ರಾಜಕೀಯ

ಸಿದ್ದರಾಮಯ್ಯ ಬೆನ್ನಿಗೆ ಚೂರಿಹಾಕುವವರಲ್ಲಿ, ನೇರವಾಗಿ ಮಾತನಾಡುತ್ತಾರೆ ಅಷ್ಟೇ: ಚಲುವರಾಯಸ್ವಾಮಿ

Srinivasamurthy VN

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಚೂರಿಹಾಕುವವರಲ್ಲಿ, ನೇರವಾಗಿ ಮಾತನಾಡುತ್ತಾರೆ ಅಷ್ಟೇ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರ ಜತೆಗೆ ಮಾತಾಡಿದ ಮಾಜಿ ಸಚಿವ ಚಲುವರಾಯಸ್ವಾಮಿ ಅವರು, 'ಮಾಜಿ ಸಿಎಂ ಸಿದ್ದರಾಮಯ್ಯ ಇದ್ದಿದ್ದನ್ನು ಇದ್ದ ಹಾಗೆ ಹೇಳುತ್ತಾರೆ. ಅವರು ಎಂದಿಗೂ ಇನ್ನೊಬ್ಬರ ಬೆನ್ನಿಗೆ ಚೂರಿ ಹಾಕೋ ಕೆಲಸ ಮಾಡಿಲ್ಲ. ನೀವು ಮಾತ್ರ ಇತ್ತೀಚೆಗೆ ದೇಶದಲ್ಲಿ ವಾತಾವರಣ ಸರಿಯಿಲ್ಲ, ನಾನೇನು ಮಾತಾಡೋದಿಲ್ಲ ಎಂದು ಹೇಳಿದ್ದಿರಿ. ಇದೀಗ ಎರಡೇ ದಿನಕ್ಕೆ ವಾತಾವರಣ ಸರಿಹೋಯಿತಾ? ಯಾಕೋ ಬಿಜೆಪಿ ಉತ್ತಮ ಎನ್ನುತ್ತಿದ್ದೀರಿ. ಈ ಹಿಂದೆ ಯಡಿಯೂರಪ್ಪಗೆ ನೀವು ಏನು ಮಾಡಿದ್ದಿರಿ ಎಂಬುದು ಗೊತ್ತಿಲ್ಲವೇ.. ಎಂದು ಪ್ರಶ್ನಿಸಿದ್ದಾರೆ.

ನಿಮಗೆ ಕಾಂಗ್ರೆಸ್ಸನ್ನು ಕಂಡ್ರೆ ಆಗೋದಿಲ್ಲ, ಬಿಜೆಪಿಯೂ ಆಗಲ್ಲ. ಮತ್ಯಾವ ಪಕ್ಷವೂ ನಿಮಗೆ ಆಗೋದಿಲ್ಲ ಎಂದರೇ 120 ಸೀಟು ಗೆಲ್ಲೋವರೆಗೂ ಸುಮ್ಮನಿರಿ. ಮೊದಲೇ ಸಿದ್ದರಾಮಯ್ಯ ಇರೋದಾದರೆ ನಮಗೆ ಕಾಂಗ್ರೆಸ್​ ಸಹವಾಸ ಬೇಡ ಎಂದು ಹೇಳಬೇಕಿತ್ತು. ಮಂಡ್ಯದಲ್ಲಿ ಡಮ್ಮೀ ಅಭ್ಯರ್ಥಿ ಹಾಕಿಸ್ಕಂಡು ಗೆದ್ದಿದ್ದೀರಿ. ಒಕ್ಕಲಿಗರ ಸಮಾಜವನ್ನು ಬಳಸಿಕೊಂಡು ಹೀಗೇಕೆ ಮಾಡುತ್ತಿದ್ದೀರಿ. ನೀವು ಇಲ್ಲಿಯವರೆಗೂ ಯಾವುದೇ ಒಕ್ಕಲಿಗೆ ಕುಟುಂಬವನ್ನು ಬೆಳೆಸಿಲ್ಲ. ಆದರೂ, ನಮ್ಮ ಸಮಾಜದವರು ಯಾರಿಗೂ ಕೊಡದಷ್ಟು ಬೆಂಬಲ ನಿಮಗೆ ನೀಡಿದ್ದಾರೆ. ಅನರ್ಹ ಶಾಸಕ ಗೋಪಾಲಯ್ಯ, ನಾರಾಯಣಗೌಡ ಹಾಗೂ ವಿಶ್ವನಾಥ್ ಜೆಡಿಎಸ್ ಶಾಸಕರು ಬಿಜೆಪಿಗೆ ಹೋದರಲ್ಲವೇ ಇದಕ್ಕೆ ಹೊಣೆ ಯಾರು? ಎಂದು ಚಲುವರಾಯ ಸ್ವಾಮಿ ಕಿಡಿಕಾರಿದ್ದಾರೆ.

ಮುಂಬರುವ ಉಪಚುನಾವಣೆಗಾಗಿ ಮಾಜಿ ಸಿಎಂ ಕುಮಾರಸ್ವಾಮಿ, ದೇವೇಗೌಡರು ಹೀಗೆ ಮಾತಾಡುತ್ತಿದ್ಧಾರೆ. ತಮ್ಮ ಹಿತಾಸಕ್ತಿ ಬೇಯಿಸಿಕೊಳ್ಳಲು ಹೀಗೆ ಮಾಡ್ತಿದ್ದಾರೆ. ದೇವೇಗೌಡರ ಕುಟುಂಬ ಬಿಟ್ಟರೇ ಯಾವುದಾದ್ರೂ ಒಕ್ಕಲಿಗ ನಾಯಕರ ಕುಟುಂಬ ಉಳಿದಿದೆಯೇ. 20 ವರ್ಷದ ದೇವೇಗೌಡರ ರಾಜಕಾರಣದಲ್ಲಿ ಬಿಜೆಪಿ ಉತ್ತಮ ಅಂದಿದ್ದು ಇದೇ ಮೊದಲು ಎಂದು ವ್ಯಂಗ್ಯ ಮಾಡಿದರು.

SCROLL FOR NEXT