ರಾಜಕೀಯ

ಕೆಪಿಸಿಸಿ ಅಧ್ಯಕ್ಷಗಾದಿಯ ಮೇಲೆ ಕಣ್ಣಿಟ್ಟ ಕೆ.ಎಚ್. ಮುನಿಯಪ್ಪ

Raghavendra Adiga

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ದಿನೇಶ್‌ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷಗಾದಿಯಿಂದ  ಕೆಳಗಿಳಿಯುತ್ತಿದ್ದಂತೆ ಮೂಲ ಕಾಂಗ್ರೆಸಿಗರ ಬಣ ಈ ಹುದ್ದೆಯತ್ತ ಚಿತ್ತ ಹರಿಸಿದ್ದು, ಮಾಜಿ  ಸಂಸದ ಕೆ.ಎಚ್.ಮುನಿಯಪ್ಪ ಇದರತ್ತ ಕಣ್ಣುಹಾಯಿಸಿದ್ದಾರೆ.

ಬುಧವಾರ ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೈತಿಕ‌ ಹೊಣೆಹೊತ್ತು ಶಾಸಕಾಂಗ  ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷದ ಹಾಗೂ ವೈಯಕ್ತಿಕ ಗೌರವವನ್ನು  ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಸೋಲಿಗೆ ಸಂತಸ  ವ್ಯಕ್ತಪಡಿಸಿದರು‌.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನೆಡೆಸುತ್ತಿರುವ ಗುಟ್ಟು  ಬಿಟ್ಟು ಕೊಟ್ಟ ಅವರು, ಪಕ್ಷದಲ್ಲಿ ಸಾಕಷ್ಟು ಅನುಭವ ಹೊಂದಿರುವ ತಮ್ಮ ಬಗ್ಗೆ ಹೈ  ಕಮಾಂಡ್‌ಗೆ ಎಲ್ಲವೂ ಗೊತ್ತಿದೆ.ಪಕ್ಷದ ಅಧ್ಯಕ್ಷ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ. ಹೈಮಾಂಡ್‌ನ ನಿರ್ಧಾರಕ್ಕೆ ಬದ್ಧ ಎಂದರು.

ಕೋಲಾರದ ಜನರ ಆಶೀರ್ವಾದದಿಂದ ಏಳು ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ, ರಾಜ್ಯ, ಕೇಂದ್ರದಲ್ಲಿ ಹಲವು ಹುದ್ದೆಗಳ ನಿಭಾಯಿಸಿದ ಅನುಭವವಿದೆ. ಕಳೆದ ನಲವತ್ತು ವರ್ಷಗಳ ಅನುಭವ ಪರಿಗಣಿಸಿ ಕೆಪಿಸಿಸಿ ಅಧ್ಯಕ್ಷ ಗಾದಿ ನೀಡಿದ್ದರೆ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಉಪ ಚುನಾವಣೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ಗೆಲುವು ಸಾಧಿಸಿದೆ ಆದರೂ ಜನಾದೇಶಕ್ಕೆ ನಾವು ಬದ್ಧರಾಗಿರಬೇಕು ಎಂದರು

SCROLL FOR NEXT