ರಾಜಕೀಯ

ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ದತೆ:  ಸಂಪುಟದಲ್ಲಿ ಜಾತಿವಾರು ಪ್ರಾತಿನಿಧ್ಯ!

Shilpa D

ಬೆಂಗಳೂರು: ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಮೂಲಕ ರಾಜ್ಯದ ಇತಿಹಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೊಸ ದಾಖಲೆ ಬರೆದಿದ್ದಾರೆ.

ಈ ಮೂವರು ನಾಯಕರು ಮೂರು ಪ್ರಧಾನ ಸಮುದಾಯಗಳ ಪ್ರತಿನಿಧಿಗಳಾಗಿದ್ದಾರೆ. ಲಿಂಗಾಯತ, ದಲಿತ ಹಾಗೂ ಒಕ್ಕಲಿಗ ಸಮುದಾಯಗಳಿಗೆ ಸೇರಿದವರಾಗಿದ್ದಾರೆ, ಏಕೆಂದರೇ ರಾಜ್ಯದಲ್ಲಿ ಈ ಮೂರು ಸಮುದಾಯಗಳ ಜನಸಂಖ್ಯೆ ಅಧಿಕ ಪ್ರಮಾಣದಲ್ಲಿದೆ.

ಬಿಜೆಪಿಯ ಈ ನಿರ್ಧಾರ ವಿಧಾನಸಭೆ ಚುನಾವಣೆಗಾಗಿ ಸಿದ್ಧತೆ ನಡೆಸುತ್ತಿರುವ ಸುಳಿವು ನೀಡಿದೆ. ಐದನೇ ಬಾರಿ  ಶಾಸಕರಾಗಿರುವ ಗೋವಿಂದ ಕಾರಜೋಳ,ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ, ಮೂರು ಬಾರಿ ಶಾಸಕರಾಗಿರುವ ಒಕ್ಕಲಿಗ ನಾಯಕರಾಗಿರುವ ಅಶ್ವತ್ಥ ನಾರಾಯಣ  ಹಾಗೂ ಲಿಂಗಾಯತ ಸಮುದಾಯದಿಂದ ಲಕ್ಷ್ಮಣ ಸವದಿ ಆಗಿದ್ದಾರೆ.

ಕಳೆದ ಮೂರು ದಿನಗಳಿಂದ ಈ ಮೂವರ ಹೆಸರು ಕೇಳಿಬರುತ್ತಿದ್ದು, ಇವರ ನೇಮಕ ಯಾರಿಗೂ ಅಚ್ಚರಿ ತಂದಿಲ್ಲ, ಆರಂಭದಿಂದಲೂ ಗೋವಿಂದ ಕಾರಜೋಳ ಯಡಿಯೂರಪ್ಪ ಅವರ ಜೊತೆಗಿದ್ದರು. ಲಕ್ಷ್ಮಣ ಸವದಿ ಅವರು ಬಿ,ಎಸ್ ಸಂತೋಷ್ ಅವರ ಬೆಂಬಲದಿಂದಾಗಿ ಡಿಸಿಎಂ ಆಗಿದ್ದಾರೆ, ಅಶ್ವತ್ಥನಾರಾಯಣ, ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ ಸವದಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡ ಹಿನ್ನೆಲೆಯಲ್ಲಿ ಅಸಮಾಧಾನ ಮೂಡಿದೆ,  ನಮ್ಮ ನಾಯಕರು ಏಕೆ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೋ ಎಂಬುದು ತಿಳಿಯುತ್ತಿಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಆದರೆ ಮೂಲಗಳ ಪ್ರಕಾರ, ಬಿಜೆಪಿ ಮಧ್ಯಂತರ ಚುನಾವಣೆಗೆ ಸಿದ್ಧವಾಗುತ್ತಿದೆ ಎಂದು ಹೇಳಲಾಗುತ್ತಿದೆ, ಒಂದು ವೇಳೆ ಚುನಾವಣೆಗೆ ಹೋದರೇ ಈ ಮೂರು ಸಮುದಾಯಗಳೇ ನಿರ್ಣಾಯಕವಾಗಿರುತ್ತದೆ, ಈ ಮೂರು ಜಾತಿಗಳ ಮತಗಳು ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.  ಎಲ್ಲಾ ಬಾಗದಲ್ಲಿ ಪಕ್ಷವನ್ನು ವಿಸ್ತರಿಸುವುದು ಬಿಜೆಪಿಗೆ ಬೇಕಾಗಿದೆ.  ಹೀಗಾಗಿ  ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

SCROLL FOR NEXT