ರಾಜಕೀಯ

ಡಿಸಿಎಂ ಪರಮೇಶ್ವರ್ ಮಲತಾಯಿ ಧೋರಣೆ: ಬಿಜೆಪಿ ಶಾಸಕನಿಂದ ಅನಿರ್ಧಿಷ್ಟಾವಧಿ ಧರಣಿ

Shilpa D
ತುಮಕೂರು: ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಮ್ಮ ಕ್ಷೇತ್ರಕ್ಕೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಮತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ ಆರೋಪಿಸಿದ್ದಾರೆ. 
ತಮ್ಮ ಕ್ಷೇತ್ರಕ್ಕೆ ಹೇಮಾವತಿ ನದಿ ನೀರು ಬಿಡುಗಡೆ ಮಾಡದೇ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಾಡಿದ್ದ ವಿಡಿಯೋ  ವಿದ್ಯುನ್ಮಾನ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಪರಮೇಶ್ವರ್ ವಿರುದ್ದ ಅಸಮಾಧಾನಗೊಂಡಿರುವ  ಜಯರಾಮ್ ಅಡವನಹಳ್ಳಿಯ ಹಳ್ಳಿಯ ಹೇಮಾವತಿ ನದಿ ಕಾಲುವೆ ಮೇಲೆ ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ, ತಮ್ಮ ಕ್ಷೇತ್ರವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜಿ, ಪರಮೇಶ್ವರ್ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ಸಂಬಂಧಿ ಡಾ. ರಂಗನಾಥ್ ಅವರ ಪರವಾಗಿ ಎಲ್ಲಾ ಕೆಲಸ ಮಾಡಿಕೊಡುತ್ತಿದ್ದಾರೆ ಎಂದು ದೂರಿದ್ದಾರೆ. ಕುಣಿಗಲ್ ಹೇವಾಮನತಿ ನದಿ ನೀರು ಹರಿಯುತ್ತಿದ್ದು, 10 ತಾಲೂಕುಗಳಲ್ಲಿ  ತುರುವೆಕೆರೆ ಬಿಟ್ಟು ಉಳಿದ 9 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ, ಹೇಮಾವತಿ ಪ್ರಾಜೆಕ್ಟ್ ಎಂಜಿನೀಯರ್ ಭೇಟಿ ನೀಡಿ ನೀರು ಬಿಡುವ ಭರವಸೆ ನೀಡಿದ್ದಾರೆ ಎಂದು ಜಯರಾಮ್ ಹೇಳಿದ್ದಾರೆ, ನೀರು ಬಿಡುವವರೆಗೂ ತಮ್ಮ ಧರಣಿ ಮುಂದುವರಿಸುವುದಾಗಿ ಅವರು ಘೋಷಿಸಿದ್ದಾರೆ.
SCROLL FOR NEXT