ರಾಜಕೀಯ

ಜೆಡಿಎಸ್ ಗೆ ಶಕ್ತಿವರ್ಧಕವಾದ ವಿವಾದಿತ ಚುನಾವಣಾ ಬಾಂಡ್, ಆದಾಯದಲ್ಲಿ ಭಾರೀ ವೃದ್ದಿ ದಾಖಲಿಸಿದ ತೆನೆ ಪಕ್ಷ

Raghavendra Adiga

ಬೆಂಗಳೂರು: ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ತನ್ನ ಆದಾಯದಲ್ಲಿ 422% ನಷ್ಟು ಏರಿಕೆಯೊಂದಿಗೆ, ಜೆಡಿಎಸ್ 2018-19ರಲ್ಲಿ ಅತಿ ಹೆಚ್ಚು ಆದಾಯವನ್ನು ಹೊಂದಿರುವ ಪ್ರಾದೇಶಿಕ ಪಕ್ಷಗಳಲ್ಲಿ ಐದನೇ ಸ್ಥಾನ ಪಡೆದಿದೆ ಕಳೆದ  ವರ್ಷ 8.20 ಕೋಟಿ ರೂ.ಗಳ ಆದಾಯವನ್ನು ತೋರಿಸಿದ್ದ ಪಕ್ಷ ಈ ಹಣಕಾಸು ವರ್ಷದಲ್ಲಿ ಭಾರತದ ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್‌ನಲ್ಲಿ 42.89 ಕೋಟಿ ರೂ ತೋರಿಸಿದೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ 2018-19ರ ಆರ್ಥಿಕ ವರ್ಷದ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳ ಆದಾಯ ಮತ್ತು ಖರ್ಚಿನ ವಿಶ್ಲೇಷಣೆ, ವರದಿ ಭಾರತದಲ್ಲಿರುವ ಐದು ಉನ್ನತ-ಆದಾಯದ  ಪ್ರಾದೇಶಿಕ ಪಕ್ಷಗಳಲ್ಲಿ ಜೆಡಿಎಸ್ ಸಹ ಒಂದೆಂದು ಪಟ್ಟಿ ಮಾಡಿದೆ. ಆದರೂ ಪಕ್ಷದ ಒಟ್ಟೂ ಆದಾಯದಲ್ಲಿ  0.03% ನಷ್ಟು ಕಡಿಮೆಯಾಗಿದೆ ಇದುವರೆಗೆ ಮೂರು ರಾಷ್ಟ್ರೀಯ ಮತ್ತು 22 ಪ್ರಾದೇಶಿಕ ಪಕ್ಷಗಳು ತಮ್ಮ ಒಟ್ತಾರೆ ಆದಾಯದ ಮಾಹಿತಿಯನ್ನು ಆಯೋಗಕ್ಕೆ ನೀಡಿದೆ. ವಿಶೇಷವೆಂದರೆ, ಜೆಡಿಎಸ್ ಈ ವರ್ಷ ತನ್ನ ಆದಾಯದ 82.18% ಅನ್ನು ಕೇಂದ್ರ ಸರ್ಕಾರದ ವಿವಾದಾತ್ಮಕ ಚುನಾವಣಾ ಬಾಂಡ್‌ಗಳ ಮೂಲಕ ಪಡೆದುಕೊಂಡಿದೆ.

ಈ ಹಣಕಾಸು ವರ್ಷದಲ್ಲಿ ಮೂರು ರಾಷ್ಟ್ರೀಯ ಪಕ್ಷಗಳು ಮತ್ತು 22 ಪ್ರಾದೇಶಿಕ ಪಕ್ಷಗಳ ಒಟ್ಟು ಘೋಷಿತ ಆದಾಯ 1,163.17 ಕೋಟಿ ರೂ ಆಗಿದ್ದು ಬಿಜೆಡಿ ಅತಿ ಹೆಚ್ಚು ಆದಾಯ  249.31 ಕೋಟಿ ರೂ ಅನ್ನು ತೋರಿಸಿದೆ.ಆಯೋಗಕ್ಕೆ ಸಲ್ಲಿಸಿರುವ ಪಕ್ಷಗಳ ಖರ್ಚಿನ ಲೆಕ್ಕ ಸಲ್ಲಿಸಿದ್ದು ಸಲ್ಲಿಸಿದ ಎಲ್ಲಾ ಪಕ್ಷಗಳ ಒಟ್ಟು ಆದಾಯದ 21.43% ಅಷ್ಟಿದೆ.ಪಕ್ಷಗಳು ಒಟ್ಟು ಆದಾಯದ ಕನಿಷ್ಠ 50.54% (587.87 ಕೋಟಿ ರೂ.) ಗಳನ್ನು 

ದೇಣಿಗೆಗಾಗಿ ‘ಅನಾಮಧೇಯ’ ಚುನಾವಣಾ ಬಾಂಡ್‌ಗಳ ಹೆಚ್ಚುತ್ತಿರುವ ಬಳಕೆಯ ಬಗ್ಗೆ ತನ್ನ ಕಳವಳವನ್ನು ಹಂಚಿಕೊಂಡ ಎಡಿಆರ್ ಪಾರದರ್ಶಕತೆ ಕಾಫಾಡಿಕೊಳ್ಳುವಂತೆ ಕರೆ ನೀಡಿದೆ.

“ಈ ಯೋಜನೆಯಿಂದ ದಾನಿಗಳಿಗೆ ಒದಗಿಸಲಾದ ಅನಾಮಧೇಯತೆ ನೋಡಿದರೆ 2018-19ನೇ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ದೇಣಿಗೆ ನೀಡುವ ಸಾಮಾನ್ಯ ಮತ್ತು ಜನಪ್ರಿಯ ಚಾನಲ್ ಆಗಿ ಚುನಾವಣಾ ಬಾಂಡ್‌ಗಳು ಹೊರಹೊಮ್ಮಿವೆ. 2018-19ನೇ ಹಣಕಾಸು ವರ್ಷದಲ್ಲಿ ವಿಶ್ಲೇಷಿಸಲಾದ 25 ರಾಜಕೀಯ ಪಕ್ಷಗಳ ಒಟ್ಟು ಆದಾಯದ (587.87 ಕೋಟಿ ರೂ.) 50% ಕ್ಕಿಂತ ಹೆಚ್ಚು ಹಣವನ್ನು ಅನಾಮಧೇಯ ಚುನಾವಣಾ ಬಾಂಡ್‌ಗಳ  ದೇಣಿಗೆಗಳಿಂದ ಪಡೆಯಲಾಗಿದೆ" ವರದಿ ಉಲ್ಲೇಖಿಸಿದೆ.

SCROLL FOR NEXT