ರಾಜಕೀಯ

ಲೋಕಸಭಾ ಚುನಾವಣೆ ವೇಳೆ ನನ್ನ ದೂರವಾಣಿಯನ್ನು ಬಿಜೆಪಿ ಕದ್ದಾಲಿಕೆ ಮಾಡಿತ್ತು: ಸಿ ಎಸ್ ಪುಟ್ಟರಾಜು

Lingaraj Badiger

ಮಂಡ್ಯ: ಮೈತ್ರಿ ಸರ್ಕಾರ ರಕ್ಷಣೆಗೆ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ ಎಂದು ಆರೋಪ ಮಾಡುವ ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ತಮ್ಮ ಕುಟುಂಬ ಸದಸ್ಯರದ್ದು ದೂರವಾಣಿ ಕದ್ದಾಲಿಕೆ ಮಾಡಲಾಗಿತ್ತು. ಆಗ ಬಿಜೆಪಿ ನಾಯಕರು ಎಲ್ಲಿದ್ದರು ಎಂದು ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಖಾರವಾಗಿ ಪ್ರಶ್ನಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ದೂರವಾಣಿ ಕದ್ದಾಲಿಕೆ ಮಾಡಲಾಗಿತ್ತು. ಆಗ ಇಡೀ ಕುಟುಂಬದ ಎಲ್ಲಾ ಸದಸ್ಯರು ಚಿತ್ರಹಿಂಸೆಗೆ ಒಳಗಾಗಿದ್ದೆವು ಎಂದರು.

ದೂರವಾಣಿ ಕದ್ದಾಲಿಕೆಗೆ ಸಂಬಂಧಿಸಿದಂತೆ ಹಿಂದಿನ ಎಲ್ಲಾ ಪ್ರಕರಣಗಳನ್ನು ಸೇರಿಸಿ ಈಗ ತನಿಖೆಗೆ ಒತ್ತಾಯಿಸುತ್ತಿದ್ದೇನೆ. ಈಗ ಸಿಬಿಐ, ಸಿಐಡಿ, ಎಸ್ಐಟಿ ಎಲ್ಲವೂ ಬಿಜೆಪಿ ಕೈಯಲ್ಲಿಯೇ ಇದ್ದು, ಸಮಗ್ರ ತನಿಖೆ ಮಾಡಿಸಿ ಸತ್ಯ ಸಂಗತಿ ಹೊರತರಲಿ ಎಂದರು.

ನಮ್ಮ ಶಾಸಕರನ್ನು 20-30 ಕೋಟಿ ರೂಪಾಯಿ ಕೊಟ್ಟು ಬಿಜೆಪಿ ನಾಯಕರು ಹೊತ್ತೊಯ್ದದ್ದು ಸತ್ಯ. ಬಿಜೆಪಿಯ ಆಪರೇಷನ್ ಕಮಲ ಪ್ರಕರಣವವನ್ನೂ ಸಹ ಇದೇ ತನಿಖೆಯ ವ್ಯಾಪ್ತಿಗೊಳಪಡಿಸಿದರೆ ವಾಸ್ತವಾಂಶ ಹೊರಬರಲಿದೆ ಎಂದು ಮಾಜಿ ಸಚಿವರು ಹೇಳಿದರು.

SCROLL FOR NEXT