ಬಾಗಲಕೋಟೆ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೊಡ್ಡ ಹುಚ್ಚ, ಕಾಂಗ್ರೆಸ್ ಒಂದು ಹುಚ್ಚರ ಪಕ್ಷವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಸನಗೌಡ ಪಾಟೀಲ್ ಅವರು ವಿದ್ಯಾಗಿರಿಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಯಾರೊ ಕಾಂಗ್ರೆಸ್ ಪಕ್ಷದವನೊಬ್ಬ ನನ್ನನ್ನು ಹುಚ್ಚ ಅಂದಿದ್ದಾನೆ. ಆದರೆ ಅವನಿಗೆ ಗೊತ್ತಿಲ್ಲ. ಕಾಂಗ್ರೆಸ್ ಒಂದು ದೊಡ್ಡ ಹುಚ್ಚರ ಪಕ್ಷವಾಗಿದೆ. ಇನ್ನು ಮುಸ್ಲಿಂರು ಹತ್ತು ಜನ ಮಕ್ಕಳನ್ನು ಹೆತ್ತರೂ ಯಾರೂ ಕೇಳಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವಾಗ ರಾಹುಲ್ ಗಾಂಧಿಗೆ ಮಾನಸ ಸರೋವರ ನೆನಪಾಗಿದೆ. ಇಷ್ಟು ದಿನ ಕಾಂಗ್ರೆಸ್ಸಿನವರು ದೇವಸ್ಥಾನಗಳಿಗೆ ಹೋಗಿದ್ರಾ? ಹಿಂದೂ ದೇವಾಲಯಗಳಿಗೆ ಹೋದವರನ್ನು ಕೋಮುವಾದಿಗಳೆಂದು ಅವರು ಪಟ್ಟ ಕಟ್ಟುತ್ತಿದ್ದರು ಎಂದರು.
ಇನ್ನು ರಾಹುಲ್ ಗಾಂಧಿ ಏನು ಮಾತನಾಡುತ್ತಾನೋ, ಏನು ಮಾಡುತ್ತಾನೋ ಅವರಿಗೆ ಗೊತ್ತಿಲ್ಲ. ಅಂತವನನ್ನು ಪ್ರಧಾನ ಮಂತ್ರಿ ಮಾಡಲು ಹೋಗುತ್ತಿದ್ದಾರೆ. ಸಂಸತ್ತಿನಲ್ಲಿ ಪ್ರಧಾನಿ ವಿರುದ್ಧ ಗಂಟೆಗಟ್ಟಲೇ ಭಾಷಣ ಮಾಡಿ, ಕೊನೆಗೆ ಅವರನ್ನೇ ತಬ್ಬಿಕೊಳ್ಳುತ್ತಾನೆ. ನನಗೆ ಅನಿಸುತ್ತೆ ಅವನ ತಲೆ ಕೆಟ್ಟುಹೋಗಿದೆ, ಹೀಗಾಗಿ ಆ ರೀತಿ ವರ್ತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics