ರಾಜಕೀಯ

ಹಣದ ಪಾತ್ರದಿಂದಲೇ  ಮತದಾರರು ಶಾಸಕರು, ಮಂತ್ರಿಗಳನ್ನು ಆಯ್ಕೆ ಮಾಡುತ್ತಿದ್ದಾರೆಯೇ?

Nagaraja AB

ಬೆಂಗಳೂರು:  ರಾಜ್ಯದಲ್ಲಿನ  15 ಕ್ಷೇತ್ರಗಳ ಉಪ ಚುನಾವಣೆಗೆ ಇನ್ನೂ ಕೇವಲ ಎರಡು ದಿನಗಳು ಬಾಕಿ ಇದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗುವ ವಿಶ್ವಾಸದಲ್ಲಿದ್ದರೆ, ಅನೇಕ ಅಭ್ಯರ್ಥಿಗಳು ಸಚಿವರಾಗುವ ಕನಸು ಕಾಣುತ್ತಿದ್ದಾರೆ. ಆದರೆ,  ಶಾಸಕರು ಅಥವಾ ಸಚಿವರು ನೇರವಾಗಿ ಜನರಿಂದಲೇ ಆಯ್ಕೆಯಾಗುತ್ತಾರೆಯೇ ಎಂಬ  ಪ್ರಶ್ನೆ ಕಾಡುತ್ತಿದೆ.

ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಶಾಸಕರು ಮಾತ್ರವಲ್ಲ, ಸಚಿವರನ್ನಾಗಿ ಮಾಡುವುದಾಗಿ ವಿವಿಧ ಪಕ್ಷಗಳು ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ರೀತಿಯ ಚುನಾವಣೆ ಬಗ್ಗೆ ರಾಜಕೀಯ ತಜ್ಞರು ಕಳವಳ ವ್ಯಕ್ತಪಡಿಸುತ್ತಾರೆ.

ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದು, ಸಚಿವರಾದರೆ ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಭಾವಿಸುವ ಜನರೇ ಹೆಚ್ಚು. ಈ ರೀತಿ ಮಾಡಬಾರದು ಎನ್ನುತ್ತಾರೆ ರಾಜಕೀಯ ತಜ್ಞ ಎ. ನಾರಾಯಣ

ಬಿಜೆಪಿ ಗೇಮ್ ಪ್ಲಾನ್ ಮಾಡುತ್ತಿದ್ದು, ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನು ಸಚಿವರನ್ನಾಗಿ ಮಾಡುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರಚಾರ ಮಾಡಿದ್ದ ಕ್ಷೇತ್ರಗಳೆಲ್ಲಾ ಹೇಳಿದ್ದಾರೆ. ರಾಜ್ಯದಲ್ಲಿ 34 ಸಚಿವ ಸ್ಥಾನಗಳಿದ್ದು, ಯಡಿಯೂರಪ್ಪ 18 ಸ್ಥಾನಗಳನ್ನು ತುಂಬಿದ್ದು,  ಅನರ್ಹ ಶಾಸಕರು ಗೆದ್ದು ಬಂದರೆ ಸೇರಿಸಿಕೊಳ್ಳಲು ಉಳಿದ  ಸ್ಥಾನಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಇದು ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಈ ಮಧ್ಯೆ ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಪತನವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳುತ್ತಿದ್ದರೆ, ಕಾಂಗ್ರೆಸ್ ಮರು ಮೈತ್ರಿಯ ಜಪ ಮಾಡುತ್ತಿದೆ. ಮತ್ತೊಂದೆಡೆ ಬಿಜೆಪಿಗೆ ಹೊರಗಿನ ಬೆಂಬಲ ನೀಡುವುದಾಗಿ ಜೆಡಿಎಸ್ ಹೇಳುತ್ತಿದೆ. ಚುನಾವಣೆಯಲ್ಲಿ ಗೆದ್ದು ಬಂದ ಅನರ್ಹ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲೇಬೇಕಿದೆ. ಸ್ವಾಭಾವಿಕವಾಗಿ ಸಂಪುಟ ಸ್ಥಾನ ನೀಡಲೇಬೇಕಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ. 

ಇತರ ಯಾವುದೇ ಚುನಾವಣೆಗಳಿಗಿಂತ ಈ ಚುನಾವಣೆ ಏನೂ ಭಿನ್ನವೇನಿಲ್ಲ ಎನ್ನುವ ನಾರಾಯಣ, ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಸಚಿವರಾಗಬಹುದು ಎಂಬುದು ನಾಯಕರಲ್ಲಿ ಸರ್ವೇ ಸಾಮಾನ್ಯವಾಗಿ ಇರುತ್ತದೆ. ಆದರೆ, ಈಗಿನ ವಾತಾವರಣದಲ್ಲಿ ಈಗಾಗಲೇ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಅಭ್ಯರ್ಥಿಗಳು ಮಂತ್ರಿಯಾಗಲು ಮತ ಚಲಾಯಿಸಬೇಕಾಗಿದೆ.

SCROLL FOR NEXT