ರಾಜಕೀಯ

ಉಪ ಚುನಾವಣೆಗೆ ಜೆಡಿಎಸ್ ಸಿದ್ಧತೆ:  ಬೈ ಪೋಲ್ ನಲ್ಲಿ ದೇವೇಗೌಡರ ಹಿರಿಯ ಪುತ್ರಿ ಸ್ಪರ್ಧೆ!

Shilpa D

ಬೆಂಗಳೂರು: 17 ಮಂದಿ ಜೆಡಿಎಸ್ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರಿಂದ ಸಮ್ಮಿಶ್ರ ಸರ್ಕಾರ ಉರುಳಿಸಿ  ಬಿಜೆಪಿ ಸರ್ಕಾರ  ರಚನೆಯಾಯಿತು.ಈಗ 17 ಶಾಸಕರ ರಾಜಿನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.

ಈ ಉಪ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿವೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಲಿವೆ, ಜೆಡಿಎಸ್ ನ ಮೂರು ಶಾಸಕರು ಅನರ್ಹಗೊಂಡಿದ್ದು, ಬೆಂಗಳೂರು ಸೇರಿದಂತೆ ಹಲವು ಕಡೆ ಗೆಲ್ಲಲೇ ಬೇಕೆಂದು ಜೆಡಿಎಸ್ ಪಣ ತೊಟ್ಟಿದೆ.

ಹೀಗಾಗಿ ಬೆಂಗಳೂರು ನಗರಕ್ಕೆ  ಹೆಚ್ಚಿನ ಗಮನ ಕೇಂದ್ರೀಕರಿಸಿದೆ, ಬೆಂಗಳೂರಿನ ಯಶವಂತಪುರ ಮತ್ತು ರಾಜರಾಜೇಶ್ವರಿ ನಗರ ದಲ್ಲಿ ಕಾಂಗ್ರೆಸ್ ಶಾಸಕರಿದ್ದರು, ಮಹಾಲಕ್ಷ್ಮಿ ಲೇಔಟ್ ನಲ್ಲಿ ಜೆಡಿಎಸ್ ಶಾಸಕ ಗೋಪಾಲಯ್ಯ ಗೆಲುವು ಸಾಧಿಸಿದ್ದರು,  ಹೀಗಾಗಿ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ.

ಅಭ್ಯರ್ಥಿಯನ್ನು ಆರಿಸುವಾಗ ಜಾತಿ. ಕಾರಣ, ಪ್ರಚಾರ,  ಕೋಪ ಅನರ್ಹ ಶಾಸಕರ ವಿರುದ್ಧ ಜನ ಕೋಪಗೊಂಡಿದ್ದಾರೆ, ತಮ್ಮ ಗ್ರಾಮೀಣ ಪಕ್ಷದ ಇಮೇಜ್ ಮೂಲಕ  ಬೆಂಗಳೂರಿನಲ್ಲಿ ಅತಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಲು ಜೆಡಿಎಸ್ ಹವಣಿಸುತ್ತಿದೆ.

ಯಶವಂತಪುರ ವಿಧಾನಸಭೆ ಕ್ಷೇತ್ರದಿಂದ ಟಿಎನ್ ಜವರಾಯಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಮಶೇಖರ್ ವಿರುದ್ದ 12 ಸಾವಿರ ಮತಗಳಿಂದ ಸೋತಿದ್ದರು. ಆದರೆ ಸದ್ಯ ಸಾರ್ವಜನಿಕರ ಕೋಪ  ಸೋಮಶೇಖರ್ ವಿರುದ್ದ ಇರುವುದರಿಂದ ಜೆಡಿಎಸ್ಗೆ ಲಾಭವಾಗುವ ಸಾಧ್ಯತೆಯಿದೆ.

ಬೆಂಗಳೂರಿನ ಜೊತೆಗೆ ಹುಣಸೂರು ಮತ್ತು ಕೆ.ಆರ್ ಪೇಟೆ ಕ್ಷೇತ್ರಗಳ ಕಡೆಗೂ ಗಮನ ಹರಿಸುತ್ತಿದ್ದಾರೆ.  ದೇವೇಗೌಡದ ಕುಟುಂಬದ ಮನೆಯಿಂದ ಮತ್ತೊಬ್ಬ ಅಭ್ಯರ್ಥಿ ರಾಜಕಾರಣಕ್ಕೆ ಪ್ರವೇಶಲಿದ್ದಾರೆ ಎಂದು ಹೇಳಲಾಗುತ್ತಿದೆ. ದೇವೇಗೌಡರ ಹಿರಿಯ ಪುತ್ರಿ ಅನಸೂಯ ಮಂಜುನಾಥ್ ಹೆಸರು ಕೇಳಿ ಬರುತ್ತಿದೆ. ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ನಿಖಿಲ್ ಕುಮಾರ ಸ್ವಾಮಿ ಅವರನ್ನು ಮತ್ತೆ ಕಣಕ್ಕಿಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

SCROLL FOR NEXT