ಕೆಬಿ ಕೋಳಿವಾಡ 
ರಾಜಕೀಯ

ಅನುಭವಿ ಮತ್ತು ಹೊಸಬರ ನಡುವಿನ ಯುದ್ಧಕ್ಕೆ ನಿರ್ಣಾಯಕವಾಗಲಿವೆ ಕುರುಬ ಮತಗಳು!

ಹಾವೇರಿ ಜಿಲ್ಲೆಯ  ರಾಣೆ ಬೆನ್ನೂರು ಉಪ ಚುನಾವಣೆ ಕಣ ರಂಗೇರುತ್ತಿದೆ, ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ವಿರುದ್ಧ ಬಿಜೆಪಿಯ ಅರುಣ್ ಕುಮಾರ್ ಗುಟ್ಟೂರ್  ಸ್ಪರ್ಧಿಸಿದ್ದಾರೆ.

ಹುಬ್ಬಳ್ಳಿ:  ಹಾವೇರಿ ಜಿಲ್ಲೆಯ  ರಾಣೆ ಬೆನ್ನೂರು ಉಪ ಚುನಾವಣೆ ಕಣ ರಂಗೇರುತ್ತಿದೆ, ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ವಿರುದ್ಧ ಬಿಜೆಪಿಯ ಅರುಣ್ ಕುಮಾರ್ ಗುಟ್ಟೂರ್  ಸ್ಪರ್ಧಿಸಿದ್ದಾರೆ.

ಅನರ್ಹ ಶಾಸಕ ಆರ್.ಶಂಕರ್  ಅವರಿಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ ಕಾರಣ ಮತದಾರರು ಅಸಮಾಧಾನ ವ್ಯಕ್ತ ಪಡಿಸಿದ್ದರು. 2018 ರ ವಿಧಾನಸಭೆ ಚುನಾವಣೆ ನಡೆದು 18 ತಿಂಗಳಲ್ಲೇ ಶಂಕರ್ ರಾಜಿನಾಮೆ ನೀಡಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ  ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು 11ನೇ ಬಾರಿಗೆ ಚುನಾವಣೆ ಸ್ಪರ್ಧಿಸಿದ್ದಾರೆ.  ಮತ್ತೆ ಇದೇ ಕೊನೆಯ ಚುನಾವಣೆ ಎಂದು ಘೋಷಿಸಿದ್ದಾರೆ. ಅದರ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಇದಾಗಿದೆ,  ಕೋಳಿವಾಡ ಅವರಿಗೆ ಅಪಾರ ಅನುಭವವಾಗಿದೆ, ಗುತ್ತೂರು ಅವರಿಗೆ ಹೊಸಬರಾಗಿದ್ದಾರೆ.  ತಮ್ಮ ಹಿಂದಿನ ಕೆಲಸಗಳನ್ನು ನೋಡಿ ಜನ ತಮಗೆ ಮತ ಹಾಕಲಿದ್ದಾರೆ ಎಂದು ಕೋಳಿವಾಡ ಅವರ ಅಭಿಪ್ರಾಯವಾಗಿದೆ.

ರಾಣೆ ಬೆನ್ನೂರು ಕ್ಷೇತ್ರದಲ್ಲಿ ಜಾತಿ ರಾಜಕೀಯ ಪ್ರಮುಖವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಎಸ್ ಸಿ ಎಸ್ ಟಿ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿವೆ, ಲಿಂಗಾಯತರೇ ಅಧಿಕವಾಗಿರುವ ರಾಣೆ ಬೆನ್ನೂರು  ಕ್ಷೇತ್ರದಲ್ಲಿ 2 ನೇ ಸ್ಥಾನ ಹಿಂದುಳಿ ವರ್ಗಗಳದ್ದಾಗಿದೆ. ಆದರೆ ಕುರುಬ ಸಮುದಾಯದ ಅಂತಿಮ ನಿರ್ಧರವೇ ಇಲ್ಲಿ ಪ್ರಮುಖವಾದದ್ದು.

ಜೆಡಿಎಸ್ ಗೆ ಇಲ್ಲಿ ಅಸ್ತಿತ್ವವಿಲ್ಲ, ಲಿಂಗಾಯತ ಸಮುದಾಯದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಹಲಗೇರಿ ಅವರ ಜನಪ್ರಿಯತೆ ಮೇಲೆ ಮಾತ್ರ ಜೆಡಿಎಸ್ ವೋಟ್ ಸಿಗಲಿದೆ.

ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಈ ತಕ್ಷೇತ್ರದ ಜನ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ,  ಆಡಳಿತಾರೂಡ ಪಕ್ಷ ಎಲ್ಲಾ ಅವಶ್ಯಕತೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಕೋಳಿವಾಡ ಎಮೋಷನಲ್ ಕಾಾರ್ಜ್ ಪ್ಲೇ ಮಾಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT