ರಾಜಕೀಯ

ಲಕ್ಷ್ಮಣ ಸವದಿಗೆ ಮುಳ್ಳಿನ ಹಾಸಿಗೆಯಾಯ್ತು ಸಚಿವಗಿರಿ: ಬಿಜೆಪಿ ನಾಯಕರಲ್ಲಿ ಭುಗಿಲೆದ್ದ ಬೇಗುದಿ! 

Shilpa D

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು  ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಯಡಿಯೂರಪ್ಪ ಆಪ್ತ ಬಣದಲ್ಲಿ ಲಕ್ಷ್ಮಣ ಸವದಿ ಇದ್ದಾರೆ. ಈ ಬಣದಲ್ಲಿ ಹಲವಾರು ಮಂದಿಯೂ ಇದ್ದಾರೆ. ಈಗ ಲಕ್ಷ್ಮಣ ಸವದಿ ವಿಚಾರವಾಗಿಯೇ ಯಡಿಯೂರಪ್ಪ ಆಪ್ತರು 'ಕತ್ತಿ' ಮಸೆಯುತ್ತಿದ್ದಾರೆ. ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡವರು ಸೋತ ಲಕ್ಷ್ಮಣ ಸವದಿಗೆ ಏಕೆ ಸಚಿವ ಸ್ಥಾನ ನೀಡಲಾಯಿತು ಎಂಬುದು ಬಹುತೇಕ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. 

ಸಚಿವರಾದ ನಂತರ ಲಕ್ಷ್ಮಣ ಸವದಿಗೆ ಪ್ರವಾಹದಿಂದ ಕಂಗೆಟ್ಟಿರುವ ಬೆಳಗಾವಿ ಪ್ರವಾಸ ಕೈಗೊಳ್ಳಲು ಸೂಚಿಸಲಾಗಿತ್ತು. ಅದರಂತೆ ಗುರುವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಸವದಿ ಬೇಟಿ ನೀಡಿದ್ದರು, ಈ ವೇಳೆ ಅವರಿಗೆ ಬೆಳಗಾವಿಯ ಯಾವುದೇ ಪ್ರಮುಖ ನಾಯಕರು ಬಂದು ಸ್ವಾಗತಿಸಲಿಲ್ಲ. ಯಾವುದೇ ಶಾಸಕರಾಗಲಿ ಅಥವಾ ಸಂಸದಾಗಲಿ ಸುಳಿದಾಡಲಿಲ್ಲ,

ಕೇವಲ ಅಲ್ಲಿನ ಸ್ಥಳೀಯ ನಾಯಕರು ಮಾತ್ರ ಸವದಿ ಜೊತೆಗಿದ್ದರು. ಸಚಿವೆ ಶಶಿಕಲಾ ಜೊಲ್ಲೆ ಜೊತೆ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಬಿಜೆಪಿ ಭದ್ರಕೋಟೆಯಾದ ಬೆಳಗಾವಿಯಲ್ಲಿ 11 ಶಾಸಕರು ಹಾಗೂ ಮೂವರು ಸಂಸದರಿದ್ದಾರೆ, ಆದರೆ ಯಾವೊಬ್ಬ ಜನ ಪ್ರತಿನಿಧಿಯೂ ಲಕ್ಷ್ಮಣ ಸವದಿಯ ಜೊತೆ ಹಾಜರಿರಲಿಲ್ಲ.

ಸೋತ ಸವದಿಗೆ ಸಚಿವ ಸ್ಥಾನ ಏಕೆ ಎಂಬುದು ಬಿಜೆಪಿ ನಾಯಕರ ಪ್ರಶ್ನೆ. ಈಗ ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಿರುವ ಅನರ್ಹಗೊಂಡ ಶಾಸಕರ ಪ್ರಶ್ನೆಯೂ ಇದಾಗಿದೆ. 

ಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತರೇ ಸಿಟ್ಟುಗೊಂಡವರಲ್ಲಿ ಪ್ರಮುಖರು. ಜತೆಗೆ ಅವರೆಲ್ಲರೂ ಬಿಎಸ್‌ವೈ ಮತ್ತು ಪಕ್ಷಕ್ಕೆ ತಮ್ಮ ನಿಷ್ಠೆ ಅಚಲ ಎಂದು ಹೇಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಈ ಬೇಗುದಿ ಶಮನವಾಗುವ ಆಶಾವಾದ ಪಕ್ಷದಲ್ಲಿ ಕಾಣಿಸಿಕೊಂಡಿದೆ. 

ಲಕ್ಷ್ಮಣ ಸವದಿ ಸಚಿವರಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರವವರ ಪಟ್ಟಿಯ್ಲಿ ಯಡಿಯೂರಪ್ಪ ಆಪ್ತರೇ ಹೆಚ್ಚಾಗಿದ್ದಾರೆ.

ಅಭಯ್ ಪಾಟೀಲ್ ಆನಂದ್ ಮಾಮ್ನಿ,  ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ್ ಕತ್ತಿ ಈ ಮುಖಂಡೆರಲ್ಲಾ ಬೆಳಗಾವಿಯ ಪ್ರಬಲರು, ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂದು ನಂಬಿದ್ದರು, ಆದರೇ ಅವರಲ್ಲೆನ್ಲಾ ಬಿಟ್ಟು ಲಕ್ಷ್ಮಣ ಸವದಿಗೆ ಮಣೆ ಹಾಕಿರುವುದು  ಎಲ್ಲರ ಕಿಚ್ಚಿಗೆ ಕಾರಣವಾಗಿದೆ, 

SCROLL FOR NEXT