ಬಿ.ಎಸ್.ಯಡಿಯುರಪ್ಪ 
ರಾಜಕೀಯ

ಬಿಜೆಪಿ ಸರ್ಕಾರಕ್ಕೆ ತಿಂಗಳು ಭರ್ತಿ-ಪ್ರವಾಹ ಸ್ಥಿತಿ, ಸಂಪುಟ ಬಿಕ್ಕಟ್ಟಿನ ನಡುವೆ ಅಡಕತ್ತಿರಿಗೆ ಸಿಕ್ಕಿದ ಬಿಎಸ್ ವೈ

ಸೋಮವಾರ, ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಒಂದು ತಿಂಗಳು ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದು, 76 ವರ್ಷದ ಬಿಜೆಪಿ ನಾಯಕನಿಗೆ ಸಹಾಯಕ್ಕೆ ಕ್ಯಾಬಿನೆಟ್ ಇಲ್ಲದೆಯೂ ರಾಜ್ಯದ ನೆರೆ ಪರ್ಸ್ಥಿತಿಯನ್ನು ಏಕಾಂಗಿಯಾಗಿ ನಿಭಾಯಿಸಬೇಕಾಗಿ ಬಂದಿತ್ತು.ಅಲ್ಲದೆ ಕಳೆದ 30 ದಿನಗಳಲ್ಲಿ ರಾಜಕೀಯ ಮತ್ತು ಆಡಳಿತ ರಂಗಗಳಲ್ಲಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು.

ಬೆಂಗಳೂರು: ಸೋಮವಾರ, ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಒಂದು ತಿಂಗಳು ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದು, 76 ವರ್ಷದ ಬಿಜೆಪಿ ನಾಯಕನಿಗೆ ಸಹಾಯಕ್ಕೆ ಕ್ಯಾಬಿನೆಟ್ ಇಲ್ಲದೆಯೂ ರಾಜ್ಯದ ನೆರೆ ಪರ್ಸ್ಥಿತಿಯನ್ನು ಏಕಾಂಗಿಯಾಗಿ ನಿಭಾಯಿಸಬೇಕಾಗಿ ಬಂದಿತ್ತು.ಅಲ್ಲದೆ ಕಳೆದ 30 ದಿನಗಳಲ್ಲಿ ರಾಜಕೀಯ ಮತ್ತು ಆಡಳಿತ ರಂಗಗಳಲ್ಲಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು.

ರಾಜ್ಯದ ಹೆಚ್ಚಿನ ಭಾಗಗಳು ಬರಗಾಲಕ್ಕೆ ಸಿಲುಕಿದ ಸಮಯದಲ್ಲಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು. ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಬರ ಪರಿಹಾರ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಲು ಅವರು ತಕ್ಷಣ ಅಧಿಕಾರಿಗಳೊಂದಿಗೆ ಮ್ಯಾರಥಾನ್ ಸಭೆ ನಡೆಸಿದರು. ಆದರೆ ಈ ಸಭೆಗಳ ಕೆಲವೇ ವಾರಗಳಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿ ಇದ್ದಕ್ಕಿದ್ದಂತೆ, ರಾಜ್ಯda  ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು.. ಭಾರೀ ಮಳೆ ಮತ್ತು ಮಹಾರಾಷ್ಟ್ರ ಬಿಡುಗಡೆ ಮಾಡಿದ ನೀರೂ ಸೇರಿ  ಹಲವಾರು ಜಿಲ್ಲೆಗಳಲ್ಲಿ ಜನಜೀವನವೇ ದುಸ್ಥರವಾಗಿತ್ತು

ಈಗಲೂ ರಾಜ್ಯದ 30 ಜಿಲ್ಲೆಗಳಲ್ಲಿ 22 ಜಿಲ್ಲೆಗಳು ನೆರೆ ಪರಿಸ್ಥಿತಿ ಎದುರಿಸುತ್ತಿದೆ.ಪ್ರವಾಹದಿಂದ ಸಾರಿಗೆ ಸಂಪರ್ಕಕ್ಕೆ ಅಡ್ಡಿಯಾಗಿದೆ. ಹಲವಾರು ಪ್ರದೇಶಗಳು ಮುಳುಗಡೆಯಾಗಿದೆ.ಇದರಿಂದ ಯಡಿಯೂರಪ್ಪ ಆಡಳಿತವು ಪರೀಕ್ಷೆಗೆ ಒಳಗಾಯಿತು.ಈ ಸಮಯದಲ್ಲಿ, ಅವರು ಕ್ಯಾಬಿನೆಟ್ ನ ಏಕೈಕ  ಸದಸ್ಯರಾಗಿದ್ದರು ಮತ್ತು ಇನ್ನೂ ಯಾವುದೇ ಮಂತ್ರಿಗಳನ್ನು ನೇಮಕ ಮಾಡಿರಲಿಲ್ಲ.ದೆಹಲಿಯಲ್ಲಿದ್ದಾಗ, ಪಕ್ಷದ ಮುಖಂಡ ಅಮಿತ್ ಶಾ, ಪ್ರಧಾನಿ ಮೋದಿ ಮತ್ತು ಇತರರನ್ನು ಭೇಟಿ ಮಾಡಲು ಕರ್ನಾಟಕಕ್ಕೆ ಹಣ ಪಡೆಯಲು ಮತ್ತು ಅವರ ಸಂಪುಟಕ್ಕೆ ಹೆಸರುಗಳನ್ನು ಅಂತಿಮಗೊಳಿಸಲು, ಯಡಿಯೂರಪ್ಪ ಅವರು ತಮ್ಮ ಪ್ರಯತ್ನ ಮಾಡಿದರೂ ರಾಜ್ಯದ ಹದಗೆಟ್ಟ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಲಿಲ್ಲ.ದೆಹಲಿ ಪ್ರವಾಸ ಮೊಟಕು ಮಾಡಿ ರಾಜ್ಯದ ವಾಹದಿಂದ ಹಾನಿಗೊಳಗಾದ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳುವಂತಾಯಿತು. ಅವರು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನಾಲ್ಕು ದಿನ ವಾಸ್ತವ್ಯ ಹೂಡಿದ್ದರು.

