ಬೆಂಗಳೂರು: ಅರಕ್ಷಶಃ ರಣರಂಗವಾಗಿ ಮಾರ್ಪಟ್ಟು ಕೊನೆಯ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಪ್ರತಿಪಕ್ಷ ಬಿಜೆಪಿ ಸಭಾತ್ಯಾಗದ ನಡುವೆ 52ನೇ ಮೇಯರ್ ಆಗಿ ಗಂಗಾಬಿಕೆ ಮಲ್ಲಿಕಾರ್ಜುನ್, ಉಪಮೇಯರ್ ಆಗಿ ರಮೀಳಾ ಉಮಾಶಂಕರ್ ಅವಿರೋಧವಾಗಿ ಆಯ್ಕೆಯಾದರು.
ಜೆಡಿಎಸ್‌ನ ಇಬ್ಬರು ಮತ್ತು ಇಬ್ಬರು ಪಕ್ಷೇತರರು ಬಿಜೆಪಿ ಜತೆ ಕೈಜೋಡಿಸಿದ್ದರು. ಹೀಗಾಗಿ, ಚುನಾವಣೆಯು ತೀವ್ರ ಕುತೂಹಲ ಮೂಡಿಸಿತ್ತು. ಜೆಡಿಎಸ್‍ನ ಮಂಜುಳಾ ನಾರಾಯಣಸ್ವಾಮಿ, ದೇವದಾಸ್, ಪಕ್ಷೇತರ ಸದಸ್ಯರಾದ ರಮೇಶ್, ಕಾಂಗ್ರೆಸ್‍ನ ಆನಂದ್, ಅಶೋಕ್ ಅವರ ಜೊತೆ ಆಗಮಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಹಲವರು ಅವರತ್ತ ಧಾವಿಸಿ ಅವರ ಮನವೊಲಿಸುವ ಪ್ರಯತ್ನ ಮಾಡಿದರು.
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಬಲಾಬಲದ ಲೆಕ್ಕಾಚಾರದಲ್ಲಿ ತೊಡಗಿದರು. ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ, ಜಮೀರ್ ಅಹಮ್ಮದ್‌ಖಾನ್ ಅವರು ಬಿಜೆಪಿಯ ಆರ್.ಅಶೋಕ್ ಬಳಿ ಬಂದು ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಬಿಜೆಪಿ ಬಳಿಯೂ 125 ಸದಸ್ಯರ ಬಲವಿತ್ತು. ಅಷ್ಟರಲ್ಲಿ ಮುಖಂಡರುಗಳು ಪರಸ್ಪರ ಮಾತುಕತೆ ನಡೆಸಿ, ಮತದಾನವನ್ನು ಬಹಿಷ್ಕರಿಸಿ ಹೊರ ನಡೆಯಲು ತೀರ್ಮಾನಿಸಿದರು.
ವಿಧಾನ ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ರಘು ಆಚಾರ್, ಸಿ.ಆರ್.ಮನೋಹರ್, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರಿಗೆ ಮತದಾನದ ಹಕ್ಕು ನೀಡಬಾರದು ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು ಚುನಾವಣಾಧಿಕಾರಿಯನ್ನು ಮನವಿ ಮಾಡಿಕೊಂಡರು. ಚುನಾವಣಾಧಿಕಾರಿ ಶಿವಯೋಗಿ ಕಳಸದ ಅವರ ಮನವಿಯನ್ನು ಪುರಸ್ಕರಿಸಲಿಲ್ಲ. ಬಳಿಕ ಎಲ್ಲರೂ ಮತದಾನವನ್ನು ಬಹಿಷ್ಕರಿಸಿ ಹೊರ ನಡೆದರು.
ಇನ್ನೂ ಮೇಯರ್ ಚುನಾವಣೆಗೆ ಹಾಜರಾಗದಿದ್ದಕ್ಕೆ ಶಾಸಕ ರೋಷನ್ ಬೇಗ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೋಟೀಸ್ ನೀಡಿ ವಿವರಣೆ ನೀಡುವಂತೆ ಕೋರಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos