ಕೆ. ಸುಧಾಕರ್ 
ರಾಜಕೀಯ

ವ್ಯಕ್ತಿ ಅಥವಾ ಅಭಿವೃದ್ಧಿ ಮುಖ್ಯನಾ ಎಂದು ಕಾಂಗ್ರೆಸ್‌ ನಾಯಕರಿಗೆ ಈಗ ಅರಿವಾಗಿರಬೇಕು: ಸುಧಾಕರ್

ಕಾಂಗ್ರೆಸ್ ನಾಯಕರು ಬಡಾಯಿ‌ ಕೊಚ್ಚಿಕೊಳ್ಳುತ್ತಿದ್ದರು. ಆದರೆ, ಅವರಿಗೆ ಈಗ ಗೊತ್ತಾಗಿದೆ ವ್ಯಕ್ತಿ‌ ಮುಖ್ಯನಾ ಅಥವಾ ಅಭಿವೃದ್ದಿ ಮುಖ್ಯನಾ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಹೇಳಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ನಾಯಕರು ಬಡಾಯಿ‌ ಕೊಚ್ಚಿಕೊಳ್ಳುತ್ತಿದ್ದರು. ಆದರೆ, ಅವರಿಗೆ ಈಗ ಗೊತ್ತಾಗಿದೆ ವ್ಯಕ್ತಿ‌ ಮುಖ್ಯನಾ ಅಥವಾ ಅಭಿವೃದ್ದಿ ಮುಖ್ಯನಾ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ‌ ಪರ ನಿಂತು ಚೊಚ್ಚಲ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಅವರು, "ಮೊದಲನೆಯದಾಗಿ ಮತದಾರರಿಗೆ ನಮನ‌ ಸಲ್ಲಿಸಲು ಇಚ್ಚಿಸುತ್ತೇನೆ. ಹಿಂದಿನ‌ ಸಭಾಧ್ಯಕ್ಷ  ನನ್ನನ್ನ ಅನರ್ಹರನ್ನಾಗಿ ಮಾಡಿದ್ದರು. ಆದರೆ, ಜನ ನನ್ನ ಕೈ ಬಿಡಲಿಲ್ಲ. 35 ಸಾವಿರ  ಅಂತರದಿಂದ ಗೆಲ್ಲಿಸಿದ್ದಾರೆ," ಎಂದು ಬೀಗಿದರು.

"ಅಂತಃಕರಣದಿಂದ‌ ರಾಜೀನಾಮೆ ಕೊಟ್ಟ ಮೇಲೆ ನನ್ನನ್ನು ಅನರ್ಹ ಮಾಡಿದ್ದರು. ಕಾಂಗ್ರೆಸ್ ನವರ  ಮಾತು‌ ಕೇಳಿ‌ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ನನ್ನನ್ನು ಅನರ್ಹ ಮಾಡಿದ್ದರು. ಆದರೆ, ಈ ಬಾರಿ ಚುನಾವಣೆನಲ್ಲಿ ನಮ್ಮ ಮತದಾರರು 35 ಸಾವಿರಕ್ಕೂ ಹೆಚ್ಚು ಮತ ಹಾಕಿ ಗೆಲ್ಲಿಸಿದ್ದಾರೆ," ಎಂದು ಸಂಭ್ರಮಿಸಿದರು.

"ಈ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಸ್ಥಿರ‌ ಸರ್ಕಾರ ಇರಬೇಕು. ಸುಭದ್ರ‌ ಸರ್ಕಾರ ಇರಬೇಕು. ಯಡಿಯೂರಪ್ಪ‌ನವರ ಅಧಿಕಾರದಲ್ಲಿ ಅಭಿವೃದ್ದಿ ಆಗಬೇಕು ಹಾಗೂ ಶುದ್ದ ಆಡಳಿತ ನೀಡಬೇಕು. ಈ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಬಗ್ಗೆ ಗಮನ ಹರಿಸುತ್ತೇನೆ, ಎಂದು ಸುಧಾಕರ್‌ ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!