ಯು.ಬಿ ವೆಂಕಟೇಶ್ ಮತ್ತು ಪ್ರಕಾಶ್ ರಾಥೋಡ್ 
ರಾಜಕೀಯ

ವಿಧಾನ ಪರಿಷತ್ ಸದಸ್ಯರಾಗಿ ಪ್ರಕಾಶ್‌ ರಾಥೋಡ್‌ ಹಾಗೂ ಯು.ಬಿ. ವೆಂಕಟೇಶ್‌ ನಾಮಕರಣ

ವಿಧಾನ ಪರಿಷತ್‌ ಸದಸ್ಯರಾಗಿ ಕಾಂಗ್ರೆಸ್‌ ಮುಖಂಡರಾದ ಪ್ರಕಾಶ್‌ ರಾಥೋಡ್‌ ಹಾಗೂ ಯು.ಬಿ. ವೆಂಕಟೇಶ್‌ ಅವರನ್ನು ನಾಮಕರಣ ಮಾಡಲಾಗಿದೆ. ಜತೆಗೆ ಆಂಗ್ಲೊ ಇಂಡಿಯನ್‌ ಕೋಟಾದಡಿ ...

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯರಾಗಿ ಕಾಂಗ್ರೆಸ್‌ ಮುಖಂಡರಾದ ಪ್ರಕಾಶ್‌ ರಾಥೋಡ್‌ ಹಾಗೂ ಯು.ಬಿ. ವೆಂಕಟೇಶ್‌ ಅವರನ್ನು ನಾಮಕರಣ ಮಾಡಲಾಗಿದೆ. ಜತೆಗೆ ಆಂಗ್ಲೊ ಇಂಡಿಯನ್‌ ಕೋಟಾದಡಿ ಹಾಲಿ ವಿಧಾನಸಭೆ ಸದಸ್ಯೆ ವಿನಿಷಾ ನಿರೊ ಅವರನ್ನು ನೇಮಿಸಲಾಗಿದೆ. ಈ ಸಂಬಂಧ ಸರಕಾರ ಕಳುಹಿಸಿದ್ದ ಶಿಫಾರಸಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ನಾಮನಿರ್ದೇಶನ ಕೋಟಾದಡಿ ಪರಿಷತ್‌ಗೆ ಮೂವರನ್ನು ನೇಮಿಸಲು ಈ ಬಾರಿ ಅವಕಾಶವಿತ್ತು. ಮೈತ್ರಿ ಸೂತ್ರದಂತೆ ಕಾಂಗ್ರೆಸ್‌ಗೆ 2 ಸ್ಥಾನ ಬಿಟ್ಟುಕೊಡಲಾಗಿತ್ತು. ಕಾಂಗ್ರೆಸ್‌ ಕಡೆಯ ಸದಸ್ಯರ ನೇಮಕ ಪೂರ್ಣಗೊಂಡಂತಾಗಿದೆ. ಜೆಡಿಎಸ್‌ನಿಂದ ಇನ್ನೂ ಪ್ರಸ್ತಾವನೆ ಕಳುಹಿಸದ್ದರಿಂದ ಈ ಪ್ರಕ್ರಿಯೆ ಬಾಕಿಯಿದೆ. ವಿನಿಷಾ ನಿರೊ 14ನೇ ವಿಧಾನಸಭೆ ಅವಧಿಯಲ್ಲೂ ಆಂಗ್ಲೊ ಇಂಡಿಯನ್‌ ಕೋಟಾದಡಿ ವಿಧಾನಸಭೆಗೆ ಸದಸ್ಯರಾಗಿ ನೇಮಕಗೊಂಡಿದ್ದರು. ಮೂಲತಃ ಕ್ರಿಕೆಟಿಗರಾಗಿರುವ ಪ್ರಕಾಶ್‌ ರಾಥೋಡ್‌ ಒಮ್ಮೆ ಪರಿಷತ್‌ ಸದಸ್ಯರಾಗಿದ್ದರು. ಕಾಂಗ್ರೆಸ್‌ ಸಂಘಟನೆಯಲ್ಲಿ ಸಕ್ರಿಯವಾಗಿದ್ದು, ವಿಜಯಪುರ ಮೀಸಲು ಲೋಕಸಭೆ ಕ್ಷೇತ್ರದಲ್ಲಿ ಸಚಿವ ರಮೇಶ ಜಿಗಜಣಗಿ ವಿರುದ್ಧ ಸೋತಿದ್ದರು. ಯು.ಬಿ. ವೆಂಕಟೇಶ್‌ ಉದ್ಯಮಿ ಯು.ಬಿ. ವೆಂಕಟೇಶ್‌ ಜಯನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು 2013 ಮತ್ತು 2018ರಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video