ರಾಜಕೀಯ

ರಾಜಕೀಯದಿಂದ ದೂರ ಸರಿಯಲು ಚಿಂತನೆ- ಹೆಚ್ ಡಿ ಕುಮಾರಸ್ವಾಮಿ

Nagaraja AB
ಹಾಸನ: ಜಾತೀಯತೆಯಿಂದ ಕೂಡಿರುವ ರಾಜಕಾರಣದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ರಾಜಕೀಯದಿಂದ ದೂರ ಸರಿಯುವ ಮಾತುಗಳನ್ನಾಡಿದ್ದಾರೆ.
ತಾನೂ ಮುಖ್ಯಮಂತ್ರಿ ಆದದ್ದು ಆಕಸ್ಮಿಕ. 14 ತಿಂಗಳ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಲವು ಜನಪರ ಕೆಲಸಗಳನ್ನು ಮಾಡಿರುವ ಬಗ್ಗೆ ತೃಪ್ತಿಇದೆ ಎಂದರು.
ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದು, ಆಕಸ್ಮಿಕವಾಗಿ ಮುಖ್ಯಮಂತ್ರಿಯಾದೆ. ದೇವರ ದಯೆದಿಂದ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. 14 ತಿಂಗಳ ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ಅಭಿವೃದ್ದಿತ್ತ ಕೆಲಸ ಮಾಡಿದ್ದೇನೆ, ಇತ್ತೀಚಿನ ರಾಜಕೀಯದಲ್ಲಿ ಜಾತಿಯತೆ ತುಂಬಿದ್ದು, ರಾಜಕೀಯ ದೂರ ಸರಿಯಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು. 
ಪ್ರಸ್ತುತದಲ್ಲಿನ ರಾಜಕೀಯದ ಬಗ್ಗೆ ಗಮನಿಸಿದ್ದೇನೆ. ಇದು ಒಳ್ಳೇಯವರಿಗಲ್ಲಾ, ಶಾಂತಯುತವಾಗಿ ಜೀವನ ಸಾಗಿಸಲು ಇಷ್ಟೇಪಡುತ್ತೇನೆ. ರಾಜಕೀಯದಲ್ಲಿ ಮುಂದುವರೆಯುವುದಿಲ್ಲ, ಜನರ ಮನಸ್ಸಿನಲ್ಲಿ ಉಳಿಯಲು ಇಷ್ಟಪಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು. 
ಲೋಕಸಭಾ ಚುನಾವಣೆಯಲ್ಲಿ ಸೋತ ನಂತರವೂ ಪಕ್ಷ ಸಂಘಟನೆಗಾಗಿ ತಮ್ಮ ತಂದೆ ಎಚ್ ಡಿ ದೇವೇಗೌಡರು ಹೋರಾಟ ನಡೆಸುತ್ತಿರುವುದಾಗಿ ಕುಮಾರಸ್ವಾಮಿ ತಿಳಿಸಿದರು. 
SCROLL FOR NEXT