ರಾಜಕೀಯ

ಆಕಾಂಕ್ಷಿಗಳು ಅರವತ್ತು: ಆಯ್ಕೆ ಮಾಡಬೇಕಿರುವುದು ಇಪ್ಪತ್ತು; ಬಿಎಸ್ ವೈಗೆ ಸವಾಲಾಗಿದೆ ಸಂಪುಟ ರಚನೆ ಕಸರತ್ತು!

Shilpa D
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಸಚಿವ ಸಂಪುಟದಲ್ಲಿ  ಅನರ್ಹ ಶಾಸಕರನ್ನು ಸೇರಿಸಿಕೊಳ್ಳಬೇಕಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗಿರುವ ಅನಿವಾರ್ಯತೆಯಿದೆ.
ತಮ್ಮದೇ ಪಕ್ಷದಲ್ಲಿ 60 ಮಂದಿ ಸಚಿವ ಸಂಪುಟದಲ್ಲಿ ಅವಕಾಶ ಪಡೆಯಲು ಹಾತೊರೆದು ನಿಂತಿದ್ದಾರೆ, ಅದರಲ್ಲಿ 20 ಶಾಸಕರನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಾಗಿದೆ, ಆಗಸ್ಟ್ 6 ರಂದು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮೂರು ದಿನಗಳ ಕಾಲ ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, ಅಂತಿಮ ಪಟ್ಟಿಯೊಂದಿಗೆ ವಾಪಾಸಾಗಲಿದ್ದಾರೆ, 
ತಮ್ಮ ಸಂಪುಟದಲ್ಲಿ ಎಲ್ಲಾ ಜಾತಿಯ ಹಾಗೂ ಹಿರಿಯ ನಾಯಕರಿಗೆ ಸ್ಥಾನ ನೀಡಲು ನ್ಯಾಯ ನೀಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ, ಬಿಜೆಪಿಯ 105 ಶಾಸಕರಿದ್ದು, ಅದರಲ್ಲಿ 29 ಶಾಸಕರು ಈಗಾಗಲೇ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರನ್ನು ಹೊರತು ಪಡಿಸಿ 22 ಶಾಸಕರು ಸುಮಾರು 4ರಿಂದ 5 ಬಾರಿ ಗೆಲುವು ಸಾಧಿಸಿದ್ದಾರೆ,. ಆದರೆ ಅವರು ಸಚಿವರಾಗಿ ಕೆಲಸ ಮಾಡಿಲ್ಲ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಈ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು  ಸಂಪುಟ ಹಂಚಿಕೆ ಮಾಡಬೇಕಿರುವುದು ಯಡಿಯೂರಪ್ಪ ಮುಂದಿರುವ ದೊಡ್ಡ ಸವಾಲಾಗಿದೆ, ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿನ ಸಂಖ್ಯೆಯಲ್ಲಿದೆ. ಹೀಗಾಗಿ ಒಬ್ಬರೋ ಇಬ್ಬರು ಶಾಸರಿಗೆ ಸಚಿವ ಸ್ಥಾನ ನೀಡುವುದು ಕಷ್ಟ ಸಾಧ್ಯವಾಗಿದೆ.  ಜಾತಿಯ ಆಧಾರದ ಮೇಲೆ ಹಂಚಿಕೆ ಮಾಡುವುದು ದೊಡ್ಡ ಸವಾಲೇ ಸರಿ. 
ಕೆಲವರಿಗೆ ಸಂಪುಟದಲ್ಲಿ ಸ್ಥಾನ ನೀಡಿ, ಉಳಿದವರಿಗೆ ನಿಗಮ -ಮಂಡಳಿಯಲ್ಲಿ ಸ್ಥಾನ ನೀಡಿ ಮನವೊಲಿಸುವಲ್ಲಿ ನಮ್ಮ ನಾಯಕರು ಯಶಸ್ವಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ,
ಮಾಜಿ ಡಿಸಿಎಂ ಆರ್ ಅಶೋಕ್ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ, ಜಗದೀಶ್ ಶೆಟ್ಟರ್ ಅವರಿಗೆ ಕಂದಾಯ, ಈಶ್ವರಪ್ಪ ಅವರಿಗೆ ಗೃಹ ಖಾತೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ,
ಸ್ಪೀಕರ್ ಆಯ್ಕೆಯ ವಿಷಯವಾಗಿ ಕೇಂದ್ರ ನಾಯಕರು ಅಚ್ಚರಿ ನೀಡಿದ ರೀತಿಯಲ್ಲಿಯೇ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಆಗಲಿದೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
SCROLL FOR NEXT