ಇದೆಲ್ಲದರ ನಡುವೆ ಪ್ರವಾಹಕ್ಕಾಗಿ ಕೋಟಿ ರು ದೇಣಿಗೆ ನೀಡಿದ ವ್ಯಕ್ತಿ ಅಥವಾ ಸಂಸ್ಥೆ ಹೆಸರನ್ನು ಗ್ರಾಮಗಳಿಗೆ ಇಡುವ ನಿರ್ಧಾರ ಮಾಡಿದ್ದಾಗಿ ಮಾದ್ಯಮಗಳಲ್ಲಿ ವರದಿಯಾಗಿದ್ದು ಇದು ವಿವಾದಕ್ಕೂ ಕಾರಣವಾಗಿತ್ತು.ಆ ಬಳಿಕ ಅವರು ವ್ಯಕ್ತಿ ಹೆಸರನ್ನು ಒಂದು ಲೇಔಟ್ ಗಷ್ಟೇ ಇಡುವುದಾಗಿ, ಇಡೀ ಹಳ್ಳಿಗಲ್ಲ ಎಂದು ಸ್ಪಷ್ಟನೆ ನೀಡಬೇಕಾಯಿತು.

ಆಗಸ್ಟ್ 16 ರಂದು ನವದೆಹಲಿಗೆ ಅವರ ಎರಡನೇ ಭೇಟಿಯ ನಂತರ, ಅಲ್ಲಿ ಅವರು ಪ್ರಧಾನಿ ಮತ್ತು ಇತರ ಹಿರಿಯ ಮಂತ್ರಿಗಳನ್ನು ಭೇಟಿಯಾದರು, ಅವರು ತಮ್ಮ ಸಂಪುಟವನ್ನು ರಚಿಸಲುತಯಾರಾದರು. ಹಾಗೇ  17 ಮಂದಿ ಮಂತ್ರಿಗಳನ್ನು ನೇಮಕ ಮಾಡಲಾಯಿತು.. ಅದೇ ಸಮಯದಲ್ಲಿ, ಅವರು ಹಿಂದಿನ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಂಡಾಯ ಶಾಸಕರೊಂದಿಗೆ ವ್ಯವಹರಿಸಬೇಕಾಯಿತು. ಆಗಸ್ಟ್ 22 ರಂದು ಅವರು ಮತ್ತೆ ದೆಹಲಿಗೆ ಹೋದರು ಹೀಗೆ ರಾಷ್ಟ್ರ ರಾಜಧಾನಿಯಲ್ಲಿ ತಿಂಗಳಲ್ಲಿ ಏಳು ದಿನಗಳನ್ನು ಕಳೆದ ಯಡಿಯೂರಪ್ಪ ಇದೀಗ ಸಚಿವರ ಖಾತೆ ಹಂಚಿಕೆ ಅಂತಿಮಗೊಳಿಸುವ ಕಾರ್ಯದಲ್ಲಿದ್ದಾರೆ.ಭಾನುವಾರ ಅವರು ನಾಲ್ಕನೇ ಬಾರಿಗೆ ನವದೆಹಲಿಗೆ ಭೇಟಿ ನೀಡಲಿದ್ದಾರೆ. ಆದರೆ, ಈ ಬಾರಿ ಬಿಜೆಪಿಯ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರಿಗೆ ಅಂತಿಮ ನಮನ ಸಲ್ಲಿಸುವುದು ಅವರ ಮೊದಲ ಆದ್ಯತೆಯಾಗಿದೆ.

ಇದೇ ವೇಳೆ ಯಡಿಯೂರಪ್ಪ ನಿಕಟವರ್ತಿ ಸಿಎಂ ಕುಮಾರಸ್ವಾಮಿ ತಾವು ಹೊಸದಾಗಿ ಸಿಎಂ ಹುದ್ದೆಗೇರಿದ್ದಾಗ ಹೆಚ್ಚಿನ ಅವಧಿಯನ್ನು ಸಿಎಂ ಕಛೇರಿಯಲ್ಲಿ ಕಳೆದಿದ್ದರು. ಹಾಗೆಯೇ ರಾಜ್ಯಾದ್ಯಂತ ದೇವಾಲಯಗಳಿಗೆ ಭೇಟಿ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್