ಸಂಗ್ರಹ ಚಿತ್ರ 
ರಾಜಕೀಯ

'ಸುಳ್ಳೇ ಬಿಎಸ್ ವೈ ಮನೆ ದೇವರು, ಹಿಂದುತ್ವ ಜನರ ಹೊಟ್ಟೆ ತುಂಬಿಸುವುದಿಲ್ಲ': ಸಿದ್ದರಾಮಯ್ಯ

ಬಿಜೆಪಿ ರಾಷ್ಟ್ರಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜನರನ್ನ ಪ್ರಚೋದನೆ ಮಾಡಿ ದಾರಿ ತಪ್ಪಿಸುತ್ತಿದ್ದಾರೆ. ಹಿಂದುತ್ವ ಎನ್ನುವುದು ಜನರ ಹೊಟ್ಟೆ ತುಂಬಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಶಿವಮೊಗ್ಗ: ಬಿಜೆಪಿ ರಾಷ್ಟ್ರಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜನರನ್ನ ಪ್ರಚೋದನೆ ಮಾಡಿ ದಾರಿ ತಪ್ಪಿಸುತ್ತಿದ್ದಾರೆ. ಹಿಂದುತ್ವ ಎನ್ನುವುದು ಜನರ ಹೊಟ್ಟೆ ತುಂಬಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಗುರುವಾರ ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರೊಂದಿಗೆ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ತೆರಳಿದ ಸಿದ್ದರಾಮಯ್ಯ ಅವರು ನಾಗೂರಿನಲ್ಲಿ ಉಪಚುನಾವಣಾ ಪಾಲ್ಗೊಂಡರು. ಈ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ ಅವರು, 'ಹಿಂದುತ್ವ ಜನರ ಹೊಟ್ಟೆ ತುಂಬಿಸುತ್ತದಾ? ಜನರನ್ನ ಪ್ರಚೋದನೆ ಮಾಡಿ ದಾರಿ ತಪ್ಪಿಸಿದುವುದರಿಂದ ಹೊಟ್ಟೆ ತುಂಬುತ್ತದಾ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು. 
'ಪ್ರಧಾನಿ ಮೋದಿ ಯಾವಾಗಲೂ ಮನ್‌ ಕೀ ಬಾತ್‌ , ಮನ್‌ ಕೀ ಬಾತ್‌ ಎನ್ನುತ್ತಾರೆ. ಆದರೆ ಅವರು ಕಾಮ್‌ ಕೀ ಬಾತ್‌ ಮಾತನಾಡುವುದೇ ಇಲ್ಲ. ಇನ್ನು ಯಡಿಯೂರಪ್ಪನವರು ಹಸಿರು ಶಾಲು ಹಾಕಿ ಡೋಂಗಿತನದಲ್ಲಿ ನಾನು ಮಣ್ಣಿನ ಮಗ ಎನ್ನುತ್ತಾರೆ. ನಾವ್ಯಾರು ಮಣ್ಣಿನ ಮಕ್ಕಳಲ್ವಾ. ಯಡಿಯೂರಪ್ಪ ಅವರು 4 ವರ್ಷ ಲೋಕಸಭಾ ಸದಸ್ಯರಾಗಿದ್ದ ವೇಳೆ ಒಂದು ದಿನವಾದರೂ ಸಾಲ ಮನ್ನಾ ಮಾಡುವ ಕುರಿತು ಪ್ರಧಾನಿ ಬಳಿ ಬಾಯಿ ಬಿಟ್ಟಿದ್ದಾರಾ. ಸಾಲಮನ್ನಾ ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದ್ದರು. ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಈಗಲಾದರೂ ಸಾಲಮನ್ನಾ ಬಗ್ಗೆ ಮಾತನಾಡುತ್ತಿದ್ದೀರಾ.. ಸುಳ್ಳು ಯಡಿಯೂರಪ್ಪ ಅವರ ಮನೆ ದೇವರು, ಬರಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಸಂಸದ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಿದರು? ಅವರು ಈಗಾಗಲೇ ಅಧಿಕಾರ ಮತ್ತು ಹಣದ ರುಚಿ ನೋಡಿದ್ದಾರೆ. ಈ ಉಪಚುನಾವಣೆ ಯಾರಿಗೂ ಇಷ್ಟವಿಲ್ಲ. ಚುನಾವಣೆ ಬರಲು ಯಡಿಯೂರಪ್ಪ ಅವರೇ ಕಾರಣ. ತಾವು ಸಿಎಂ ಆಗಬೇಕು ಎಂಬ ಆಸೆಯೊಂದಿಗೆ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಸ್ಥಾನಕ್ಕೆ ಅವರ ಮಗ ನಿಂತಿದ್ದಾರೆ.  ಯಡಿಯೂರಪ್ಪ ಮತ್ತು ಈಶ್ವರಪ್ಪ ಇಬ್ಬರೂ ಆಸ್ತಿ ಮಾಡಲು ಮುಗಿಬಿದ್ದಿದ್ದಾರೆ. ತಮ್ಮದೇ ಇಷ್ಟೆಲ್ಲ ಕಥೆ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡುವ ಈಶ್ವರಪ್ಪಗೆ ಮೆದುಳೇ ಇಲ್ಲ ಎಂದು ವ್ಯಂಗ್ಯವಾಡಿದರು. ಈಶ್ವರಪ್ಪನವರು ಒಂದು ಕಥೆಯಾದರೆ, ಯಡಿಯೂರಪ್ಪ ಅವರದ್ದು ಇನ್ನೊಂದು ಕಥೆ. ಯಡಿಯೂರಪ್ಪ ಅವರ ಮಾತನ್ನು ಎಷ್ಟು ಬಾರಿ ನಂಬುತ್ತೀರಾ? ಸುಳ್ಳು ಭರವಸೆ ನೀಡಿಯೇ ಅವರು ಗೆದ್ದಿದ್ದಾರೆ. ಸುಳ್ಳೇ ಅವರ ಮನೆ ದೇವರು ಎಂದು ಸಿದ್ದರಾಮಯ್ಯ ಹೇಳಿದರು.
ಕುರುಬ ಮಠದ ಕಟ್ಟುವ ಸಲುವಾಗಿ ನಡೆದ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪ ಅವರೂ ಹಾಜರಿದ್ದರು. ಮಠ ನಿರ್ಮಾಣಕ್ಕೆ ಹಣ ಸಂಗ್ರಹ ಮಾಡಬೇಕು ಎಂಬ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ದುಡ್ಡು ಸಂಗ್ರಹ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಎರಡನೆಯ ಸಭೆಗೆ ಅವರು ಚಕ್ಕರ್ ಹಾಕಿದ್ದರು. ಬಳಿಕ ಎಲ್ಲವೂ ಮುಗಿದು ಮಠದ ಉದ್ಘಾಟನೆ ನಡೆದಾಗಲೂ ಅವರು ಅದಕ್ಕೆ ಹಾಜರಾಗಿರಲಿಲ್ಲ ಇಂಥ ಈಶ್ವರಪ್ಪ ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