ಶರತ್ ಬಚ್ಚೇಗೌಡ 
ರಾಜಕೀಯ

ಸುಮಲತಾರಂತೆ ಸ್ವಾಭಿಮಾನದ ಹೆಸರಲ್ಲಿ ಗೆದ್ದು ಬೀಗಿದ ಶರತ್ ಬಚ್ಚೇಗೌಡ

ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯದಿಂದಾಗಿ ಬೇಸತ್ತು ಲೋಕಸಭಾ ಚುನಾವಣೆ ವೇಳೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಭರ್ಜರಿ ಗೆಲುವು ಸಾಧಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಾರಿಯ  ಉಪಚುನಾವಣೆಯಲ್ಲಿಯೂ ಇಂತಹದ್ದೇ ಪರಿಸ್ಥಿತಿ ಶರತ್ ಬಚ್ಚೇಗೌಡ...

ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯದಿಂದಾಗಿ ಬೇಸತ್ತು ಲೋಕಸಭಾ ಚುನಾವಣೆ ವೇಳೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಭರ್ಜರಿ ಗೆಲುವು ಸಾಧಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಾರಿಯ  ಉಪಚುನಾವಣೆಯಲ್ಲಿಯೂ ಇಂತಹದ್ದೇ ಪರಿಸ್ಥಿತಿ ಶರತ್ ಬಚ್ಚೇಗೌಡ ಅವರಿಗೂ ಸೃಷ್ಟಿಯಾಗಿದ್ದು, ಸ್ವತಂತ್ರವಾಗಿ ಸ್ಪರ್ಧಿಸಿದ್ದ ಶರತ್ ಅವರು, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. 

ಶತಾಯಗತಾಯ ಕೋಟೆಯಲ್ಲಿ ಎಂಟಿಬಿ ನಾಗರಾಜ್ ಅವರು ಸೋಲೊಪ್ಪಿಕೊಂಡಿದ್ದಾರೆ. ಅಭಿವೃದ್ಧಿಗೆ ಅನುದಾನ ನೀಡದ ಕಾರಣ ಪಕ್ಷ ಬಿಟ್ಟು ಬಂದಿದ್ದೇನೆ ಎಂದು ಮತದಾರರ ಮುಂದೆ ಹೋದ ಎಂಟಿಬಿ ನಾಗರಾಜ್ ಅವರಿಗೆ ಮುಖ್ಯಮಂತ್ರಿಯಾಗಿಯಾಗಿ, ಅನೇಕ ನಾಯಕರು ಸಾಥ್ ನೀಡಿದ್ದರು. ಆದರೂ, ಹೊಸಕೋಟೆಯಲ್ಲಿ ಕಮಲ ಅರಳಲೇ ಇಲ್ಲ. 

ಪಕ್ಷಕ್ಕೆ ಕೈಗೊಂಡು ಹೋದವರಿಗೆ ಬುದ್ದಿ ಕಲಿಸಬೇಕೆಂಬ ಉದ್ದೇಶದಿಂದಲೇ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿದ ಪದ್ಮಾವತಿ ಸುರೇಥ್ ತನ್ನ ಮೂಲ ಮತಗಳನ್ನು ಕಾಯಂ ಆಗಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೊಸಕೋಟೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಶರತ್ ಬಚ್ಚೇಗೌಡ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿತು. ಪರಿಣಾಮ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲಿ ಸಭೆಗಳನ್ನು ನಡೆಸಿದ ಶರತ್ ಬಚ್ಚೇಗೌಡ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಬಿಜೆಪಿ ಪಕ್ಶಕ್ಕೆ ಸವಾಲ್ ಎಸೆದರು. 

ಶರತ್ ತನಗೆ ಮುಗ್ಗಲು ಮುಳ್ಳಾಗುತ್ತಾರೆಂದು ಗೊತ್ತಿದ್ದ ಎಂಟಿಬಿ ನಾಗರಾಜ್ ಪಕ್ಷದ ಹೈಕಮಾಂಡ್ ಮೇಲೆ ನಿರಂತರವಾಗಿ ಒತ್ತಡ ಹಾಕಿದರು. ಸಂಸದ ಬಚ್ಚೇಗೌಡ ಅವರನ್ನು ಪ್ರಚಾರಕ್ಕೆ ಬರುವಂತೆ ಮಾಡಿದ ಪ್ರಯತ್ನಗಳು ಸಫಲವಾಗಲಿಲ್ಲ.
 
ಮಂಡ್ಯ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸುಮಲತಾ ಅಂಬರೀಷ್ ಅವರಿಗೆ ಟಿಕೆಟ್ ನೀಡಲು ನಿರಾಕರಿಸಿದ್ದವು. ಇದರಂತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರು 1.25 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ಭರ್ಜರಿ ಗೆಲವು ಸಾಧಿಸಿದ್ದರು. 

ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಲು ಸುಮಲತಾ ಅವರು ನಿರ್ಧರಿಸಿದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸುಮಲತಾ ಅವರನ್ನು ಸಮಾಧಾನಪಡಿಸಲು ಸಾಕಷ್ಟು ಯತ್ನಗಳನ್ನು ಮಾಡಿದರು. ಎಂಎಲ್'ಸಿ ಮಾಡುವ ಆಫರ್ ನ್ನೂ ನೀಡಿತ್ತು. ಆದರೆ, ಅವೆಲ್ಲವನ್ನೂ ಸುಮಲತಾ ಅವರು ತಿರಸ್ಕರಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದಲ್ಲದೆ, ಸುಮಲತಾ ಅವರಿಗೆ ಬೆಂಬಲ ನೀಡಿದ್ದ ಬಿಜೆಪಿ, ಮಂಡ್ಯ ಜಿಲ್ಲೆಯನ್ನು ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. 

ಇದಾದ ಬಳಿಕ ಆಗಿನ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹಾಗೂ ಮೈತ್ರಿ ಸರ್ಕಾರ ಹಿರಿಯ ಸಚಿವರುಗಳು ಮಂಡ್ಯ ಜಿಲ್ಲೆಗೆ ಪ್ರಚಾರ ನಡೆಸಿದ್ದರು. ಆದರೆ, ಯಾರೊಬ್ಬರೂ ಸುಮಲತಾ ಅವರಿಗೆ ಬೆಂಬಲ ನೀಡಿರಲಿಲ್ಲ. ಇದೇ ರೀತಿಯ ಪರಿಸ್ಥಿತಿ ಈ ಬಾರಿಯ ಉಪಚುನಾವಣೆಯಲ್ಲಿ ಶರತ್ ಅವರಿಗೆ ಎದುರಾಗಿತ್ತು. ಎಂಟಿಬಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದ ಬಿಜೆಪಿ, ಶರತ್ ಅವರಿಗೆ ನಿರಾಕರಿಸಿತ್ತು. ಬಳಿಕ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವುದಾಗಿ ಆಫರ್ ನೀಡಿತ್ತು. ಆದರೆ, ಅದನ್ನು ಶರತ್ ಅವರು ತಿರಸ್ಕರಿಸಿ, ಬಿಜೆಪಿ ವಿರುದ್ಧವೇ ಸ್ಪರ್ಧಿಸಲು ನಿಂತರು. ಇದರಂತೆ ಶರತ್ ಅವರಿಗೆ ಬೆಂಬಲ ನೀಡಿದ್ದ ಜೆಡಿಎಸ್, ತನ್ನ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನೂ ಹೊಸಕೋಟೆಯಲ್ಲಿ ನಿಲ್ಲಿಸಲಿಲ್ಲ. ಎಂಟಿಬಿ ಪರವಾಗಿ ಸಿಎಂ ಯಡಿಯೂರಪ್ಪ ಹಾಗೂ ಇನ್ನಿತರೆ ಸಚಿವರುಗಳು ಪ್ರಚಾರ ನಡೆಸಿದ್ದರು. ಕೊನೆಗೆ ಶರತ್ ಅವರು 11,.000ಕ್ಕೂ ಹೆಚ್ಚು ಮತಗಳಿಂದ ಗೆಲವನ್ನು ತಮ್ಮದಾಗಿಸಿಕೊಂಡರು. 

ವಿರೋಧ ಪಕ್ಷಗಳು ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಹಾಯ ಮಾಡಿದವು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸುಮಲತಾ ಅವರಿಗೆ ಬೆಂಬಲ ನೀಡಿತ್ತು. ಈ ಬಾರಿ ಹೊಸಕೋಟೆಯಲ್ಲಿ ಜೆಡಿಎಸ್ ಶರತ್ ಅವರಿಗೆ ಬೆಂಬಲ ನೀಡಿದೆ. ಇಬ್ಬರೂ ನಾಯಕರೂ ಸ್ವಾಭಿಮಾನದ ಹೆಸರಿನಲ್ಲಿ ಮತಯಾಚನೆ ಮಾಡಿದ್ದರು. ಇದು ಇಬ್ಬರೂ ನಾಯಕರಿಗೂ ಕೆಲಸ ಮಾಡಿತು. ಇಬ್ಬರೂ ನಾಯಕರೂ ದೊಡ್ಡ ಸವಾಲನ್ನೇ ಎದುರಿಸಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಸೋಲು ಕಂಡಿದಿದ್ದರೇ ಅವರ ರಾಜಕೀಯ ಜೀವನವೇ ಕೊನೆಯಾಗುತ್ತಿತ್ತು ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT