನನಗೆ ಹಲವು ಬಾರಿ ಹೇಳಿಕೊಂಡಿದ್ದರು ಎಂದಿದ್ದಾರೆ.

ತಮ್ಮ ಮಾತನ್ನು ಮುಂದುವರಿಸುತ್ತಾ ಹಾಲಪ್ಪ, ಇಂದು ಜೆಡಿಎಸ್ ನವರು ಬಂಗಾರಪ್ಪನವರನ್ನು ಗುಣಗಾನ ಮಾಡುತ್ತಾರೆ. ಅವರ ಪುತ್ರ ಮಧು ಬಂಗಾರಪ್ಪನವರ ಪರ ಪ್ರಚಾರ ಮಾಡುವಾಗ ಬಂಗಾರಪ್ಪನವರ ಹೆಸರನ್ನು ಬಳಸಿಕೊಳ್ಳುತ್ತಾರೆ ಎಂದು ಟೀಕಿಸಿದರು.ಬಂಗಾರಪ್ಪನವರ ಹೆಸರು ಹೇಳಿಕೊಂಡು ಜೆಡಿಎಸ್ ನವರು ಮೊಸಳೆ ಕಣ್ಣೀರು ಹಾಕುವುದನ್ನು ಮೊದಲು ಬಿಡಬೇಕು ಎಂದರು.

ಇನ್ನೊಂದೆಡೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿದರೆ  ಅವರ ತಂದೆ ಎಸ್ ಬಂಗಾರಪ್ಪನವರಿಗೆ ಗೌರವ ಸಲ್ಲಿಸಿದಂತೆ ಎಂದಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರು, ಬಂಗಾರಪ್ಪನವರು ಜೆಡಿಎಸ್ ಗೆ ಸೇರಿದರೂ ಅವರನ್ನು ನಮಗೆ ಹೆಚ್ಚು ಸಮಯ ಉಳಿಸಿಕೊಳ್ಳಲಾಗಲಿಲ್ಲ. ಅವರ ಪುತ್ರ ಮಧು ಬಂಗಾರಪ್ಪ ನಮ್ಮ ಜೊತೆಗೆ ಸೇರಿ ಶಾಸಕ ಕೂಡ ಆಗಿದ್ದಾರೆ. ಕಾಂಗ್ರೆಸ್ ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಒಪ್ಪಿಗೆ ಮೇರೆಗೆ ಸಹಮತದಿಂದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪನವರನ್ನು ಕಣಕ್ಕಿಳಿಸಿದ್ದೇವೆ, ಅವರನ್ನು ಆಶೀರ್ವದಿಸಿ ಎಂದಿದ್ದಾರೆ.

ಎಸ್ ಬಂಗಾರಪ್ಪನವರು ಕಾಂಗ್ರೆಸ್ ನಲ್ಲಿದ್ದಾಗ ಕಾಗೋಡು ತಿಮ್ಮಪ್ಪ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದರು. ಅವರಿಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದರೆ 80 ಮತ್ತು 90ರ ದಶಕದಲ್ಲಿ ಬಗರ್ ಹುಕುಂ ಸಮಸ್ಯೆಯನ್ನು ಬಗೆಹರಿಸಬಹುದಾಗಿತ್ತು. ಇದೀಗ ಮಧು ಬಂಗಾರಪ್ಪನವರನ್ನು ಕಣಕ್ಕಿಳಿಸುವ ಮೂಲಕ ಕಾಗೋಡು ತಿಮ್ಮಪ್ಪ ಸೌಜನ್ಯ ಮೆರೆದಿದ್ದಾರೆ ಎಂದು ದೇವೇಗೌಡ ಹೇಳಿದ್ದಾರೆ.

2004ರಲ್ಲಿ ಬಂಗಾರಪ್ಪನವರು ಬಿಜೆಪಿ ಸೇರಿದಾಗ ಜಿಲ್ಲಾ ಘಟಕದಲ್ಲಿ ಬದಲಾವಣೆ ಕಂಡುಬಂತು. ಈಡಿಗ ಸಮುದಾಯದಿಂದ ಬಿಜೆಪಿಗೆ ಬಲ ಬಂದಿತು. ಬಂಗಾರಪ್ಪನವರ ಶಿಷ್ಯ ಹರತಾಳು ಹಾಲಪ್ಪ ಮತ್ತು ಬೇಲೂರು ಗೋಪಾಲಕೃಷ್ಣ ಬಿಜೆಪಿಗೆ ಸೇರಿ ಶಾಸಕರಾದರು. 2005ರಲ್ಲಿ ಬಂಗಾರಪ್ಪನವರು ಬಿಜೆಪಿ ತೊರೆದಾಗ ಇವರಿಬ್ಬರು ಬಿಟ್ಟು ಹೋಗಲಿಲ್ಲ. ಇದೀಗ ಕುಮಾರ ಬಂಗಾರಪ್ಪ ಕೂಡ ಬಿಜೆಪಿಯಲ್ಲಿದ್ದು ಪಕ್ಷಕ್ಕೆ ಬಲ ಸಿಕ್ಕಿದೆ. ಈಡಿಗ ಸಮುದಾಯದವರ ಬೆಂಬಲವಿದೆ. ಹೀಗಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪಕ್ಷಗಳಿಗೆ ಉಪ ಚುನಾವಣೆಯಲ್ಲಿ ಈಡಿಗ ಸಮುದಾಯದಿಂದ ಬೆಂಬಲ ಸಿಗುವುದು ಕಷ್ಟ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT