ರಾಜಕೀಯ

ಕುಮಾರಸ್ವಾಮಿ ವರ್ಚಸ್ಸಿಗೆ ಧಕ್ಕೆ ಮಾಡಲೆಂದೇ ಫೋನ್ ಕದ್ದಾಲಿಕೆ ಸಿಬಿಐಗೆ- ಹೆಚ್. ಡಿ. ದೇವೇಗೌಡ 

Nagaraja AB

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ವರ್ಚಸ್ಸಿಗೆ ಧಕ್ಕೆ ತರಲೆಂದೇ  ಬಿಜೆಪಿ ಸರ್ಕಾರ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ ಎಂದು ಜೆಡಿಎಸ್ ವರಿಷ್ಠ , ಮಾಜಿ ಪ್ರಧಾನಿ ಹೆಚ್ . ಡಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರವಾಣಿ ಕದ್ದಾಲಿಕೆ ಪ್ರಕರಣ ಹಳೆಯ ವಿಚಾರ. ಕಳೆದ ಹೋದ ವಿಷಯದ ಬಗ್ಗೆ ಚರ್ಚೆಯ ಅವಶ್ಯಕತೆಯಿಲ್ಲ. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಬಹಳಷ್ಟು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರ ತೇಜಸ್ಸು ಕುಂದಿಸಲು ಫೋನ್ ಕದ್ದಾಲಿಕೆ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ತನಿಖೆ ಮಾಡಿ ವರ್ಚಸ್ಸು ತಗ್ಗಿಸುವ ಪ್ರಯತ್ನ ಮಾಡುವುದಾದರೆ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂಬೈಗೆ ಶಾಸಕರು ಏಕೆ ಹೋದರು? ಅವರನ್ನು ಯಾರು ಕರೆದುಕೊಂಡು ಹೋದರು?ಯಾರು ಯಾರು ಹೇಗೆ ಮಾತನಾಡಿದ್ದಾರೆ ಎಂಬುದೆಲ್ಲವೂ ಸದನದಲ್ಲಿ ಚರ್ಚೆಯಾಗಿದೆ. ಯಾರು ಏನೆ ಮಾಡಿದ್ದಾರೆ ಎನ್ನುವುದೆಲ್ಲ ತಮಗೆ ಗೊತ್ತಿದೆ ಎಂದು ಅವರು ಪುನರುಚ್ಚರಿಸಿದರು.

SCROLL FOR NEXT