ರಾಜಕೀಯ

ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ ಅಪೇಕ್ಷೆಯಿಂದ ತೀವ್ರತರ ಬಿಕ್ಕಟ್ಟು ?

Nagaraja AB

ಬೆಂಗಳೂರು: ಬೆಳಗಾವಿಯ ಜಾರಕಿಹೊಳಿ  ಸಹೋದರರು ಹಾಗೂ ಜಲಸಂಪನ್ಮೂಲ ಸಚಿವ  ಡಿ. ಕೆ. ಶಿವಕುಮಾರ್ ಅವರ ನಡುವಿನ  ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಕಾಂಗ್ರೆಸ್ ನಲ್ಲಿ    ಬಿಕ್ಕಟ್ಟು ಉಂಟಾಗಿದೆ ಎಂದು ಎಸಿಸಿಸಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಬೆಳಗಾವಿ ರಾಜಕೀಯದಲ್ಲಿ ಡಿ. ಕೆ. ಶಿವಕುಮಾರ್ ತನ್ನ ಪ್ರಭಾವ ಬೀರಲು ಪ್ರಯತ್ನಿಸಿದದ್ದು,  ರಾಜ್ಯಸರ್ಕಾರಕ್ಕೆ ಮುಳುವಾಗಿ ಪರಿಣಮಿಸಿದೆ ಎಂದು  ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಡಿ. ಕೆ. ಶಿವಕುಮಾರ್ ರಾಜಕೀಯ ಹಸ್ತಕ್ಷೇಪ ಕುರಿತ  ಭಿನ್ನಾಭಿಪ್ರಾಯ ಈಗ  ಬೆಳಗಾವಿಯಿಂದ ಬಳ್ಳಾರಿಯಲ್ಲೂ  ವ್ಯಾಪಿಸಿದೆ. ಅಲ್ಲಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು,  ಸ್ಥಳೀಯ ವಿಚಾರಗಳಲ್ಲಿ ಡಿ. ಕೆ. ಶಿವಕುಮಾರ್ ಪ್ರಾಬಲ್ಯವನ್ನು ಜಿಲ್ಲೆಯ ಶಾಸಕರು ಸಹಿಸುತ್ತಿಲ್ಲ ಎಂಬುದು  ತಿಳಿದುಬಂದಿದೆ.

ಅಲ್ಲದೇ ಡಿ. ಕೆ. ಶಿವಕುಮಾರ್  ಉತ್ತರ ಕರ್ನಾಟಕ ಭಾಗದ ಬಹುತೇಕ ನೀರಾವರಿ ಯೋಜನೆಗಳ ಉಸ್ತುವಾರಿ ವಹಿಸಿದ್ದು, ಮುಖ್ಯಮಂತ್ರಿ ಅಪೇಕ್ಷೆಯಿಂದಾಗಿ  ರಾಜ್ಯಾದ್ಯಂತ ತನ್ನ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ.

ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ ಕರ್ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಜಗಳ ಹಿಂದೆ  ಡಿ. ಕೆ. ಶಿವಕುಮಾರ್  ಅವರ ಕೈವಾಡವಿರುವ ಬಗ್ಗೆಗೆ ಪಕ್ಷದ ಒಳಗಿನವರೇ ಹೇಳುತ್ತಾರೆ.
ಉತ್ತರ ಕರ್ನಾಟಕದಲ್ಲಿ ಡಿ. ಕೆ. ಶಿವಕುಮಾರ್ ಅಷ್ಟಾಗಿ ಪರಿಚಯವಿಲ್ಲ. ಆದರೆ, ಲಕ್ಷ್ಮಿ ಹೆಬ್ಬಾಳ್ ಕರ್ ಚಿರಪರಿಚಿತ. ಹಾಗಾಗೀ ಬಲವಾದ ಧ್ವನಿಯಿಲ್ಲದ ಅಭ್ಯರ್ಥಿಗಳನ್ನು ಶಿವಕುಮಾರ್  ಬೆಂಬಲಿಸುವ ಮೂಲಕ ಸರಿಯಾದ ವೇಳೆಯಲ್ಲಿ  ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು  ಧಾರವಾಡ ಕರ್ನಾಟಕ ವಿವಿ ಪ್ರೊಫೆಸರ್ ಡಾ. ಹರೀಶ್ ರಾಮಸ್ವಾಮಿ ಹೇಳುತ್ತಾರೆ.
SCROLL FOR NEXT