ಅಶೋಕ್ ಮತ್ತು ಸಿದ್ದರಾಮಯ್ಯ 
ರಾಜಕೀಯ

ಸಿದ್ದರಾಮಯ್ಯ ಹುಳಿ ಹಿಂಡುವ ಕೆಲಸದಿಂದ ಕಾಂಗ್ರೆಸ್ ಒಂದು ಸೀಟು ಗೆದ್ದಿದೆ, ಮುಂದುವರಿದರೇ ಶೂನ್ಯ: ಆರ್ ಅಶೋಕ್

ಹಿಂದಿದ್ದ ಕೇಂದ್ರ ಸರ್ಕಾರಗಳು ರಾಜ್ಯವನ್ನು ಈ ಪರಿ ನಿರ್ಲಕ್ಷ್ಯಿಸಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಆರ್.ಅಶೋಕ್ ನಿಮಗೆ ಹುಳಿ ಸಿದ್ದರಾಮಯ್ಯ ಎಂಬ ಬಿರುದು ಬೇಡ, ನಿದ್ದರಾಮಯ್ಯ ...

ನವದೆಹಲಿ:  ಹಿಂದಿದ್ದ ಕೇಂದ್ರ ಸರ್ಕಾರಗಳು ರಾಜ್ಯವನ್ನು ಈ ಪರಿ ನಿರ್ಲಕ್ಷ್ಯಿಸಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಆರ್.ಅಶೋಕ್ ನಿಮಗೆ ಹುಳಿ ಸಿದ್ದರಾಮಯ್ಯ ಎಂಬ ಬಿರುದು ಬೇಡ, ನಿದ್ದರಾಮಯ್ಯ ಎಂಬ ಬಿರುದು ಇರಲಿ ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್‍ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಹಿಂದೆ ನೆರೆ-ಬರ ಬಗ್ಗೆ ಚರ್ಚೆ ಮಾಡೋಕೆ ಸಮಯನೇ ಕೊಡುತ್ತಿರಲಿಲ್ಲ. ನಮ್ಮ ಪ್ರಧಾನಿ 45 ನಿಮಿಷ ಸಮಯ ಕೊಟ್ಟಿದ್ದಾರೆ. ಡಾ. ಮನಮೋಹನ್ ಸಿಂಗ್ ಮತ್ತು ಮೋದಿ ಸರ್ಕಾರದ ಕೊಡುಗೆಯನ್ನು ತುಲನೆ ಮಾಡಿ ಸಿದ್ದರಾಮಯ್ಯ ಹುಳಿ ಹಿಂಡಬಾರದು. ಹುಳಿ ಸಿದ್ದರಾಮಯ್ಯ ಎಂಬ ಬಿರುದು ಬೇಡ. ನಿದ್ದರಾಮಯ್ಯ ಎಂಬ ಬಿರುದು ಇರಲಿ ಎಂದು ಲೇವಡಿ ಮಾಡಿದರು.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ವರ್ತನೆಯಿಂದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸೀಟು ಬಂದಿದೆ. ಮತ್ತೆ ಇವರು ಇದೇ ರೀತಿ ಮೋದಿ ಅವರ ಬಗ್ಗೆ ಮಾತನಾಡಿದರೆ ಶೂನ್ಯಕ್ಕೆ ಸೀಮಿತವಾಗಬೇಕಾಗುತ್ತದೆ. ರಾಜ್ಯದ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಕೇಂದ್ರದ ಮೇಲೆ ಕಾಂಗ್ರೆಸ್ ಹೈಕಮಾಂಡ್‍ನಿಂದ ಒತ್ತಡ ತರಲಿ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್