ರಾಜಕೀಯ

ರಾಜಕೀಯಕ್ಕೆ ಬರಲು ನನಗೆ ಸುತಾರಾಂ ಇಷ್ಟವಿರಲಿಲ್ಲ, ಬಂದಿದ್ದು ಆಕಸ್ಮಿಕ: ನಳಿನ್ ಕುಮಾರ್ ಕಟೀಲ್

Shilpa D

ಬೆಂಗಳೂರು: ರಾಜಕೀಯಕ್ಕೆ ಬರಲು ನನಗೆ ಸುತರಾಂ ಇಷ್ಟವಿರಲಿಲ್ಲ, ರಾಜಕೀಯ ಪ್ರವೇಶ್ ಆಕಸ್ಮಿಕ ಎಂದು ಹೊಸದಾಗಿ ನೇಮಕವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕರಾಗಿರುವ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ,

ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮಂಗಳೂರಿಗೆ ಭೇಟಿ ನೀಡಿದ ವೇಳೆ ಕಟೀಲ್ ಅವರಿಗೆ  ಕೊಡಿ ಬೈಲಿನಲ್ಲಿ ಅದ್ಧೂರಿ ಸ್ವಾಗತಿಸಲಾಯಿತು.ಈ ವೇಳೆ ಮಾತನಾಡಿದ ಅವರು, 12ನೇ ವಯಸ್ಸಿನಲ್ಲಿ ಆರ್ ಎಸ್ ಎಸ್ ಸೇರಿದರು, ಅನಂತರ ಆರ್ ಎಸ್ಎಸ್ ಪ್ರಚಾರಕ್ ಮತ್ತು ವಿಸ್ತಾರಕ್ ಆಗಿ ಸಂಘಟನೆಯ ತತ್ವ ಸಿದ್ಧಾಂತಗಳನ್ನು ವಿಸ್ತರಿಸಲು ಮುಂದಾಗಿದ್ದಾರೆ.

ಒಂದು ದಿನ ರಾಜಕೀಯಕ್ಕೆ ಬರುವಂತೆ ಕೇಳಲಾಯಿತು, ಆದರೆ ನನಗೆ ಇಷ್ಟವಿಲ್ಲ ಎಂದು ಹೇಳಿದೆ. ಆದರೆ ಮತ್ತೆ ಕೆಲವು ದಿನಗಳ ನಂತರ,ಮತ್ತೆ ರಾಜಕಿಯಕ್ಕೆ ಬರುವಂತೆ ನನ್ನ ಮೇಲೆ ಒತ್ತಡ ಹಾಕಲಾಯಿತು, ಕೆಲ ಸಮಯ ರಾಜಕೀಯದಲ್ಲಿರಿ ನಂತರ ವಾಪಸ್ ಬನ್ನಿ ಎಂದು ಹೇಳಿದರು, ಪಕ್ಷ ಮತ್ತು ಸಂಘದ ಒತ್ತಾಯಕ್ಕೆ ನಾನು ಮಣಿಯಬೇಕಾಯಿತು. ನನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ ಎಂದು ತಿಳಿಸಿದ್ದಾರೆ.

2018ರಲ್ಲಿ ಮೂರನೇ ಬಾರಿಗೆ ಸತತವಾಗಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ರಾಜಕೀಯದಲ್ಲಿ ನನಗೆ ಯಾವುದೇ ಆಸೆ ಆಕಾಂಕ್ಷೆಗಳಿಲ್ಲ ಎಂದು ತಿಳಿಸಿದ್ದಾರೆ. ನಾನು ಒಂದು ಕುಗ್ರಾಮದಲ್ಲಿ ಜನಿಸಿದ್ದವನು, ಬಾಲ್ಯದಿಂದಲೂ ನಾನು ಆರ್ ಎಸ್ ಎಸ್ ಸೇರಿಕೊಂಡ ನಂತರ, ಎಲ್ಲಾ ಸವಾಲುಗಳನ್ನು ಗೆದ್ದು ಬದುಕಿನ ಬಗ್ಗೆ ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಂಡೆ ಎಂದು ತಿಳಿಸಿದ್ದಾರೆ. ಎಲ್ಲಾ ನಾಯಕರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಸಿಕೊಂಡು ಕೆಲಸ ಮಾಡುವುದಾಗಿ ಹೇಳಿದ್ದಾರೆ. 

SCROLL FOR NEXT