ಬಿಎಸ್ ಯಡಿಯೂರಪ್ಪ 
ರಾಜಕೀಯ

ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ: ಬಿಎಸ್ ವೈ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕ ಶ್ರೀರಾಮುಲು ಅವರನ್ನು 420 ಎಂದು ಕರೆಯುವ...

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕ ಶ್ರೀರಾಮುಲು ಅವರನ್ನು 420 ಎಂದು ಕರೆಯುವ ಮೂಲಕ ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ಬುಧವಾರ ಹೇಳಿದ್ದಾರೆ. 
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದ ಭರಾಟೆಯಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ. ಈ ತರಹದ ಮಾತುಗಳು ಅವರ ಘನತೆಗೆ ತಕ್ಕದ್ದಲ್ಲ. ಅವರು ಈ ಕೂಡಲೇ ಶ್ರೀರಾಮುಲು ಅವರನ್ನು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಮಾಜಿ ಸಿಎಂಗೆ ಸಲಹೆ ನೀಡಿದ್ದಾರೆ.
ಮೂರು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಬಿಎಸ್ ವೈ, ಬಳ್ಳಾರಿ, ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಈಗಾಗಲೇ ಗೆದ್ದಿದ್ದೇವೆ. ಹೆಚ್ಚು ಅಂತರದ ಗೆಲುವಿಗೆ ಪ್ರಯತ್ನ ನಡೆದಿದೆ ಎಂದರು.
ಆರೋಪ- ಪ್ರತ್ಯಾರೋಪಗಳಿಗೆ ಜನ ಮುಂದಿನ ತಿಂಗಳ 5ರಂದು ಉತ್ತರಿಸಲಿದ್ದಾರೆ. ಮಂಡ್ಯ ಪ್ರಚಾರದ ವೇಳೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು. ಚುನಾವಣೆಯ ಅಂತಿಮ ತೀರ್ಪು ಮತದಾರನದ್ದು. ಕುಮಾರಸ್ವಾಮಿ  ಮತ್ತವರ ವಿತ್ರಪಕ್ಷಗಳು ತಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರೆಂದು ಸ್ಪಷ್ಟಪಡಿಸಲಿ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಡದಿ ಟೌನ್ ಶಿಪ್: ಸರ್ವೇಗೆ ಬಂದ ಅಧಿಕಾರಿಗಳಿಗೆ ರೈತ ಮಹಿಳೆಯರಿಂದ ಪೊರಕೆ ಏಟು: ಕಾರಿನ ಗ್ಲಾಸ್ ಪೀಸ್!

ಅರೆಂಜ್ ಮ್ಯಾರೇಜ್‌ ತಪ್ಪಿಸಲು ರಸ್ತೆಯಲ್ಲೇ ತಲೆ ಬೋಳಿಸಿಕೊಂಡ ಯುವತಿ; ವಿಡಿಯೋ ವೈರಲ್​!

ಮೋದಿಗೆ ಕೊಲೆ ಬೆದರಿಕೆ: ಖಲಿಸ್ತಾನಿ ಉಗ್ರರಿಂದ ಪ್ರಧಾನಿಯ ಹರಿಯಾಣ ರ್ಯಾಲಿ ಟಾರ್ಗೆಟ್!

NatWest ವಿಜಯೋತ್ಸವಕ್ಕೆ 24 ವರ್ಷ: ಕುಟುಂಬದೊಂದಿಗೆ ಐತಿಹಾಸಿಕ ಕ್ಷಣ ಆನಂದಿಸಿದ Sourav Ganguly

ಲಾರ್ಡ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ವನಿತೆಯರು: 142 ವರ್ಷಗಳಷ್ಟು ಹಳೆಯ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಗೆದ್ದ ಭಾರತ!